ಬ್ರೇಕಿಂಗ್ ನ್ಯೂಸ್
06-02-26 09:01 pm Mangalore Correspondent ಕರಾವಳಿ
ಮಂಗಳೂರು, ಫೆ.6 : ಧರ್ಮಸ್ಥಳಕ್ಕೆ ತೆರಳಿದ್ದ ವ್ಯಕ್ತಿಯೊಬ್ಬ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಲ್ಲಿ ನೀವು ಇದೇ ಶಿವರಾತ್ರಿಗೆ ನಿಮ್ಮ ಪಟ್ಟವನ್ನು ಬಿಟ್ಟುಕೊಡಬೇಕು ಎಂದು ಹೇಳಿ ಆವಾಜ್ ಹಾಕಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ವಾಟ್ಸಪ್ ಮತ್ತು ಇನ್ ಸ್ಟಾ ಗ್ರಾಮಿನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೂ ಕಾರಣವಾಗಿದೆ. ವ್ಯಕ್ತಿಯೊಬ್ಬ ವೀರೇಂದ್ರ ಹೆಗ್ಗಡೆಯವರ ಬೂಡಿನ ಮನೆಯ ಒಳಗಡೆ ಇತರೇ ಭಕ್ತರಂತೆ ಸರದಿಯಲ್ಲಿ ಹೋಗಿದ್ದು ಈ ವೇಳೆ ತನ್ನಲ್ಲಿರುವ ಮೊಬೈಲ್ ಕ್ಯಾಮರಾವನ್ನು ರೆಕಾರ್ಡ್ ನಲ್ಲಿ ಇಟ್ಟಿದ್ದು ಕಂಡುಬರುತ್ತದೆ. ಆನಂತರ ತನ್ನ ಸರದಿ ಬಂದಾಗ, ಹೆಗ್ಗಡೆಯವರನ್ನು ಕುರಿತಾಗಿ ನೇರ ಪ್ರಶ್ನೆ ಮಾಡಿದ್ದಾನೆ.

ಈ ಕ್ಷೇತ್ರದಲ್ಲಿ ಧರ್ಮ ಇದೆಯೆಂದು ನೀವು ಹೇಳುತ್ತೀರಾ ಎಂದು ಪ್ರಶ್ನೆ ಮಾಡಿರುವ ಆ ವ್ಯಕ್ತಿ, ಆನಂತರ ಹತ್ತು ವರ್ಷಗಳ ಹಿಂದೂ ಇಲ್ಲಿಗೆ ಬಂದು ಪ್ರಶ್ನಿಸಿದ್ದೆ. ನಿಮಗೆ ನೆನಪಿದೆಯಾ ಎಂದು ಕೇಳುತ್ತಾನೆ. ನೆನಪು ಇದೆ ಎಂದು ಹೆಗ್ಗಡೆ ಹೇಳಿದಾಗ, ನೀವು ಈಗಲೂ ಈ ಕ್ಷೇತ್ರದಲ್ಲಿ ಧರ್ಮ ಇದೆ ಎಂದು ಹೇಳುತ್ತೀರಾ.. ನೀವು ಧರ್ಮ ಇದೆಯೆಂದು ಅಣ್ಣಪ್ಪನ ಎದುರಲ್ಲಿ ಹೇಳುತ್ತೀರಾ. ಮುಂದಿನ ಮಕರ ಸಂಕ್ರಾಂತಿಯಂದು ದೈವದ ಮುಂದೆ ಬರಲು ರೆಡಿ ಇದ್ದೀರಾ ಎಂದು ಪ್ರಶ್ನೆ ಮಾಡುತ್ತಾನೆ. ನಾನು ಕದ್ರಿ ದೇವಸ್ಥಾನದ ಅಂಗಣಕ್ಕೂ ಬೈಕಿನಲ್ಲಿ ಹೋಗಿದ್ದೆ. ಆನಂತರ, ಒಳಗಡೆ ಹೋಗಿ ದೇವಸ್ಥಾನದ ಶಿಖರಕ್ಕೆ ಹತ್ತಿದ್ದೇನೆ. ಧರ್ಮಸ್ಥಳಕ್ಕೂ ಕದ್ರಿಯೇ ಮೂಲ. ನೀವು ಈ ಕ್ಷೇತ್ರವನ್ನು ಬಿಟ್ಟು ಕೊಡಬೇಕು ಎಂದು ಹೇಳುತ್ತಾನೆ.
ಇದಲ್ಲದೆ, ನಿಮ್ಮ ಜೊತೆಗೆ ಒಬ್ಬನೇ ಮಾತನಾಡಬೇಕೆಂಬ ಬಯಕೆ ಇದೆ, ಸಿಬಂದಿ ಯಾರೂ ಜೊತೆಗೆ ಇರಬಾರದು ಎಂದು ಹೇಳುತ್ತಾನೆ. ಅದಕ್ಕೆ ಹೆಗ್ಗಡೆಯವರು ಅದು ಆಗಲ್ಲ, ಇಲ್ಲಿಯೇ ಪ್ರಶ್ನೆ ಕೇಳಿ ಎನ್ನುತ್ತಾರೆ. ಹೆಗ್ಗಡೆಯವರ ಪರಿಚಾರಕರು, ಸಿಬಂದಿಗಳ ಎದುರಲ್ಲೇ ಈ ವ್ಯಕ್ತಿ ಪ್ರಶ್ನೆ ಮಾಡಿದ್ದು, ಆನಂತರ ಅಣ್ಣಪ್ಪ ನೋಡಿಕೊಳ್ಳುತ್ತಾನೆ ಎಂದು ಹೇಳುತ್ತ ಹೊರ ನಡೆದಿದ್ದಾನೆ. ಇದರ ವಿಡಿಯೋವನ್ನು ಸೌಜನ್ಯಾ ಹೋರಾಟಗಾರರು ತಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಕಿದ್ದು ಭಾರೀ ವೈರಲ್ ಆಗಿದೆ. ಈ ರೀತಿ ಮಾತನಾಡಿ ವಿಡಿಯೋ ಮಾಡಿರುವ ವ್ಯಕ್ತಿ ಮಂಗಳೂರಿನ ಉಳ್ಳಾಲದ ನಿವಾಸಿಯೆಂದು ತಿಳಿದುಬಂದಿದೆ.
A video has gone viral on social media showing a man confronting Dharmasthala Dharmadhikari Dr. D. Veerendra Heggade and asking him to relinquish his position by Shivaratri.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am