ಬ್ರೇಕಿಂಗ್ ನ್ಯೂಸ್
12-10-25 08:59 pm Bangalore Correspondent ಕರ್ನಾಟಕ
ಬೆಂಗಳೂರು, ಅ.12: RSS ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿನ ಜೆಪಿ ಪಾರ್ಕ್ನಲ್ಲಿ ನಡೀತಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರ ನಡಿಗೆ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ ಮುನಿರತ್ನ ಆಗಮಿಸಿದ್ರು. ಇದೇ ವೇಳೆ ವೇದಿಕೆ ಮೇಲೆ ಹೈಡ್ರಾಮಾ ಸೃಷ್ಟಿಯಾಗಿದೆ. ಕಾರ್ಯಕ್ರಮಕ್ಕೆ ಶಾಸಕರನ್ನ ಕರೆದಿಲ್ಲ ಎಂದು ಮುನಿರತ್ನ ಕೂಗಾಡಿದ್ರು. ವೇದಿಕೆ ಮೇಲೆ ನಡೆದ ರಂಪಾಟದ ನಡುವೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮುನಿರತ್ನ ಆರೋಪ ಮಾಡಿದ್ದು. ಪಾರ್ಕ್ ಮುಂದೆ ಪ್ರತಿಭಟನೆಗೆ ನಡೆಸುತ್ತಾರೆ. ಜೆಪಿ ಪಾರ್ಕ್ ಬಳಿ ಮುನಿರತ್ನ ಬೆಂಬಲಿಗರ ದಂಡೇ ಹರಿದು ಬರ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಹೆಚ್ಚಿಸಿದ್ದಾರೆ..
ಹಲ್ಲೆ ಮಾಡಿದ್ದಾರೆ ಎಂದು ಮುನಿರತ್ನ ಆರೋಪ ಡಿಕೆ ಶಿವಕುಮಾರ್ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಶಾಸಕ ಮುನಿರತ್ನ ಆರೋಪ ಮಾಡಿದ್ದಾರೆ. ಇಲ್ಲಿ ಇರೋರು ಜನ ಸಾಮಾನ್ಯರಲ್ಲ, ಕಾಂಗ್ರೆಸ್ ಕಾರ್ಯಕರ್ತರು. ಅಲ್ಲದೇ ನನ್ನ ಮೇಲೆ ಹಲ್ಲೆ ನಡೆಸಲು ಡಿಕೆಶಿ ಪುಡಿ ರೌಡಿಗಳನ್ನು ಕರೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
'ಗಣವೇಷದ ಟೋಪಿ ಕಿತ್ತು ಒದ್ದಿದ್ದಾರೆ':
ನಾನು RSS ಕಾರ್ಯಕ್ರಮ ಮುಗಿಸಿ ಬಂದಿದ್ದೇನೆ, ಇಲ್ಲಿ ಗಣವೇಷದ ಟೋಪಿ ಕಿತ್ತು ಒದ್ದಿದ್ದಾರೆ. ಅಷ್ಟೇ ಅಲ್ಲದೇ ಬಟ್ಟೆಯನ್ನ ಎಳೆದಾಡಿದ ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡೋಕೆ ಕನಕಪುರ, ರಾಮನಗರದಿಂದ ರೌಡಿಗಳನ್ನು ಕರ್ಕೊಂಡು ಬಂದಿದ್ದಾರೆ ಎಂದು ಆರೋಪಿಸಿದ್ರು.
ಪಾರ್ಕ್ ಮುಂದೆ ಮುನಿರತ್ನ ಪ್ರೊಟೆಸ್ಟ್;
ನನ್ನ ಮೇಲೆ ಉದ್ದೇಶ ಪೂರ್ವಕವಾಗಿ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿದ ಮುನಿರತ್ನ, ಜೆಪಿ ಪಾರ್ಕ್ ಗೇಟ್ ಬಳಿ ಮೌನ ಪ್ರತಿಭಟನೆ ನಡೆಸಿದ್ರು. ಆರ್ ಎಸ್ ಎಸ್ ವೇಷಕ್ಕೆ ಗೌರವ ಕೊಟ್ಟಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.
ನನ್ನ ಕ್ಷೇತ್ರದಲ್ಲಿ ನನಗೆ ಆಹ್ವಾನ ಕೊಡದೇ ಕಾರ್ಯಕ್ರಮ ಮಾಡ್ತಿದ್ದಾರೆ. ಸುತ್ತಮುತ್ತ ಬರೀ ಕಾಂಗ್ರೇಸ್ ಫ್ಲೆಕ್ಸ್ ಹಾಕಿದ್ದಾರೆ. ನನ್ನ ರಾಜೀನಾಮೆ ಕೊಡಿಸಬೇಕು ಅನ್ನೋದು ಅವರ ಟಾರ್ಗೆಟ್. ಅವರ ಜೊತೆ ಬೆಳಗ್ಗೆಯಿಂದ ಯಾರಿದ್ರೂ ಅವರನ್ನ ಈ ಕ್ಷೇತ್ರಕ್ಕೆ ತರೋ ಪ್ಲಾನ್ ಇದೆ ಎಂದು ಪರೋಕ್ಷವಾಗಿ ಕುಸುಮಾ ಸಪೋರ್ಟ್ ಕೊಡಲಾಗ್ತಿದೆ ಎಂದು ಮುನಿರತ್ನ ಕಿಡಿಕಾರಿದ್ರು.
'ನನ್ನ ಇಲ್ಲೇ ಕೊಲೆ ಮಾಡ್ತಿದ್ರು' ;
ಇವತ್ತು ಪೊಲೀಸ್ ಇಲ್ಲ ಅಂದಿದ್ರೆ ನನ್ನ ಇಲ್ಲೇ ಕೊಲೆ ಮಾಡ್ತಿದ್ರು. ಸಿದ್ದರಾಮಯ್ಯ ಒಂದು ಸಾರಿ ಶಾಸಕರಿಗೆ ಆಹ್ವಾನ ಕೊಡಿ ಅಂತ ಕಳಿಸಿದ್ರು. ಈಗ ಡಿಸಿಎಂ ಅಹ್ವಾನ ಕೊಡೋದಿರಲಿ ಗೌರವವನ್ನೂ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ಮೊದಲು ಖಡಕ್ ಆಗಿಯೇ ಇದ್ರೂ, ಈಗ ಸಿಎಂ ಬದಲಾಗಿಬಿಟ್ಟಿದ್ದಾರೆ ಎಂದು ಮುನಿರತ್ನ ಹೇಳಿದ್ದಾರೆ.
ಸಿದ್ದರಾಮಯ್ಯ ಮೇಲೆ ಡಿಕೆಶಿ ಮಾಠ ಮಾಡಿಸಿದ್ದಾರೆ;
ಸಿದ್ದರಾಮಯ್ಯ ಹಳೆ ಸಿದ್ದರಾಮಯ್ಯ ಅಲ್ಲ. ಸಿದ್ದರಾಮಯ್ಯನವರನ್ನು ಮುಗಿಸಬೇಕು ಎಂದು ಡಿಕೆ ಶಿವಕುಮಾರ್ ಕೇರಳದಲ್ಲಿ ಮಾಠ ಮಾಡಿಸಿದ್ದಾರೆ. ಕೋಣನ ಬಲಿ ಕೊಟ್ಟಿದ್ದಾರೆ. ಕಾಡು ಹಂದಿ ಬಲಿ ನೀಡಿದ್ದಾರೆ. ನನ್ನ ಬಳಿ ಮಾಹಿತಿ ಇದೆ. ಸಿದ್ದರಾಮಯ್ಯ ಮೇಲೆ ರೇಪ್ ಕೇಸ್ ಹಾಕೋಕೆ ಆಗಲ್ಲ. ಹೀಗಾಗಿ ಮಾಠ ಮಂತ್ರ ಮಾಡಿಸ್ತಾ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಡಿಕೆ ರವಿ ಸತ್ತು ನಂಗೆ ಸಮಸ್ಯೆ
ಡಿಕೆ ರವಿ ಸತ್ತು ನಂಗೆ ಸಮಸ್ಯೆ ಆಗಿದೆ. ಆ ಪುಣ್ಯಾತ್ಮ ಬದುಕಿದ್ರೆ ಹೀಗೆ ಆಗ್ತಿರಲಿಲ್ಲ. ಕುಸುಮಾಗೆ ಶಾಸಕ ಆಗುವ ಹುಚ್ಚು ಬಂದಿದೆ. ಅವರ ಹುಚ್ಚಿಗೆ ನಾನು ಬಲಿ ಆಗ್ತಾ ಇದ್ದೇನೆ. ಜೆಪಿ ಪಾರ್ಕ್ ಲ್ಲಿ ಕಾರ್ಯಕ್ರಮ, ನಾನು ವೇದಿಕೆಗೆ ಹೋಗಿರಲಿಲ್ಲ. ಆದರೆ ಏ ಕರಿ ಟೊಪ್ಪಿ ಎಂದ್ರು, ಇದು ಅವಮಾನ ಮಾಡಿದ್ದು. ಇದಕ್ಕೆ ನಾನು ಪ್ರತಿರೋಧ ವ್ಯಕ್ತಪಡಿಸಿದೆ. ನನಗೆ ಒದ್ದಿದ್ದಾರೆ, ನನ್ನ ಮೇಲೆ ಹಲ್ಲೆ ಆಗಿದೆ ಎಂದು ಮುನಿರತ್ನ ಹೇಳಿಕೆ ನೀಡಿದ್ದಾರೆ.
Tensions escalated further in Bengaluru as BJP MLA Munirathna made serious allegations following the dramatic confrontation at Deputy Chief Minister D.K. Shivakumar’s “Bengaluru Nadige” event at JP Park. Munirathna claimed Congress workers assaulted him, tore off his RSS cap, and dragged his clothes, alleging that “if police hadn’t been present, they would have killed me.” He accused DK Shivakumar of bringing in rowdies from Kanakapura and Ramanagara to attack him.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm