ಬ್ರೇಕಿಂಗ್ ನ್ಯೂಸ್
21-05-26 05:52 pm HK News Staffer ಕರಾವಳಿ
ಮಂಗಳೂರು, ಮೇ 21 : ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ಲ್ಯಾಂಡ್ ಲಿಂಕ್ಸ್ ಗೆ 45 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರಮುಖ ನಾಲ್ಕು ಕಡೆಗಳಲ್ಲಿ ಏಕಕಾಲದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಭವ್ಯ ಸಭಾಂಗಣಗಳನ್ನು ನಿರ್ಮಿಸಲಾಗಿದ್ದು ಮೇ 23ರಂದು ಬೆಳಗ್ಗೆ ಹತ್ತು ಗಂಟೆಗೆ ಮೇರಿಹಿಲ್ ನಲ್ಲಿ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಆಂಧ್ರಪ್ರದೇಶದ ರಾಜ್ಯಪಾಲ ಜ। ಎಸ್. ಅಬ್ದುಲ್ ನಜೀರ್ ನಾಲ್ಕು ಸಭಾಭವನಗಳನ್ನು ಅಧಿಕೃತ ಲೋಕಾರ್ಪಣೆ ಮಾಡಲಿದ್ದಾರೆ.
ಸಮಾರಂಭದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ, ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ. ಭರತ್ ಶೆಟ್ಟಿ, ಡಿ. ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಐವನ್ ಡಿಸೋಜ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆಂದು ಲ್ಯಾಂಡ್ ಲಿಂಕ್ಸ್ ಸಂಸ್ಥೆಯ ಮುಖ್ಯಸ್ಥ, ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಜನರಿಗೆ ಕೈಗೆಟುಕುವ ದರದಲ್ಲಿ ಅತ್ಯುನ್ನತ ಸೌಲಭ್ಯಗಳ ಸಭಾಂಗಣಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ವಿವಾಹ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು, ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳು, ಉದ್ಯೋಗ ಮೇಳಗಳು, ವಸ್ತು ಪ್ರದರ್ಶನಗಳು, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಮಹಿಳಾ ಸಬಲೀಕರಣದಂತಹ ಸಮಾಜಮುಖಿ ಚಟುವಟಿಕೆಗಳಿಗೆ ಮುಕ್ತವಾಗಿರಲಿವೆ.
ಸಾಮಾಜಿಕ ಬದ್ಧತೆ ಕಾರ್ಯಗಳಿಗೆ ಉಚಿತ ಸೇವೆ
ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಜಾತಿ, ಧರ್ಮ, ಬಡವ-ಬಲ್ಲಿದ ಎಂಬ ಯಾವುದೇ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಸಾಮಾಜಿಕ ಬದ್ಧತೆಯ ಭಾಗವಾಗಿ, ಸಮಾಜದ ಒಳಿತಿಗಾಗಿ ಆಯೋಜಿಸುವ ಸಾಮೂಹಿಕ ವಿವಾಹಗಳು ಹಾಗೂ ಸದುದ್ದೇಶದ ಉದಾತ್ತ ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ಎಲ್ಲಾ ಸಭಾಂಗಣಗಳನ್ನು ನಿಯಮಾನುಸಾರವಾಗಿ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಪಾಲೆಮಾರ್ ತಿಳಿಸಿದ್ದಾರೆ. ಸಮಾರಂಭದ ವಿಶೇಷ ಆಕರ್ಷಣೆಯಾಗಿ, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿರುವ ವಿಕಾಸ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಸಾಧಕರನ್ನು ಗೌರವಿಸಲಾಗುವುದು ಎಂದರು.





ಪಾಲೆಮಾರ್ ಕನ್ವೆನ್ಸನ್ ಸೆಂಟರ್, ಮೇರಿಹಿಲ್
ಅದ್ದೂರಿತನ ಮತ್ತು ಸಾಂಪ್ರದಾಯಿಕತೆಯ ಅದ್ಭುತ ಸಮ್ಮಿಲನವೇ ಮೇರಿಹಿಲ್ನಲ್ಲಿರುವ ಪಾಲೆಮಾರ್ ಕನ್ವೆನ್ಸನ್ ಸೆಂಟರ್. ಭವ್ಯ ಒಳಾಂಗಣ ವಿನ್ಯಾಸ ಆಕರ್ಷಣೆಯಾಗಿದ್ದು ಸಾಂಪ್ರದಾಯಿಕ ಮದುವೆ ಸಮಾರಂಭಗಳ ಜೊತೆಗೆ ಕಾರ್ಪೊರೇಟ್ ಶೈಲಿಯ ಹೈ-ಟೆಕ್ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತವಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಒಳಾಂಗಣ ಸಭಾಂಗಣ, ವಿಶಾಲವಾದ ಅತಿಥಿ ಕೊಠಡಿಗಳು, ಪ್ರತ್ಯೇಕ ಪ್ರಾರ್ಥನಾ ಮಂದಿರ ಹಾಗೂ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇದೆ.
ಪಾಲೆಮಾರ್ ಗಾರ್ಡನ್, ಮೋರ್ಗನ್ಸ್ ಗೇಟ್
ಮಂಗಳೂರು ನಗರದ ಹೃದಯಭಾಗ ಮೋರ್ಗನ್ಸ್ ಗೇಟ್ನಲ್ಲಿ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವಂತೆ ಭವ್ಯ ಗಾರ್ಡನ್ ನಿರ್ಮಿಸಲಾಗಿದೆ. ಅತ್ಯಾಕರ್ಷಕ ವಿನ್ಯಾಸ, ವೈಭವದ ಒಳಾಂಗಣ ಸಭಾಂಗಣ, ತೆರೆದ ಸಭಾಂಗಣ, ಸಾಂಪ್ರದಾಯಿಕ ಕಾಟೇಜ್ಗಳು ಮತ್ತು ವಿಶಾಲವಾದ ರೂಮ್ಗಳು, ಸುಂದರವಾದ ಹೊರಾಂಗಣ ಈಜುಕೊಳ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮತ್ತು ಬೃಹತ್ ಹಸಿರು ಮೈದಾನ ಇದೆ.
ಪಾಲೆಮಾರ್ ಫಾರ್ಮ್ಸ್, ಸುರತ್ಕಲ್
ಮಂಗಳೂರು ನಗರ ಹೊರವಲಯದ ಸುರತ್ಕಲ್ ಸಮೀಪ 20 ಎಕರೆ ವಿಶಾಲವಾದ ಜಾಗದಲ್ಲಿ ಈ ಫಾರ್ಮ್ಸ್ ಸಿದ್ದಗೊಂಡಿದೆ. ಮದುವೆ, ಹೊರಾಂಗಣ ಕಾರ್ಯಕ್ರಮಗಳು, ಬರ್ತ್ ಡೇ ಪಾರ್ಟಿಗಳು, ಮೆಹಂದಿ ಹಾಗೂ ಕೌಟುಂಬಿಕ ಸಮಾರಂಭಗಳಿಗೆ ಇದು ಸೂಕ್ತ ತಾಣ. ವಿಶಾಲವಾದ ತೆರೆದ ಸಭಾಂಗಣ, ಈಜುಕೊಳ, ಸುಸಜ್ಜಿತ ಮಕ್ಕಳ ಆಟದ ಪ್ರದೇಶ ಮತ್ತು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ.
ನೇತ್ರಾವತಿ ಸಭಾಭವನ, ಕಡೆಕಾರ್, ಜೆಪ್ಪಿನಮೊಗರು
ಮಂಗಳೂರಿನ ಜೀವನಾಡಿ ನೇತ್ರಾವತಿ ನದಿಯ ದಡದಲ್ಲಿರುವ ಜೆಪ್ಪಿನಮೊಗರಿನ ಕಡೆಕಾರ್ ನಲ್ಲಿ ಸಭಾಂಗಣ ತಲೆಯೆತ್ತಿದೆ. ಒಂದು ಬದಿಯಲ್ಲಿ ನದಿ, ಇನ್ನೊಂದು ಬದಿಯಲ್ಲಿ ಪುರಾತನ ದೇವಸ್ಥಾನವಿದ್ದು, ಇಡೀ ಪರಿಸರಕ್ಕೆ ದೈವಿಕ ಕಳೆಯನ್ನು ನೀಡುತ್ತದೆ. ವಿವಾಹ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಸಂಗೀತ ಕಛೇರಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅತ್ಯಂತ ಪ್ರಶಸ್ತವಾಗಿದೆ. ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಇದನ್ನು ನಿರ್ಮಿಸಲಾಗಿದೆ. ವಿಶಾಲ ಸಭಾಂಗಣ, ಅಚ್ಚುಕಟ್ಟಾದ ಊಟದ ಹಾಲ್ ಮತ್ತು ಅಡುಗೆ ಮನೆ. (ಗಮನಿಸಿ: ಇಲ್ಲಿ ಶುದ್ಧ ಸಸ್ಯಾಹಾರಿ ಆಹಾರ ತಯಾರಿಕೆಗೆ ಮಾತ್ರ ಅವಕಾಶವಿದ್ದು, ಸಾತ್ವಿಕ ವಾತಾವರಣ ಬಯಸುವವರ ನೆಚ್ಚಿನ ತಾಣವಾಗಲಿದೆ).
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am