ಬ್ರೇಕಿಂಗ್ ನ್ಯೂಸ್
27-12-20 02:59 pm Mangaluru Correspondent ಕರಾವಳಿ
ಮಂಗಳೂರು, ಡಿ.27; ಇದೇ ಮೊದಲ ಬಾರಿಗೆ ತುಳು ಭಾಷೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರವೊಂದು ಆರು ಭಾಷೆಗಳಿಗೆ ಡಬ್ ಆಗಲು ತಯಾರಾಗಿದೆ. ಹೌದು.. ಹೊಸ ನಮೂನೆಯ, ಹೊಸ ಪರಿಕಲ್ಪನೆಯ ಈ ಚಿತ್ರದ ಹೆಸರು "21 ಗ್ರ್ಯಾಮ್ಸ್".
ಚಿತ್ರತಂಡದ ಪ್ರಕಾರ, ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ. ತುಳು, ಕನ್ನಡ, ಹಿಂದಿ, ತಮಿಳು, ತೆಲುಗು, ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರ ತಯಾರಾಗಲಿದ್ದು ಏಕಕಾಲದಲ್ಲಿ ತೆರೆಗೆ ತರಲು ಯೋಜನೆ ಹಾಕಲಾಗಿದೆ.
ಅಂದಹಾಗೆ, ಈ ಸಿನಿಮಾ ನಿರ್ಮಾಣ ಮಾಡುತ್ತಿರೋದು ಮಂಗಳೂರಿನ ಸೋಚ್ ಸಿನಿಮಾ ಟೀಮ್, ಎಲ್.ಎಸ್. ಮೀಡಿಯಾ ಮತ್ತು ಓಮ್ ಸ್ಟುಡಿಯೋ ಈ ಮೂರು ಸಂಸ್ಥೆಗಳ ಜಂಟಿ ಪಾಲುದಾರಿಕೆಯಲ್ಲಿ. ಸಿನಿಮಾದಲ್ಲಿ ನಾಯಕನಾಗಿ ಕರಾವಳಿ ಮೂಲದ ಬಹುಭಾಷಾ ನಟ ಅಮಿತ್ ರಾವ್ ಮತ್ತು ನಾಯಕಿಯಾಗಿ ತೆಲುಗು, ಕನ್ನಡ, ತುಳು, ಕೊಂಕಣಿ ಭಾಷೆಯಲ್ಲಿ ಮಿಂಚು ಹರಿಸಿರುವ ಸೋನಲ್ ಮೊಂತೇರೊ ನಟಿಸಲಿದ್ದಾರೆ. ಸೋನಲ್ ಮೊಂತೇರೊ ಚಿತ್ರದ ನಿರ್ಮಾಣದ ಜವಾಬ್ದಾರಿಯಲ್ಲೂ ಸಹಭಾಗಿತ್ವ ಹೊತ್ತುಕೊಂಡಿದ್ದಾರೆ.
ನಾಯಕ ನಟ ಅಮಿತ್ ರಾವ್ ಚಿತ್ರದ ಬಗ್ಗೆ ಮಾತನಾಡುತ್ತಾ ಪೂರ್ತಿ ಸಿನಿಮಾ ಆರಂಭದಿಂದ ಕೊನೆ ತನಕ ಸಸ್ಪೆನ್ಸ್ ಆಗಿಯೇ ಇರಲಿದೆ. ಹೀರೋ, ಹಿರೋಯಿನ್ ಕೇಂದ್ರಿತ ಆಗಿದ್ದರೂ, ಮನೋವಿಜ್ಞಾನದ ಹಿನ್ನೆಲೆಯ ಕಥಾ ಹಂದರ ಇದೆ. ಈ ರೀತಿಯ ವಿಭಿನ್ನ ಕಥಾನಕ ಇರುವುದು ತುಳು ಚಿತ್ರರಂಗದಲ್ಲೇ ವಿಶೇಷ. ಈ ಚಿತ್ರಕ್ಕಾಗಿ ಹೇರ್ ಸ್ಟೈಲ್ ವಿಭಿನ್ನ ರೀತಿ ಬದಲಾಯಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಸಿನಿಮಾದ ನಿರ್ದೇಶಕ ಸ್ಟೀಫನ್ ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ ದುಡಿದ ಅನುಭವ ಹೊಂದಿದ್ದೇನೆ. ತುಳು ಭಾಷೆಯಲ್ಲಿ ಸಿನಿಮಾ ಮಾಡಲು ಮೊದಲ ಪ್ರಯತ್ನ. ನಿರ್ಮಾಣ ತಂಡದ ಪ್ರೋತ್ಸಾಹದ ಕಾರಣದಿಂದಾಗಿ ತುಳು ಭಾಷೆಯ ಚಿತ್ರವನ್ನು ಆರು ಭಾಷೆಗಳಿಗೆ ಡಬ್ ಮಾಡಲು ಸಿದ್ದತೆ ನಡೆಸಿದ್ದೇವೆ ಎಂದು ತಿಳಿಸಿದರು.
ಸಿನಿಮಾ ನಿರ್ಮಾಪಕರಲ್ಲಿ ಒಬ್ಬರಾದ ಅವಿನಾಶ್ ಶೆಟ್ಟಿ ಮಾತನಾಡಿ ತುಳು ಸಿನಿಮಾ ರಂಗದಲ್ಲಿ ವಿಭಿನ್ನ ರೀತಿಯ ಸಾಹಸಕ್ಕೆ ನಾವು ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.
ಇನ್ನೋರ್ವ ನಿರ್ಮಾಪಕ ಎಲ್.ಎಸ್.ಮೀಡಿಯಾ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್ ಮಾತನಾಡಿ, ತುಳುವರು ಎಲ್ಲಾ ಭಾಷೆಯ ಸಿನಿಮಾಗಳನ್ನು ಮುಕ್ತವಾಗಿ ಸ್ವೀಕರಿಸುತ್ತಾರೆ. ಅದೇ ರೀತಿ ತುಳುವರ ನಿರ್ಮಾಣದ ಈ ಸಿನಿಮಾವನ್ನು ಎಲ್ಲಾ ಭಾಷಿಗರು ಪ್ರೀತಿಯಿಂದ ಸ್ವೀಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಇನ್ನೋರ್ವ ನಿರ್ಮಾಪಕಿ ಹಾಗೂ ನಟಿ ಸೋನಲ್ ಮೊಂತೇರೊ ಮಾತನಾಡಿ, ಸಿನಿಮಾ ಕತೆಯನ್ನು ಕೇಳಿದ ಸಂದರ್ಭದಲ್ಲಿ ಕಥೆಯ ಬಗ್ಗೆ ಅಗಾಧ ಕುತೂಹಲ ಮೂಡಿತ್ತು. ಕಥೆಯಿಂದ ಪ್ರೇರಣೆ ಪಡೆದು ಸಿನಿಮಾ ನಿರ್ಮಾಣ ತಂಡದಲ್ಲಿ ಪಾಲುದಾರಿಕೆ ಒಪ್ಪಿದ್ದೇನೆ. ತುಳು ಸಿನಿಮಾವನ್ನು ಮತ್ತೊಂದು ಮಜಲಿಗೆ " 21 ಗ್ರ್ಯಾಮ್ಸ್ " ಚಿತ್ರ ಕೊಂಡೊಯ್ಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಇನ್ನೋರ್ವ ನಿರ್ಮಾಪಕ ಚರಣ್ ಸುವರ್ಣ, ಸಿನಿಮಾದ ವಸ್ತ್ರ ವಿನ್ಯಾಸಕಿ ರಶ್ಮಿ ಅನೂಪ್ ರಾವ್, ಅನುಪಮ ಸುವರ್ಣ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
A Mangalore psychological thriller 24 grams Tulu movie will be the first in India to be released in 6 different languages
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm