ಬ್ರೇಕಿಂಗ್ ನ್ಯೂಸ್
25-03-26 03:49 pm HK News Staffer ಕರಾವಳಿ
ಮಂಗಳೂರು, ಮಾರ್ಚ್ 25: ಕರಾವಳಿಯ ಪ್ರಮುಖ ಸಂಚಾರ ಸಂಪರ್ಕ ಕೊಂಡಿಯಾದ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ-ಕುಂದಾಪುರ ವಿಭಾಗದಲ್ಲಿ ಮೂರು ಟೋಲ್ ಪ್ಲಾಜಾಗಳಿದ್ದು ಈಗ ಪರಿಸರ ಸ್ನೇಹಿ ಸೋಲಾರ್ ಉತ್ಪಾದನೆಗೆ ಮುಂದಾಗಿವೆ. ಪ್ಲಾಜಾಗಳ ಮೇಲ್ಛಾವಣಿಯಲ್ಲಿ ಅಳವಡಿಸಿರುವ ಸೌರ ಫಲಕಗಳು ಸರಾಸರಿ ದಿನಕ್ಕೆ 521 ಯೂನಿಟ್ ವಿದ್ಯುತ್ ಉತ್ಪಾದಿಸುವ ಮೂಲಕ ಗಮನ ಸೆಳೆಯುತ್ತಿವೆ.
ನವಯುಗ ಉಡುಪಿ ಟೋಲ್ ವೇ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಿರ್ವಹಿಸಲ್ಪಡುವ ಈ ಮೂರು ಟೋಲ್ ಪ್ಲಾಜಾಗಳಲ್ಲಿ ಸೌರಶಕ್ತಿ ಘಟಕಗಳನ್ನು ಅಳವಡಿಸಲಾಗಿದೆ. ಹೆಜಮಾಡಿ, ಗುಂಡ್ಮಿ (ಶಾಸ್ತಾನ) ಮತ್ತು ಕೇರಳದ ಗಡಿಭಾಗ ತಲಪಾಡಿಯಲ್ಲಿ ಟೋಲ್ ಪ್ಲಾಜಾ ಇದೆ. ಪ್ರತಿ ಟೋಲ್ ಪ್ಲಾಜಾದ ಮೇಲ್ಛಾವಣಿಯಲ್ಲಿ ಸುಮಾರು 50 ಕಿಲೋ ವ್ಯಾಟ್ (kWp) ಸಾಮರ್ಥ್ಯದ ಸೌರ ಘಟಕಗಳನ್ನು ಅಳವಡಿಸಲಾಗಿದೆ. ಮೂರು ಘಟಕಗಳಿಂದ ಒಟ್ಟಾರೆಯಾಗಿ ತಿಂಗಳಿಗೆ ಸರಾಸರಿ 15,600 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಟೋಲ್ ಪ್ಲಾಜಾದಲ್ಲಿನ ಬೂತ್ಗಳ ವಿದ್ಯುತ್ ದೀಪಗಳು, ಕಂಪ್ಯೂಟರ್ಗಳು, ಸರ್ವರ್ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳ ಕಾರ್ಯನಿರ್ವಹಣೆಗೆ ಈ ಸೌರ ವಿದ್ಯುತ್ ಅನ್ನೇ ಬಳಸಲಾಗುತ್ತಿದೆ. ಹಗಲಿನ ವೇಳೆ ಉತ್ಪಾದನೆಯಾಗಿ ಉಳಿಯುವ ಹೆಚ್ಚುವರಿ ವಿದ್ಯುತ್ ಅನ್ನು ಮೆಸ್ಕಾಂ ಗ್ರಿಡ್ಗೆ 'ನೆಟ್ ಮೀಟರಿಂಗ್' ವ್ಯವಸ್ಥೆಯ ಮೂಲಕ ವರ್ಗಾಯಿಸಲಾಗುತ್ತದೆ.
ಸೋಲಾರ್ ವ್ಯವಸ್ಥೆಯಿಂದಾಗಿ ಟೋಲ್ ಪ್ಲಾಜಾದಲ್ಲಿ ಮಾಸಿಕ ವಿದ್ಯುತ್ ಬಿಲ್ನಲ್ಲಿ ಗಣನೀಯ ಇಳಿಕೆಯಾಗಿದೆ. ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ನವೀಕರಿಸಬಹುದಾದ ಇಂಧನವನ್ನು ಬಳಸುವ ಮೂಲಕ ಇಂಗಾಲದ ಹೊರ ಸೂಸುವಿಕೆಯನ್ನು ತಗ್ಗಿಸಲು ಇದು ನೆರವಾಗಿದೆ. ಮೆಸ್ಕಾಂ ಗ್ರಿಡ್ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾದಾಗಲೂ ಬ್ಯಾಟರಿ ಮತ್ತು ಸೌರಶಕ್ತಿಯ ಬ್ಯಾಕ್-ಅಪ್ ಇರುವುದರಿಂದ ಟೋಲ್ ಪ್ರಕ್ರಿಯೆಯಲ್ಲಿ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತಿದೆ.
ಸೋಲಾರ್ ವಿದ್ಯುತ್ ನಿಂದಾಗಿ ಮೂರು ಪ್ಲಾಜಾಗಳಲ್ಲಿ ಮೆಸ್ಕಾಂ ಅವಂಲಬಿಸದೆ ಪ್ರಕ್ರಿಯೆ ನಡೆಯುವುದಲ್ಲದೆ, ವಾರ್ಷಿಕ 1,87,632 ಯುನಿಟ್ ವಿದ್ಯುತ್ ಉಳಿತಾಯವಾಗುತ್ತದೆ. ಆಮೂಲಕ ಪ್ರತಿ ವರ್ಷದ ವಿದ್ಯುತ್ ಬಿಲ್ ಅಂದಾಜು 20 ಲಕ್ಷ ಮೊತ್ತವೂ ಉಳಿಕೆಯಾಗಿದೆ. ದಿನಕ್ಕೆ 521 ಯುನಿಟ್ ನಂತೆ ತಿಂಗಳಿಗೆ 15,636 ಯುನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರೊಂದಿಗೆ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ 10 ಕೆವಿ ಸಾಮರ್ಥ್ಯದ ಪವನ್ ವಿದ್ಯುತ್ ಉತ್ಪಾದನಾ ಯಂತ್ರವನ್ನೂ ಅಳವಡಿಸಲಾಗಿದ್ದು ಮತ್ತಷ್ಟು ವಿದ್ಯುತ್ ಜನರೇಟ್ ಆಗುತ್ತಿದೆ. ಕರಾವಳಿಯಲ್ಲಿ ಅತಿ ಹೆಚ್ಚು ಬಿಸಿಲು ಮತ್ತು ಗಾಳಿ ಇರುವುದರಿಂದ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನಗೆ ದೊಡ್ಡ ಕೊಡುಗೆಯಾಗಿದೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am