ಬಿ‌.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್ತಿದ್ದಾಗ ಮತ್ತೊಂದು ಕಾರು ಡಿಕ್ಕಿ, ಯುವ ಮೆಕ್ಯಾನಿಕ್ ಸಾವು 

14-10-25 05:46 pm       Mangalore Correspondent   ಕರಾವಳಿ

ಹೆದ್ದಾರಿ ಬದಿಯಲ್ಲಿ ಕಾರು ರಿಪೇರಿ ಮಾಡುತ್ತಿದ್ದಾಗ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಮೆಕ್ಯಾನಿಕ್ ಒಬ್ಬರು ಸಾವನಪ್ಪಿದ ಘಟನೆ ಬಿ.ಸಿ.ರೋಡ್ ಬೈಪಾಸ್ ಬಳಿಯ ಗಾಣದಪಡ್ಪು ಎಂಬಲ್ಲಿ ನಡೆದಿದೆ. ಬೋಳಂತೂರು ನಿವಾಸಿ ಜಬ್ಬಾರ್( 33) ಮೃತ ಯುವಕ. 

ಬಂಟ್ವಾಳ, ಅ.14 :  ಹೆದ್ದಾರಿ ಬದಿಯಲ್ಲಿ ಕಾರು ರಿಪೇರಿ ಮಾಡುತ್ತಿದ್ದಾಗ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಮೆಕ್ಯಾನಿಕ್ ಒಬ್ಬರು ಸಾವನಪ್ಪಿದ ಘಟನೆ ಬಿ.ಸಿ.ರೋಡ್ ಬೈಪಾಸ್ ಬಳಿಯ ಗಾಣದಪಡ್ಪು ಎಂಬಲ್ಲಿ ನಡೆದಿದೆ. ಬೋಳಂತೂರು ನಿವಾಸಿ ಜಬ್ಬಾರ್( 33) ಮೃತ ಯುವಕ. 

ಅವಿವಾಹಿತನಾಗಿದ್ದ ಜಬ್ಬಾರ್ ಅವರು ಗಾಣದಪಡ್ಪು ಶಿವಗಣೇಶ್ ಬ್ಯಾಟರಿ ಅಂಗಡಿಯಲ್ಲಿ ಮೆಕ್ಯಾನಿಕ್ ಆಗಿದ್ದು, ಆಟೋ ಇಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು. ಇಂದು ಮಧ್ಯಾಹ್ನ ಹೆದ್ದಾರಿ ಬದಿಯಲ್ಲಿ ಕಾರೊಂದಕ್ಕೆ ಹಾರ್ನ್ ಅಳವಡಿಸುತ್ತಿದ್ದ ವೇಳೆ ವೇಣೂರು ಮೂಲದ ವ್ಯಕ್ತಿಯೋರ್ವ ಬಂಟ್ವಾಳ ಬೈಪಾಸ್ ಕಡೆಯಿಂದ ಕಾರಿನಲ್ಲಿ ವೇಗವಾಗಿ ಬಂದು ಡಿಕ್ಕಿಯಾಗಿಸಿದ್ದಾರೆ. 

ಡಿಕ್ಕಿಯ ರಭಸಕ್ಕೆ ಜಬ್ಬಾರ್ ಗಂಭೀರ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

A tragic accident occurred near Gaanadapadpu on the B.C. Road bypass when a speeding car hit a mechanic working by the roadside. The deceased has been identified as Jabbar (33), a resident of Bolantur.