Mangalore Jail Raid: ಮಂಗಳೂರು ಜೈಲಿಗೆ ತಡರಾತ್ರಿ ಪೊಲೀಸ್ ದಾಳಿ ; ಎಂಟಕ್ಕೂ ಹೆಚ್ಚು ಮೊಬೈಲ್ ವಶಕ್ಕೆ

08-09-26 09:50 am       HK News Staffer   ಕರಾವಳಿ

ನಗರದ ಕೊಡಿಯಾಲ್ ಬೈಲಿನ ಉಪ ಕಾರಾಗೃಹಕ್ಕೆ ತಡರಾತ್ರಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ಮಂಗಳೂರು, ಸೆ.8: ನಗರದ ಕೊಡಿಯಾಲ್ ಬೈಲಿನ ಉಪ ಕಾರಾಗೃಹಕ್ಕೆ ತಡರಾತ್ರಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. 

ದಿಢೀರ್ ಜೈಲಿಗೆ ದಾಳಿ ನಡೆಸಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಜೈಲಿನ ಎ ಹಾಗೂ ಬಿ ಬ್ಯಾರಕ್ ನಲ್ಲಿ ಶೋಧ ನಡೆಸಿದ್ದು ಈ ಅಡಗಿಸಿಟ್ಟಿದ್ದ ಎಂಟಕ್ಕೂ ಹೆಚ್ಚು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಹಿರಿಯ ಪೊಲೀಸ್  ಅಧಿಕಾರಿಗಳೇ ಖುದ್ದಾಗಿ ದಾಳಿ ನಡೆಸಿರುವುದರಿಂದ ಖಚಿತ ಮಾಹಿತಿಯಲ್ಲೇ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ. 

ಬೆಂಗಳೂರಿನ ಜೈಲಿನಲ್ಲಿ ಕೈದಿಗಳು ರಾಜಾರೋಷವಾಗಿ ಮೊಬೈಲ್ ಬಳಸುತ್ತಿರುವುದು, ಬೇಕಾಬಿಟ್ಟಿ ವರ್ತಿಸುವುದು ಇತ್ತೀಚೆಗೆ ಪತ್ತೆಯಾಗಿದ್ದರಿಂದ ಆಗಿಂದಾಗ್ಗೆ ಪೊಲೀಸರು ಪರಿಶೀಲನೆ ನಡೆಸುವಂತೆ ಸೂಚಿಸಲಾಗಿತ್ತು. ಕೈದಿ ಪ್ರಜ್ವಲ್ ರೇವಣ್ಣ ಮೊಬೈಲ್ ವಾಟ್ಸಪ್ ಕರೆ ಮಾಡುತ್ತಿದ್ದುದು ಪೊಲೀಸ್ ಇಲಾಖೆಯನ್ನು ಮುಜುಗರಕ್ಕೀಡು ಮಾಡಿತ್ತು.