ಬ್ರೇಕಿಂಗ್ ನ್ಯೂಸ್
11-02-26 06:00 pm Mangalore Correspondent ಕರಾವಳಿ
ಮಂಗಳೂರು, ಫೆ.11 : ಮಂಗಳೂರಿನ ಸ್ವಸ್ತಿಕಾ ಇಂಟರ್ನ್ಯಾಶನಲ್ ಬಿಸಿನೆಸ್ ಸ್ಕೂಲ್ ರಾಜ್ಯದ ಮೊದಲ ಎಐ ಎನೇಬಲ್ಡ್ ಕ್ಯಾಂಪಸ್ ಎಂಬ ಹೆಗ್ಗಳಿಕೆಯನ್ನ ಪಡೆದಿದೆ. ಕಾಲೇಜಿನ ವಿದ್ಯಾರ್ಥಿಗಳು ಎಐ ಟೆಕ್ನಾಲಜಿ ಬಳಸಿ ಕೆಲವೇ ಕ್ಷಣಗಳಲ್ಲಿ ಕೃತಕ ಟೂಲ್ಸ್ ಕ್ರಿಯೇಟ್ ಮಾಡುವುದನ್ನು ಕಲಿತುಕೊಂಡಿದ್ದಾರೆ.
ಸ್ವಸ್ತಿಕ್ ಕಾಲೇಜಿನ ವಿದ್ಯಾರ್ಥಿಗಳು ತಾವಾಗಿಯೇ ಎಐ ಟೂಲ್ಸ್ ಗಳನ್ನು ರೆಡಿ ಮಾಡುತ್ತಿದ್ದಾರೆ. ಫ್ಲಿಪ್ ಕಾರ್ಟ್ ರೀತಿಯ ಆನ್ಲೈನ್ ವೆಬ್ ತಾಣಗಳನ್ನು ಸೃಷ್ಟಿಸುತ್ತಿದ್ದಾರೆ. ಎಐ ಕಾರ್ಡ್ ಬಳಸಿಕೊಂಡು ಅತಿ ಕಡಿಮೆ ಖರ್ಚಿನಲ್ಲಿ ತಮ್ಮನ್ನೇ ಬೂಸ್ಟ್ ಮಾಡುತ್ತಿದ್ದಾರೆ. ಕೇವಲ ಒಂದು ಪಿಜ್ಜಾ, ಬರ್ಗರ್ ಗೆ ಮಾಡೋ ಖರ್ಚಿನಲ್ಲಿ ತಮ್ಮ ಭವಿಷ್ಯವನ್ನೇ ರೂಪಿಸಬಲ್ಲ ಎಐ ಟೆಕ್ನಾಲಜಿಯನ್ನು ತಿಳಿದುಕೊಂಡಿದ್ದಾರೆ.
ಇಷ್ಟು ಸುಲಭದಲ್ಲಿ ವೆಬ್ ಸೈಟ್ ಕ್ರಿಯೇಟ್ ಮಾಡೋಕೆ, ಕಂಟೆಂಟ್ ಸೃಷ್ಟಿಸಲು ಆಗುತ್ತೆ ಎಂದುಕೊಂಡಿರಲಿಲ್ಲ. ಎಐ ಅಂದ್ರೆ ಅದೇನೋ ಮಿಸ್ ಯೂಸ್ ಮಾಡೋಕೆ ಬಳಸುತ್ತಾರೆ ಅನ್ಕೊಂಡಿದ್ದೆವು. ಎಐ ಬಳಸಿ ಸಾಂಗ್ ಕ್ರಿಯೇಟ್ ಮಾಡಿದ್ದು ನೋಡಿದರೆ ಎಲ್ಲಿಯೋ ಸ್ಟುಡಿಯೋದಲ್ಲಿ ಕುಳಿತೇ ಮಾಡಿದ್ದು ಅನ್ನುವ ರೀತಿ ಫೀಲ್ ಆಗತ್ತೆ ಎಂದು ಅಲ್ಲಿನ ವಿದ್ಯಾರ್ಥಿಗಳು ಹೇಳುತ್ತಾರೆ.
ಸಾಂಗ್ ಕ್ರಿಯೇಶನ್, ವಿಡಿಯೋ, ಫೋಟೋ ಇಮೇಜ್ ಸೃಷ್ಟಿಸುವುದು, ವಿಡಿಯೋ ಎಡಿಟಿಂಗ್, ವಿಶ್ವಲ್ ಆರ್ಟ್ ರಚಿಸುವುದಕ್ಕೆ ಟೂಲ್ಸ್ ರೆಡಿ ಮಾಡಬಹುದು. ಮೀಟಿಂಗ್ ಇದ್ದರೆ ಅದರ ಪಾಯಿಂಟ್ ಮಾಡಿಕೊಳ್ಳುವುದಕ್ಕೂ ಪ್ರತ್ಯೇಕ ಏಪ್ಸ್ ರೆಡಿ ಮಾಡಿಕೊಳ್ಳಬಹುದು. ದೊಡ್ಡ ಪಿಡಿಎಫ್ ಫೈಲ್ ಇದ್ದರೆ ಅದರಿಂದ ಸಾರಾಂಶ ಪಡೆಯಲು ಎಐ ಟೂಲ್ಸ್ ಇದೆ, ಎಕ್ಸೆಲ್ ಫೈಲ್ ಇದ್ದರೆ ಅದರಿಂದ ಕ್ಷಣಾರ್ಧದಲ್ಲಿ ಮಾಹಿತಿ ಸಂಗ್ರಹಿಸುವುದು ಇತ್ಯಾದಿ ಹತ್ತು ಹಲವು ಕ್ಷೇತ್ರಗಳಲ್ಲಿ ಕಠಿಣ ಕೆಲಸಗಳನ್ನು ಅತ್ಯಂತ ಸುಲಭ ಮಾಡಿಕೊಳ್ಳಲು ಎಐನಿಂದ ಸಾಧ್ಯವಿದೆ.
ಈ ಕಾರಣದಿಂದ ಎಐ ಕಾರ್ಡ್ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಭವಿಷ್ಯ ರೂಪಿಸುವುದಲ್ಲ, ಶಾಲೆಗಳಲ್ಲಿ ಶಿಕ್ಷಕಿಯರು, ಕಾಲೇಜು ಉಪನ್ಯಾಸಕರು, ವಕೀಲರು, ಪತ್ರಕರ್ತರು, ಐಟಿ ವೃತ್ತಿಪರರು, ಎಕ್ಸಿಕ್ಯುಟಿವ್ ಗಳು, ಚಾರ್ಟೆಡ್ ಅಕೌಂಟೆಂಟ್, ವಿಡಿಯೋ- ಕಂಟೆಂಟ್ ಕ್ರಿಯೇಟರ್ಸ್, ಬ್ಯಾಂಕರುಗಳು ಹೀಗೆ ಯಾವುದೇ ಕ್ಷೇತ್ರದಲ್ಲಿದ್ದರೂ, ಎಐ ಟೂಲ್ಸ್ ಬಳಸಿ ತಮ್ಮ ಕೆಲಸವನ್ನು ಮತ್ತಷ್ಟು ಸುಲಭ ಮಾಡಿಕೊಳ್ಳಬಹುದು. ಅಂತ್ರೋಪಿಕ್ ಎನ್ನುವ ಎಐ ಟೂಲ್ಸ್ ಸೃಷ್ಟಿಸಿ ಅಮೆರಿಕ ಸೇರಿ ಇಡೀ ಜಗತ್ತಿನಲ್ಲಿ ಷೇರು ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲ ಮಾಡಿದ್ದನ್ನು ನಾವು ನೋಡಿದ್ದೇವೆ. ಈ ಕೆಲಸವನ್ನು ಬೆಂಗಳೂರಿನಲ್ಲಿ ಕುಳಿತು ರಾಹುಲ್ ಪಾಟೀಲ್ ಎಂಬವರು ಮಾಡಿದ್ದಾರೆ. ಇದಕ್ಕೆ ಬಳಸಿಕೊಂಡಿದ್ದು ಒಂದ್ರೂಪಾಯಿ ಖರ್ಚೂ ಇಲ್ಲದ ಕೇವಲ ತನ್ನದೇ ಬುದ್ಧಿಮತ್ತೆಯನ್ನು ಮಾತ್ರ ಅನ್ನೋದು ಸತ್ಯ.
ಈಗಿನ ಕಾಲದಲ್ಲಿ ಮೊಬೈಲ್ ಇದ್ದರಷ್ಟೇ ಸಾಲದು, ಎಐ ಗೊತ್ತಿದೆಯಾ ಎನ್ನುವ ಪ್ರಶ್ನೆ ಕೇಳ್ತಾರೆ. ಯಾಕಂದ್ರೆ, ಎಐ ಕೂಡ ನಮ್ಮ ಜೀವನದ ಭಾಗ ಎನ್ನುವಷ್ಟರ ಮಟ್ಟಿಗೆ ಜೊತೆ ಜೊತೆಗೆ ಬೆಳೆಯುತ್ತಿದೆ. ಭಾರತದಲ್ಲಿ ಎಐ ತಂತ್ರಜ್ಞಾನದ ಬಗ್ಗೆ ಮೊದಲ ಬಾರಿಗೆ ಎಐ ಕಾರ್ಡ್ ಅಭಿವೃದ್ಧಿ ಪಡಿಸಿರುವ ಯತಿಕಾರ್ಪ್ ಇಂಡಿಯಾ ಸಂಸ್ಥೆಯು ಎಐ ಕಾರ್ಡ್ ಜೊತೆಗೆ, 50ಕ್ಕೂ ಹೆಚ್ಚು ಟೂಲ್ಸ್ ಬಳಕೆ ಬಗ್ಗೆಯೂ ಹೇಳಿಕೊಡುತ್ತಿದೆ. ಆಧುನಿಕ ಕೃಷಿ ಮಾದರಿಗೂ ಎಐ ತಂತ್ರಜ್ಞಾನ ಬಳಸಿಕೊಳ್ಳಬಹುದಾಗಿದೆ.
ಟೆಕ್ನಾಲಜಿ ಬಗ್ಗೆ ತಿಳಿಯದ ಜನಸಾಮಾನ್ಯರು ಕೂಡ ತಮ್ಮ ಕೆಲಸದಲ್ಲಿ ಹೊಸತನ ತರುವುದಕ್ಕಾಗಿ ಎಐ ಬಳಸಿಕೊಳ್ಳಬಹುದು. ಇದಕ್ಕಾಗಿ ಮೊಬೈಲ್ ಟೆಕ್ನಾಲಜಿ ಬಗ್ಗೆ ಅಥವಾ ಇನ್ನಾವುದೇ ಕಂಪ್ಯೂಟರ್ ಸೈನ್ಸ್ ಓದಿರಬೇಕಾಗಿಲ್ಲ. ಎಐ ಕಾರ್ಡ್ ಒಂದನ್ನೇ ಬಳಸಿ ಮೊಬೈಲ್ ಅಥವಾ ಲ್ಯಾಪ್ ಟಾಪ್ ಮೂಲಕ ನೂರಾರು ಟೂಲ್ಸ್ ಗಳನ್ನು ಸೃಷ್ಟಿ ಮಾಡಿಕೊಳ್ಳಬಹುದು. ಕುಳಿತಲ್ಲೇ ವೆಬ್ ಸೈಟ್, ಚಾಟ್ ಜಿಪಿಟಿಯಂಥ ಮತ್ತೊಂದನ್ನು ರೆಡಿ ಮಾಡಿಕೊಳ್ಳಬಹುದು. ಐಟಿ ಕಂಪನಿಗಳು ದುಬಾರಿ ಬೆಲೆ ತೆತ್ತು ತಮ್ಮ ಉದ್ಯೋಗಿಗಳಿಗೆ ವಿದೇಶಿ ಸಂಸ್ಥೆಗಳಿಂದ ಎಐ ಕಲಿಸುತ್ತಿದ್ದರೆ, ಕರ್ನಾಟಕದ್ದೇ ಆದ ಯತಿಕಾರ್ಪ್ ಇಂಡಿಯಾ ಸಂಸ್ಥೆಯು ಅತಿ ಕಡಿಮೆ ಖರ್ಚಿನಲ್ಲಿ ಎಐ ತರಬೇತಿ ನೀಡುತ್ತಿದೆ.
Swastika International Business School in Mangaluru has emerged as Karnataka’s first AI-enabled campus, with students learning to use over 50 AI tools at minimal cost. From website creation and content generation to music, video production, and data analysis, students are actively integrating AI into practical applications. In collaboration with Yaticorp India, the initiative aims to make AI technology accessible and affordable for learners across various fields.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am