ಬ್ರೇಕಿಂಗ್ ನ್ಯೂಸ್
13-01-26 10:30 pm Mangalore Correspondent ಕರಾವಳಿ
ಮಂಗಳೂರು, ಜ.13 : ಕರಾವಳಿಯಲ್ಲಿ ದಶಕದ ಹಿಂದೆ ಚತುಷ್ಪಥಗೊಂಡ ರಾಷ್ಟ್ರೀಯ ಹೆದ್ದಾರಿಯನ್ನು ಮತ್ತೆ ಷಟ್ಪಥಕ್ಕೇರಿಸಿ ಸುವ್ಯವಸ್ಥಿತಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ವಾಹನಗಳ ಒತ್ತಡ ತೀವ್ರ ಹೆಚ್ಚಿರುವುದರಿಂದ ಹೆದ್ದಾರಿಯಲ್ಲಿ ಎಲಿವೇಟೆಡ್ ಕಾರಿಡಾರ್ ಸಹಿತ ಹೆಚ್ಚುವರಿ ಫ್ಲೈ ಓವರ್ ನಿರ್ಮಾಣಕ್ಕೆ ಯೋಜನೆ ಹಾಕಿದೆ.
ಕುಂದಾಪುರ -ಸುರತ್ಕಲ್, ಸುರತ್ಕಲ್- ಬಿ.ಸಿ.ರೋಡ್ ಮತ್ತು ನಂತೂರು-ತಲಪಾಡಿ ಈ ಹೆದ್ದಾರಿ ಭಾಗಗಳನ್ನು ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಲು ಸಾಧ್ಯತಾ ವರದಿಗೆ ಹೆದ್ದಾರಿ ಪ್ರಾಧಿಕಾರ ಟೆಂಡರ್ ಪ್ರಕ್ರಿಯೆ ನಡೆಸಿದೆ. ಕುಂದಾಪುರ- ತಲಪಾಡಿ 700 ಕೋ.ರೂ. ವೆಚ್ಚದಲ್ಲಿ ಹಾಗೂ ಸುರತ್ಕಲ್ - ಬಿ.ಸಿ.ರೋಡ್ 400 ಕೋ.ರೂ. ವೆಚ್ಚದ ಯೋಜನೆ ಸಿದ್ಧಗೊಳ್ಳುವ ಸಾಧ್ಯತೆ ಇದೆ.




ಬಿ.ಸಿ.ರೋಡ್-ಸುರತ್ಕಲ್ ಹೆದ್ದಾರಿ ನಿರ್ಮಾಣಗೊಂಡು 20 ವರ್ಷ ಕಳೆದಿದೆ. ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿಯೇ ಆಧುನಿಕ ಮಾದರಿಯಲ್ಲಿ ಇರಲಿಲ್ಲ. ಅಗಲ ಕಿರಿದಾಗಿ ಮತ್ತು ತಿರುವುಗಳು ಹೆಚ್ಚಿರುವುದರಿಂದ ಇದನ್ನು ನೇರವಾಗಿಸಲು ಪ್ಲಾನ್ ಮಾಡಲಾಗಿದೆ. ಸರ್ವಿಸ್ ರಸ್ತೆ ಇಲ್ಲದಿರುವುದು ದೊಡ್ಡ ಕೊರತೆ. ಹಾಗಾಗಿ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಯೋಜನೆಯನ್ನು ಪ್ರಾಧಿಕಾರ ಹೊಂದಿದೆ.
ಕುಂದಾಪುರ- ಸುರತ್ಕಲ್ ಹೆದ್ದಾರಿ ಯೋಜನೆ 2010ರಲ್ಲಿ ಆರಂಭಗೊಂಡು 2013ರಲ್ಲಿ ಮುಗಿಯಬೇಕಿದ್ದರೂ, ಅದು 2022ರ ವರೆಗೂ ನಡೆದಿತ್ತು. ಇನ್ನೂ ಪರಿಪೂರ್ಣ ಆಗಿಲ್ಲ, ಹಾಗಾಗಿ ಇದರ ಸುಧಾರಣೆಗೂ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಹೀಗಾಗಿ ಹೆದ್ದಾರಿ ಪ್ರಾಧಿಕಾರ, ವಿಸ್ತ್ರತ ತಾಂತ್ರಿಕ ವಿವರಗಳನ್ನು ಪಡೆಯಲಿದ್ದು ಕಾರ್ಯಸಾಧ್ಯತಾ ವರದಿಯ ನಿರೀಕ್ಷೆಯಲ್ಲಿದೆ. ಧ್ರುವ ಕನ್ಸಲ್ವೆನ್ಸಿ ಎಂಬ ಸಂಸ್ಥೆಯನ್ನು ಡಿಪಿಆರ್ ಮಾಡಲು ಅಂತಿಮಗೊಳಿಸಿದ್ದು ಕುಂದಾಪುರ-ತಲಪಾಡಿ ಮತ್ತು ಸುರತ್ಕಲ್- ಬಿ.ಸಿ.ರೋಡ್ ಮರು ವಿನ್ಯಾಸದ ಬಗ್ಗೆ ವರದಿ ನೀಡಲಿದ್ದಾರೆ.
ಬ್ರಹ್ಮಾವರ, ಕೋಟ, ಪಡುಬಿದ್ರಿ, ಕಲ್ಲಾಪುನಲ್ಲಿ ಫ್ಲೈ ಓವರ್
ಪ್ರಸ್ತುತ ತಲಪಾಡಿ-ಕುಂದಾಪುರ ಹೆದ್ದಾರಿ ಭಾಗದಲ್ಲಿ ಹೊಸದಾಗಿ ಬ್ರಹ್ಮಾವರ, ಕೋಟ, ಪಡುಬಿದ್ರಿ ಹಾಗೂ ಉಳ್ಳಾಲದ ಕಲ್ಲಾಪುವಿನಲ್ಲಿ ನೂತನ ಫ್ಲೈ ಓವರ್ ನಿರ್ಮಿಸುವ ಬಗ್ಗೆ ಯೋಚಿಸಲಾಗಿದೆ. ಉಳಿದಂತೆ ಹೆದ್ದಾರಿಯುದ್ದಕ್ಕೂ ಸರ್ವಿಸ್ ರಸ್ತೆ ನಿರ್ಮಿಸಲಾಗುವುದು. ಸದ್ಯ ಇಲ್ಲಿ 25 ಕಿ.ಮೀ ಮಾತ್ರ ಸರ್ವಿಸ್ ರಸ್ತೆ ಇದೆ, 13 ಕಿ.ಮೀ ರಸ್ತೆ ಕಾಮಗಾರಿ ನಡೆಯುತ್ತಿದೆ, ಒಟ್ಟು 52 ಕಿ.ಮೀ ಸರ್ವಿಸ್ ರಸ್ತೆ ನಿರ್ಮಿಸಬೇಕಿದೆ. ಸರ್ವಿಸ್ ರಸ್ತೆ ಇಲ್ಲದೆ ದ್ವಿಚಕ್ರ ವಾಹನಗಳು ಮುಖ್ಯ ರಸ್ತೆಯಲ್ಲಿ ಬರುವುದರಿಂದ ಅಪಘಾತಗಳು ಹೆಚ್ಚುತ್ತಿವೆ ಎನ್ನಲಾಗಿದೆ. ದ್ವಿಚಕ್ರ ವಾಹನಗಳನ್ನು ಸರ್ವಿಸ್ ರಸ್ತೆಯಲ್ಲಿ ಸಂಚರಿಸುವಂತೆ ಮಾಡುವುದು ಸದ್ಯ ಪ್ರಾಧಿಕಾರದ ಯೋಜನೆ. ಕುಂದಾಪುರ- ತಲಪಾಡಿ ಹೆದ್ದಾರಿಯಲ್ಲಿ ಎಲ್ಲಿಯೂ ಭೂಸ್ವಾಧೀನದ ಸಮಸ್ಯೆ ಇಲ್ಲ, ಷಟ್ಪಥ ರಸ್ತೆ ಮಾಡುವುದಕ್ಕೆ ಸಾಕಷ್ಟು ಅವಕಾಶಗಳಿವೆ ಎನ್ನುತ್ತಾರೆ ಅಧಿಕಾರಿಗಳು.
ಕೂಳೂರು- ನಂತೂರು ಎಲಿವೇಟೆಡ್ ಕಾರಿಡಾರ್
ಬಿ.ಸಿ.ರೋಡ್-ಸುರತ್ಕಲ್ ಮಧ್ಯೆ ಸದ್ಯ ಕ್ಯಾರೇಜ್ ವೇ 23-24 ಮೀಟರ್ ಅಷ್ಟೇ ಇದೆ. ಈ ಭಾಗದ ಹೆದ್ದಾರಿ ಮೇಲೆ ತೀರಾ ಒತ್ತಡ ಇರುವುದರಿಂದ 45 ಮೀಟರ್‌ಗೆ ರಸ್ತೆ ಅಗಲಗೊಳಿಸಿ, ಷಟ್ಪಥಗೊಳಿಸುವುದು ಹೊಸ ಡಿಪಿಆರ್ ಉದ್ದೇಶ. 20 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಸುರತ್ಕಲ್, ಕೂಳೂರು, ಕೊಟ್ಟಾರ ಚೌಕಿ, ಕುಂಟಿಕಾನ ಫ್ಲೈ ಓವರ್‌ಗಳನ್ನು ಮರುವಿನ್ಯಾಸ ಮಾಡಲು ವರದಿ ಕೇಳಲಾಗಿದೆ. ಕೂಳೂರಿನಿಂದ ನಂತೂರು ವರೆಗೆ ಎಲಿವೇಟೆಡ್ ಹೈವೇ ಮಾಡುವ ಸಾಧ್ಯತೆಯನ್ನೂ ಪರಿಶೀಲಿಸಲಾಗುವುದು. ಕೂಳೂರಿನಿಂದ ನಂತೂರು ವರೆಗೆ ಸಂಚಾರ ಸುಗಮಗೊಳಿಸುವುದು ಮೊದಲ ಆದ್ಯತೆ. ಸುರತ್ಕಲ್- ಬಿ.ಸಿ.ರೋಡ್ ಬೈಪಾಸ್ ನಿರ್ಮಾಣಕ್ಕೂ ಒತ್ತು ನೀಡಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅಜ್ಮಿ ಹೇಳುತ್ತಾರೆ.
The National Highways Authority of India (NHAI) has initiated plans to upgrade the coastal Karnataka national highways, which were widened to four lanes a decade ago, into six-lane corridors to manage the rapidly increasing traffic load. The proposal includes construction of additional flyovers and an elevated corridor at critical congestion points.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am