ಬ್ರೇಕಿಂಗ್ ನ್ಯೂಸ್
25-09-26 07:05 pm HK News Staffer ಕರಾವಳಿ
ಮಂಗಳೂರು , ಸೆ.25: ಬಂಟ್ವಾಳದ ಕೊಳತ್ತಮಜಲು ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಸದ್ರಿ ಪ್ರಕರಣದ ತನಿಖೆಯಲ್ಲಿ ಕೆಲವೊಂದು ಸತ್ಯಾಂಶ ಮತ್ತು ಸನ್ನಿವೇಶಗಳನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನಿಮ್ಮನ್ನು ವಿಚಾರಣೆ ನಡೆಸುವ ಅಗತ್ಯ ಕಂಡುಬಂದಿರುತ್ತದೆ. ಆದ್ದರಿಂದ ಸೆ.26ರಂದು ಪೂರ್ವಾಹ್ನ ನಿಮ್ಮ ಕಲ್ಲಡ್ಕದ ವಾಸ್ತವ್ಯದ ಮನೆಯಲ್ಲಿ ವಿಚಾರಣೆಗೆ ಸಹಕರಿಸುವಂತೆ ತನಿಖಾಧಿಕಾರಿ ಎಸ್ಐ ಕಲೈಮಾರ್ ನೋಟಿಸ್ ನೀಡಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಪೊಲೀಸರು ನೋಟಿಸ್ ನೀಡಿರುವುದಕ್ಕೆ ಹಿಂದು ಸಂಘಟನೆಗಳಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ.
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಹೇರಲಾಗಿದೆ. ಇತ್ತೀಚೆಗೆ ಪ್ರಕರಣದ ಪ್ರಮುಖ ಆರೋಪಿ ಭರತ್ ಕುಮ್ಡೇಲು ಮತ್ತು ಇತರರ ಮೇಲೆ ಹೇರಲಾಗಿದ್ದ ಕೋಕಾ ಕಾಯ್ದೆಯಡಿ ಮೈಸೂರಿನ ಕೋರ್ಟ್ ಜಾಮೀನು ನೀಡಿತ್ತು. ಇದರ ಬೆನ್ನಲ್ಲೇ ಭರತ್ ಕುಮ್ಡೇಲು, ಶಿವಪ್ರಸಾದ್, ಪ್ರದೀಪ್, ಅಭಿನ್ ರೈ, ತೇಜಾಕ್ಷ ಹಾಗೂ ರಂಜಿತ್ ಸೇರಿದಂತೆ ಆರು ಮಂದಿಯ ವಿರುದ್ಧ ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿ ಜೈಲಿನಲ್ಲೇ ಉಳಿಯುವಂತೆ ಮಾಡಲಾಗಿತ್ತು.

ಏನಿದು ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ?
2025ರ ಮೇ 27ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳತ್ತಮಜಲು-ಇರಾಕೋಡಿ ಎಂಬಲ್ಲಿ ಅಬ್ದುಲ್ ರಹಿಮಾನ್ ಮತ್ತು ಅವರ ಸಹಚರ ಕಲಂದರ್ ಶಫಿ ಮೇಲೆ ದಾಳಿ ನಡೆದಿತ್ತು. ಪಿಕಪ್ ವಾಹನದಿಂದ ಮರಳು ಇಳಿಸುತ್ತಿದ್ದ ವೇಳೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು. ಗಂಭೀರ ಗಾಯಗೊಂಡ ಅಬ್ದುಲ್ ರಹಿಮಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಹತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರ ಎನ್ನುವಂತೆ ಅಬ್ದುಲ್ ರಹಿಮಾನ್ ಹತ್ಯೆ ನಡೆಸಲಾಗಿತ್ತು ಎನ್ನುವ ವದಂತಿ ಹರಡಿತ್ತು.
ವಿಎಚ್ಪಿ, ಬಜರಂಗದಳದಿಂದ ಆಕ್ಷೇಪ
ಇದೀಗ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಪೊಲೀಸರು ಆರೆಸ್ಸೆಸ್ ಹಿರಿಯ ಮುಖಂಡ ಪ್ರಭಾಕರ ಭಟ್ ಅವರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಕ್ಕೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಬ್ದುಲ್ ರಹಿಮಾನ್ ಹತ್ಯೆಗೂ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೆ ಪೊಲೀಸರು ಯಾವ ದೃಷ್ಟಿಯಿಂದ ನೋಟಿಸ್ ನೀಡಿದ್ದಾರೆಂದು ತಿಳಿಯಬೇಕು ಎಂದು ಹೇಳಿದ್ದಾರೆ. ಪೊಲೀಸರು ರಾಜಕೀಯ ಪ್ರೇರಣೆಯಿಂದ ಹಿಂದೂ ಸಂಘಟನೆಗಳನ್ನು ಗುರಿಯಾಗಿಸುತ್ತಿದ್ದಾರೆ. ಪ್ರಕರಣದಲ್ಲಿ ಪ್ರಭಾಕರ್ ಭಟ್ ಅವರನ್ನು ಸಿಲುಕಿಸಲು ಪ್ರಯತ್ನಿಸಿದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.
Bantwal Rural Police have issued a notice to RSS leader Kalladka Prabhakar Bhat, directing him to appear for questioning in connection with the murder of Abdul Rahiman of Kolathamajalu, Bantwal.
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
24-09-26 09:42 pm
HK News Staffer
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
25-09-26 07:31 pm
HK News Staffer
ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಬಿಗ್...
25-09-26 07:05 pm
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ಶಶಿಕುಮಾರ್ ನೇ...
24-09-26 10:46 pm
ಬಂಟ್ವಾಳ ; ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಹ...
24-09-26 06:26 pm
ಬಂಗಾಳ ವಾಯುಭಾರ ಕುಸಿತ ; ಕರಾವಳಿ, ಮಲೆನಾಡು, ದಕ್ಷಿಣ...
24-09-26 05:55 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm