ಬ್ರೇಕಿಂಗ್ ನ್ಯೂಸ್
10-01-26 07:21 pm Mangalore Correspondent ಕರಾವಳಿ
ಮಂಗಳೂರು, ಜ.10: ‘ಉಪನಿಷತ್ತಿನಲ್ಲಿಯೇ ಕಾಶಿ ವಿಶ್ವನಾಥ ದೇಗುಲದ ಉಲ್ಲೇಖವಿದೆ. ಕಾಶಿಯ ದೇಗುಲದ ಗೋಡೆಗಳ ಮೇಲೆಯೂ ಇತಿಹಾಸ ಇದೆ. ಕಾಶಿಯ ಇತಿಹಾಸವನ್ನು 12ನೇ ಶತಮಾನದಿಂದ ಉಲ್ಲೇಖಿಸುವುದು ತಪ್ಪು ಎಂದು ಖ್ಯಾತ ಇತಿಹಾಸಕಾರ್ತಿ, ಪದ್ಮಶ್ರೀ ಡಾ.ಮೀನಾಕ್ಷಿ ಜೈನ್ ಹೇಳಿದ್ದಾರೆ.
ಎಂಟನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿ ಸ್ವೀಕರಿಸಿದ ಡಾ.ಮೀನಾಕ್ಷಿ ಜೈನ್ ಬಳಿಕ ಸಂವಾದದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಕಾಶಿ ಮತ್ತು ಮಥುರಾದಲ್ಲಿ ದೇವಸ್ಥಾನದ ಜಾಗ ವಿವಾದಕ್ಕೀಡಾಗಿರುವುದರ ಕುರಿತು ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಶಿಯ ಇತಿಹಾಸವನ್ನು 12ನೇ ಶತಮಾನದಿಂದ ಉಲ್ಲೇಖಿಸಲಾಗುತ್ತದೆ. ಅದು ತಪ್ಪು. ಉಪನಿಷತ್ ಕಾಲದಿಂದಲೂ ಕಾಶಿಗೆ ಅಸ್ತಿತ್ವವಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಲ್ಲಿಯ ಇತಿಹಾಸವನ್ನು ದೇವಸ್ಥಾನದ ಗೋಡೆಗಳ ಮೇಲೆಯೇ ಬರೆಯಲಾಗಿದೆ. ಆದರೂ 1936ರಲ್ಲಿ ವ್ಯಕ್ತಿಯೊಬ್ಬರು ಅದು ವಕ್ಫ್ ಗೆ ಸೇರಿದ ಜಾಗವೆಂದು ದಾವೆ ಹೂಡಿದರು. ಬ್ರಿಟಿಷರ ಆಡಳಿತದಲ್ಲೇ ಇದರ ಬಗ್ಗೆ ತನಿಖೆ ನಡೆಸಲಾಯಿತು. ಅಲ್ಲಿನ ನಿವಾಸಿಗಳನ್ನು ಮಾತನಾಡಿಸಿ ಮಾಹಿತಿ ಸಂಗ್ರಹಿಸಲಾಯಿತು. ಬ್ರಿಟಿಷ್ ಸರ್ಕಾರಕ್ಕೆ ಸುಮಾರು ನಾಲ್ಕು ಸಾವಿರ ಪುಟಗಳಷ್ಟು ವರದಿಯನ್ನು ಸಲ್ಲಿಸಲಾಗಿತ್ತು ಎಂದು ಹೇಳಿದರು.

ಮಥುರಾದ ಜಾಗವನ್ನು ವಕ್ಫ್ ಗೆ ನೀಡಿದ್ದರು !
ಮಥುರಾ ಕುರಿತು ಸ್ಪಷ್ಟನೆ ನೀಡಿದ ಅವರು, ‘ಮಥುರಾದಲ್ಲಿ ದೇವಸ್ಥಾನಕ್ಕೆ ಮೀಸಲಾಗಿದ್ದ 13.3 ಎಕರೆ ಜಮೀನಿನ ಪೈಕಿ ಮೂರು ಎಕರೆ ಪ್ರದೇಶವನ್ನು 1968ರಲ್ಲಿ ರಾಷ್ಟ್ರೀಯ ಪಕ್ಷವೊಂದು ವಕ್ಫ್ ಗೆ ದಾನ ನೀಡಿತ್ತು. ಮುಂಚೆ ಈ ರೀತಿ ಇತಿಹಾಸ ಕುರಿತು ಮಾತನಾಡಲು ಅಥವಾ ಬರೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. 2010ಕ್ಕೂ ಮೊದಲು ಭಾರತದ ಇತಿಹಾಸ ಕುರಿತು ಪುಸ್ತಕಗಳನ್ನು ಪ್ರಕಟಿಸುವುದಕ್ಕೆ ಯಾವ ಪ್ರಕಾಶಕರು ಮುಂದೆ ಬರುತ್ತಿರಲಿಲ್ಲ. ಈಗ ನನ್ನ ಪುಸ್ತಕಗಳು ಪ್ರಕಟಗೊಳ್ಳುತ್ತವೆ. ನಾನು ಅಯೋಧ್ಯೆಯಲ್ಲಿ ರಾಮ ಮಂದಿರ ನೋಡುತ್ತೇನೆ ಎಂಬ ನಂಬಿಕೆ ಇರಲಿಲ್ಲ. ಆದರೆ, 2025ರಲ್ಲಿ ಅದು ನಿಜವಾಗಿದೆ ಎಂದು ಮೀನಾಕ್ಷಿ ಜೈನ್ ಹೇಳಿದರು.
ನಂಬಿಕೆ, ಆಚರಣೆಗಳಿಂದಲೇ ನಾಗರಿಕತೆ ಉಳಿದಿದೆ
ನಾಗರಿಕತೆಯ ಜೊತೆಗೆ ಮರು ಸಂಪರ್ಕ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ನಾಗರಿಕತೆಗಳು ಕಾಲಾನುಕ್ರಮದಲ್ಲಿ ನಶಿಸಿ ಹೋಗಿವೆ. ಆದರೆ, ನಮ್ಮ ನಾಗರಿಕತೆ ಹಲವು ದಾಳಿಗಳ ನಂತರವೂ ಈಗಲೂ ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣ, ಜನಸಾಮಾನ್ಯರು ಮತ್ತು ಅವರ ನಂಬಿಕೆ’ ಎಂದು ಹೇಳಿದರು. ‘ನಮ್ಮ ನಾಗರಿಕತೆಯ ಮೇಲೆ ಏನೇ ದಾಳಿಗಳು ನಡೆದರೂ, ನಾವು ಶರಣಾಗತರಾಗಲಿಲ್ಲ ಎಂದರೆ ಅದಕ್ಕೆ ಕಾರಣ ನಮ್ಮ ನಂಬಿಕೆಗಳು ಮತ್ತು ಆಚರಣೆಗಳು. ನಾವು ತಾಯಿಯನ್ನು ಪೂಜಿಸುತ್ತ ಬಂದಿದ್ದೇವೆ. ಮಧ್ಯಪ್ರದೇಶದಲ್ಲಿ ಸಿಕ್ಕ ಸುಮಾರು 11 ಸಾವಿರ ವರ್ಷಗಳ ಹಿಂದಿನ ಶಾಸನದಲ್ಲೂ ಇದರ ಉಲ್ಲೇಖವಿದೆ. ಈಗಲೂ ಅದು ಮುಂದುವರೆದಿದೆ. ನಾವು ನಮ್ಮ ನಂಬಿಕೆಯನ್ನು ಬಿಟ್ಟಿಲ್ಲ. ಆ ನಂಬಿಕೆಯನ್ನು ಪಾಲಿಸಿಕೊಂಡು ಬಂದವರು ಜನ ಸಾಮಾನ್ಯರು’ ಎಂದು ಹೇಳಿದರು.
ಎಲ್ಲಾ ಧರ್ಮದವರು ಸೌಹಾರ್ದದಿಂದ ಬಾಳಿದ ದೇಶ ನಮ್ಮದು
ಈ ಕುರಿತು ವಿವರಣೆ ನೀಡಿದ ಅವರು, ‘ಹಿಂದಿನ ಕಾಲದಲ್ಲಿ ರಾಜರಿಗಿಂತ ಜನ ಸಾಮಾನ್ಯರು ಬಹಳ ಮಹತ್ವದ ಪಾತ್ರ ವಹಿಸುತ್ತಿದ್ದರು. ನಮ್ಮ ನಾಗರಿಕತೆಯನ್ನು ಕಟ್ಟಿದ್ದು ಬರೀ ರಾಜರಲ್ಲ, ಜನಸಾಮಾನ್ಯರ ಪಾಲು ಬಹಳ ದೊಡ್ಡದಿದೆ. ಸಂಚಿಯಲ್ಲಿ ಕೆಲವು ವರ್ಷಗಳ ಹಿಂದೆ 601 ಶಾಸನಗಳು ಸಿಕ್ಕಿವೆ. ಅಲ್ಲಿರುವ ಸ್ತಂಭಗಳ ಪೈಕಿ, ಮೂರನ್ನು ಮಾತ್ರ ರಾಜರು ದಾನ ಮಾಡಿದ್ದಾರೆ. ಮಿಕ್ಕಂತೆ ಎಲ್ಲವನ್ನೂ ಜನ ಸಾಮಾನ್ಯರು ದಾನ ಮಾಡಿದ್ದಾರೆ. ಮರಗೆಲಸ ಮಾಡುವವರು, ಬಂಡಿ ಎಳೆಯುವವರು ತಮ್ಮ ಶಕ್ತ್ಯಾನುಸಾರ ದಾನ ಮಾಡಿದ್ದಾರೆ. ಅದನ್ನು ಶಾಸನಗಳಲ್ಲೇ ನಮೂದಿಸಲಾಗಿದೆ. ಬರೀ ಗಂಡಸರಷ್ಟೇ ಅಲ್ಲ, ಮಹಿಳೆಯರು ಸಹ ಪ್ರಮುಖ ಪಾತ್ರ ವಹಿಸುತ್ತಿದ್ದರು. ಆದರೆ, ನಮ್ಮಲ್ಲಿ ಯಾವಾಗಲೂ ಬೇರೆ ಬೇರೆ ವರ್ಗಗಳ ಜನರ ನಡುವೆ ಕಿತ್ತಾಟಗಳು ನಡೆಯುತ್ತಿದ್ದವು, ನಾವು ಯಾವಾಗಲೂ ಹೊಡೆದಾಡಿಕೊಳ್ಳುತ್ತಿದ್ದೆವು ಎಂಬುದನ್ನು ಪಠ್ಯಗಳಲ್ಲಿ ಹೇಳಿಕೊಡಲಾಗಿದೆ. ತಲೆ ತಲಾಂತರಗಳಿಂದ ಹಿಂದೂಗಳು, ಜೈನರು ಮತ್ತು ಬೌದ್ಧರ ನಡುವೆ ಆಂತರಿಕ ಕಚ್ಚಾಟಗಳು ನಡೆಯುತ್ತಿದ್ದವು ಎಂದು ಹೇಳುತ್ತ ಬರಲಾಗಿದೆ. ನಮ್ಮನ್ನು ಒಡೆದು ಆಳಲು ಬ್ರಿಟಿಷರು ಮಾಡಿದ ಹುನ್ನಾರ ಇದು. ಆದರೆ ಅದು ಸುಳ್ಳು. ಎಲ್ಲಾ ಧರ್ಮದವರು ಸೌಹಾರ್ದಯುತರಾಗಿ ಬಾಳಿದ ದೇಶ ನಮ್ಮದು. ಭಾರತದ ಇತಿಹಾಸವನ್ನು ಭಾರತೀಯರ ಕಣ್ಣುಗಳಲ್ಲಿ ನೋಡಬೇಕೇ ಹೊರತು, ವಿದೇಶಿಗರ ಕಣ್ಣುಗಳಿಂದ ಅಲ್ಲ’ ಎಂದರು.
ಡಾ.ಮೀನಾಕ್ಷಿ ಜೈನ್ ಅವರ ಸಂವಾದವನ್ನು ಅಗ್ರಿಲೀಫ್ ಸಂಸ್ಥೆಯ ಚೀಫ್ ಆಫ್ ಸ್ಟಾಫ್ ಪೃಥ್ವಿ ಕಾರಿಂಜ ನಡೆಸಿಕೊಟ್ಟರು. ಅದಕ್ಕೂ ಮೊದಲು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿಯೂ ಡಾ.ಮೀನಾಕ್ಷಿ ಜೈನ್ ಉತ್ಸಾಹದಿಂದ ಭಾಗವಹಿಸಿ ಸರಸ್ವತಿ ರಥವನ್ನು ಎಳೆದರು. ನಂತರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಶತಾವಧಾನಿ ಆರ್. ಗಣೇಶ್, ಮಿಥಿಕ್ ಸೊಸೈಟಿ ಗೌರವ ಕಾರ್ಯದರ್ಶಿ ಎಸ್. ರವಿ, ಭಾರತ್ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಸುನಿಲ್ ಕುಲಕರ್ಣಿ, ಸುಜಿತ್ ಪ್ರತಾಪ್, ದುರ್ಗಾ ರಾಮದಾಸ್ ಕಟೀಲ್ ಮತ್ತು ಶ್ರೀರಾಜ್ ಗುಡಿ ಇದ್ದರು.
Renowned historian and Padma Shri awardee Dr Meenakshi Jain said that the Kashi Vishwanath temple finds mention in the Upanishads and that limiting Kashi’s history to the 12th century is historically incorrect. Speaking at the 8th edition of the Mangaluru Literature Festival, she stressed that Indian history must be viewed through Indian perspectives rather than foreign lenses.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
10-01-26 10:45 pm
Mangalore Correspondent
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ...
10-01-26 06:07 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm