ಬ್ರೇಕಿಂಗ್ ನ್ಯೂಸ್
11-09-26 01:56 pm HK News Staffer ಕರಾವಳಿ
ಮಂಗಳೂರು, ಸೆ.11: ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಡಿ ಚುನಾವಣಾ ಆಯೋಗದಿಂದ ನೋಟಿಸ್ ಜಾರಿಯಾಗಿದೆ. ಹೆಸರಿನಲ್ಲಿ ತಪ್ಪಿದೆ ಎಂದು ನೋಟಿಸ್ ನೀಡಿದ್ದು ಸೆ.29ರಂದು ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಆದರೆ ಇಬ್ರಾಹಿಂ ಅವರು ತನಗೆ ನೋಟಿಸ್ ನೀಡಿರುವುದನ್ನು ಆಕ್ಷೇಪಿಸಿ, ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ನರಸಿಂಹರಾಜಪುರ ವಿಧಾನಸಭಾ ಕ್ಷೇತ್ರದ ಮತದಾರರಾಗಿರುವ ಅವರ ಹೆಸರಿನಲ್ಲಿ ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ವ್ಯತ್ಯಾಸ ಸರಿಪಡಿಸಲು ಈ ನೋಟಿಸ್ ನೀಡಲಾಗಿದೆ. ನೋಟಿಸ್ ನಲ್ಲಿ ನಿಮ್ಮ ಹೆಸರು ಹಿಂದೆ ಇರುವ ಮತದಾರ ಪಟ್ಟಿಯಲ್ಲಿ ಬೇರೆ ಇದ್ದು ಈಗ ಕೊಟ್ಟಿರುವುದರಲ್ಲಿ ವ್ಯತ್ಯಾಸ ಇದೆ. ಹೀಗಾಗಿ ಅದನ್ನು ಸಾಬೀತುಪಡಿಸಲು ಇತರೇ ದಾಖಲೆ ಸಹಿತ ಸೂಚಿಸಿದ ದಿನಾಂಕದಂದು ಹಾಜರಾಗಬೇಕು. ಅಥವಾ ಸ್ಥಳೀಯ ಬಿಎಲ್ಓ ಅವರನ್ನು ಸಂಪರ್ಕಿಸಬಹುದೆಂದು ಅವರ ನಂಬರ್ ಕೊಡಲಾಗಿದೆ.
ನಿವೃತ್ತ ಅಧಿಕಾರಿ ಮತ್ತು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ತನಗೆ ನೋಟಿಸ್ ನೀಡಿರುವುದಕ್ಕೆ ಎ.ಬಿ. ಇಬ್ರಾಹಿಂ ಅವರು ತೀವ್ರ ಅಸಮಾಧಾನ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ನೀಡುತ್ತಿರುವ ಎಸ್‌ಐಆರ್ (SIR) ನೋಟಿಸ್‌ನಲ್ಲಿರುವ ಕೆಲವು ಕಠಿಣ ಸೂಚನೆಗಳು ಮತ್ತು "ತಪ್ಪು ಮಾಹಿತಿ ನೀಡಿದರೆ ಜೈಲು ಶಿಕ್ಷೆ ವಿಧಿಸಲಾಗುವುದು" ಎಂಬಂತಹ ಎಚ್ಚರಿಕೆಗಳು ಸಾಮಾನ್ಯ ಜನರಲ್ಲಿ ಅನಗತ್ಯ ಭಯದ ವಾತಾವರಣ ಸೃಷ್ಟಿಸುತ್ತವೆ ಎಂದು ಅವರು ಹೇಳಿದ್ದಾರೆ. ನೋಟಿಸಿನ ಎರಡನೇ ಪುಟದಲ್ಲಿ ಸಾಮಾನ್ಯ ಸೂಚನೆ ಎನ್ನುವಂತೆ ಮತದಾರ ಪಟ್ಟಿಗೆ ತಪ್ಪು ಮಾಹಿತಿಗಳನ್ನು ಕೊಟ್ಟರೆ ಶಿಕ್ಷೆಗೆ ಗುರಿಯಾಗುತ್ತೀರಿ ಎನ್ನುವ ಎಚ್ಚರಿಕೆ ನೀಡಲಾಗಿದೆ.
ಚುನಾವಣಾ ಅಧಿಕಾರಿಯಾಗಿದ್ದವರಿಗೇ ನೋಟಿಸ್
ತಾವೇ ಸ್ವತಃ ಈ ಹಿಂದೆ 2013-16ರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ಹಲವು ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದರೂ, ವ್ಯವಸ್ಥೆಯ ತಾಂತ್ರಿಕ ದೋಷಗಳಿಂದಾಗಿ ತಮಗೇ ಈ ರೀತಿಯ ನೋಟಿಸ್ ಬಂದಿರುವುದು ಸಾರ್ವಜನಿಕ ವ್ಯವಸ್ಥೆಯ ಲೋಪವನ್ನು ತೋರಿಸುತ್ತದೆ ಎಂದು ಅವರು ಆಕ್ಷೇಪಿಸಿದ್ದಾರೆ. 30 ವರ್ಷಗಳ ಕಾಲ ಸಾರ್ವಜನಿಕ ಸೇವೆಯಲ್ಲಿದ್ದ ತನಗೇ ನೋಟಿಸ್ ನೀಡಿದ್ದಾರೆ. ಇನ್ನು ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿದ್ದಾರೆ.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೂ ಹೆಸರಿನ ವ್ಯತ್ಯಾಸದ ಕಾರಣಕ್ಕೆ ಇತ್ತೀಚೆಗೆ ಎಸ್ಐಆರ್ ನೋಟಿಸ್ ನೀಡಿ, ಅನಂತರ ಸುದ್ದಿಯಾಗುತ್ತಿದ್ದಂತೆ ಅದನ್ನು ಹಿಪಡೆಯಲಾಗಿತ್ತು.
11-09-26 02:59 pm
HK News Staffer
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
ಹೆಸರಿನಲ್ಲಿ ತಪ್ಪಿದೆ ಎಂದು ದಕ್ಷಿಣ ಕನ್ನಡ ಮಾಜಿ ಜಿಲ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm