ಬ್ರೇಕಿಂಗ್ ನ್ಯೂಸ್
10-01-26 10:45 pm Mangalore Correspondent ಕರಾವಳಿ
ಮಂಗಳೂರು, ಜ.10 : ಕರಾವಳಿಯಲ್ಲಿ ಅನೇಕ ಜನ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದೆ ಬರುವವರಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ಮಾಡಲಿದೆ. ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶ ಇದೆ. ಇದಕ್ಕಾಗಿ ಸರ್ಕಾರ ಐದು ವರ್ಷದ ಪ್ರವಾಸೋದ್ಯಮ ನೀತಿ ರಚನೆ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರಿನ ಅತ್ತಾವರದಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದ ಸಮಾರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಅನೇಕ ಸ್ಥಳಗಳಿವೆ. ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು 5 ವರ್ಷದ ನೀತಿ ಘೋಷಣೆ ಮಾಡಿ ಜಾರಿಗೆ ತಂದಿದ್ದೇವೆ. ಅನೇಕ ಸೌಕರ್ಯ, ಬೆಂಬಲ, ಸಹಕಾರವನ್ನು ಸರ್ಕಾರ ಕೊಡುತ್ತದೆ. ನಮಗೆ 320 ಕಿಲೋಮೀಟರ್ ಉದ್ದದ ಕರಾವಳಿ ಪ್ರದೇಶದ ಇದೆ. ದುರಂತ ಅಂದ್ರೆ ಅದನ್ನು ಅಭಿವೃದ್ಧಿ ಪಡಿಸಲು ಆಗಲಿಲ್ಲ, ಯಾವ ಸರ್ಕಾರ ಕೂಡ ಇದಕ್ಕೆ ಮನಸ್ಸು ಮಾಡಲಿಲ್ಲ, ಈಗ ಮಾಡಬೇಕಿದೆ. ಡಿಕೆ ಶಿವಕುಮಾರ್ ಮತ್ತು ಸಚಿವ HK ಪಾಟೀಲ್ ವಿಶೇಷ ಕಾಳಜಿ ವಹಿಸಿದ್ದಾರೆ.





ಬ್ಯಾಂಕಿಂಗ್ ,ಶಿಕ್ಷಣ ,ಆರೋಗ್ಯಕ್ಕೆ ವಿಶೇಷ ಆದ್ಯತೆ ಇಲ್ಲಿದೆ. ಇಲ್ಲಿನ ತಲಾ ಆದಾಯ ಹೆಚ್ಚಿದೆ, ತೆರಿಗೆ ಸಂದಾಯದಲ್ಲೂ ಕರಾವಳಿ ಮುಂದಿದೆ. ಮಹಾರಾಷ್ಟ್ರ ಬಿಟ್ರೆ ನಮ್ಮ ರಾಜ್ಯವೇ ತೆರಿಗೆ ಸಂಗ್ರಹದಲ್ಲಿ ಎರಡನೇ ದೊಡ್ಡ ರಾಜ್ಯ. ಬೆಂಗಳೂರು ಬಿಟ್ರೆ ಮಂಗಳೂರಿನಲ್ಲಿ ತಲಾ ಆದಾಯ ಹೆಚ್ಚಿದೆ. ಪ್ರವಾಸೋದ್ಯಮ ಅಭಿವೃದ್ಧಿ ಮಾಡಿದ್ರೆ ಮಹಾರಾಷ್ಟ್ರ ಹಿಂದಕ್ಕೆ ಹಾಕಬಹುದು. ಮಂಗಳೂರಿನ ಒಂದು ವಿಷಾದದ ಸಂಗತಿ ಅಂದ್ರೆ, ಶಿಕ್ಷಣಕ್ಕೆ ಮಂಗಳೂರಿಗೆ ದೇಶ ವಿದೇಶದಿಂದ ಬರ್ತಾರೆ, ಆದ್ರೆ ಇಲ್ಲಿನವರು ಕೆಲಸಕ್ಕಾಗಿ ಬೆಂಗಳೂರು, ಮುಂಬೈ ಬೇರೆ ಬೇರೆ ಕಡೆ ಹೋಗ್ತಾರೆ. ಇಲ್ಲೇ ಉದ್ಯೋಗ ಸಿಗುವ ಪ್ರಯತ್ನ ಆಗಬೇಕು, ಇಲ್ಲೇ ಉದ್ಯಮ ಬೆಳೆಸಬೇಕು.
ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ವಿಪುಲ ಅವಕಾಶಗಳಿವೆ. ಇಲ್ಲಿವರೆಗೆ ಇಲ್ಲಿ ಒಂದು 5 ಸ್ಟಾರ್ ಹೋಟೆಲ್ ಇಲ್ಲ. ಇರುವ ಅವಕಾಶ ಬಳಸಿಕೊಂಡು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಬೇಕು. ಪ್ರವಾಸೋದ್ಯಮ ಬೆಳೆಯಲು ಕಾನೂನು ಸುವ್ಯವಸ್ಥೆ ಚೆನ್ನಾಗಿ ಇರಬೇಕು. ಕಾನೂನು ಇಲ್ಲದೇ ಹೋದ್ರೆ ಸಮಸ್ಯೆಯಾಗುತ್ತದೆ. ಲಾ ಆ್ಯಂಡ್ ಅರ್ಡರ್ ಗೂ ಅಭಿವೃದ್ಧಿಗೂ ಸಂಬಂಧ ಇದೆ. ಸದ್ಯಕ್ಕೆ ಈಗ ಕಾನೂನು ಸುವ್ಯವಸ್ಥೆ ಇದೆ, ಇದೇ ರೀತಿ ಮುಂದುವರಿಯಲಿ ಎನ್ನುವ ಮೂಲಕ ಮಂಗಳೂರಿನಲ್ಲಿ ಕಮಿಷನರ್ ಮತ್ತು ಎಸ್ಪಿ ವರ್ಗಾವಣೆ ಆಗುತ್ತದೆ ಎಂಬ ವದಂತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಗಳೆದರು.
ಯಾರು ಕೂಡ ಕಾನೂನು ಕೈಗೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಜಾತಿ ಧರ್ಮ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡಬಾರದು. ದೇಶ ಭಕ್ತಿ ಇನ್ನೊಂದು ಧರ್ಮವನ್ನು ಎತ್ತಿ ಕಟ್ಟುವುದ್ದರಿಂದ ಬರುತ್ತಾ ? ಎಲ್ಲ ಧರ್ಮ ಕೂಡ ಪ್ರೀತಿ ಹೇಳುತ್ತೆ, ದ್ವೇಷ ಮಾಡಲು ಹೇಳಲ್ಲ ಎಂದು ಸೂಚ್ಯವಾಗಿ ಹೇಳಿದ ಸಿದ್ದರಾಮಯ್ಯ, ಕುವೆಂಪು ಶಾಂತಿಯ ತೋಟ ಮಾಡಬೇಕು ಅಂದಿದ್ದಾರೆ. ಇಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಚಾರ ಸಿಗಬೇಕು. ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಬಂಡವಾಳ ಹೂಡಲು ಯಾರು ಬರ್ತಾರೋ ಅವರಿಗೆ ಸರ್ಕಾರ ಸಹಕಾರ ನೀಡುತ್ತೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ. ಇಲ್ಲಿಯವರು ವಿದೇಶದಲ್ಲಿ ಹೋಗಿ ಉದ್ಯಮ ಮಾಡುತ್ತಾರೆ, ಇಲ್ಲೇ ಉದ್ಯಮ ಮಾಡುವಂತಾಗಬೇಕು.
ಕರಾವಳಿ ಶಿಕ್ಷಣ ಆರೋಗ್ಯ ಸಂಸ್ಕ್ರತಿ ಎಲ್ಲದರಲ್ಲೂ ಮುಂದಿದೆ.
ಕರಾವಳಿಯವರು ಸಾಹಸ ಪ್ರವೃತ್ತಿ ಇರುವವರು. ಪ್ರವಾಸೋದ್ಯಮಕ್ಕೆ ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ. ನಾವು ಕೇರಳಕ್ಕಿಂತ ಕಡಿಮೆ ಇಲ್ಲ, ಆದ್ರೆ ಆಸಕ್ತಿ ಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್, ಎಚ್.ಕೆ ಪಾಟೀಲ್, ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಅಶೋಕ ರೈ, ಐವಾನ್ ಡಿಸೋಜ ಮತ್ತಿತರರು ಇದ್ದರು.
Chief Minister Siddaramaiah announced that the Karnataka government has formulated a five-year dedicated policy to boost coastal tourism, assuring full support to investors willing to invest in the region. Speaking at the valedictory session of the Coastal Karnataka Tourism Conference in Mangaluru, he said the 320-kilometre-long coastline holds immense potential that earlier governments failed to fully tap.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
10-01-26 10:45 pm
Mangalore Correspondent
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ...
10-01-26 06:07 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm