ಬ್ರೇಕಿಂಗ್ ನ್ಯೂಸ್
15-09-25 01:58 pm Mangalore Correspondent ಕರಾವಳಿ
ಬೆಳ್ತಂಗಡಿ, ಸೆ.15 : ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಸೌಜನ್ಯಾ ಮಾವ ವಿಠಲ ಗೌಡರನ್ನು ಕರೆದೊಯ್ದು ಸ್ಥಳ ಶೋಧ ಮತ್ತು ಅಲ್ಲಿ ನೆಲದ ಮೇಲ್ಗಡೆ ಪತ್ತೆಯಾಗಿರುವ ತಲೆಬುರುಡೆ, ಎಲುಬುಗಳನ್ನು ಸಂಗ್ರಹಿಸಲಿದ್ದಾರೆ.
ವಾರದ ಹಿಂದೆ ವಿಠಲ ಗೌಡರನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾಗ ಅಲ್ಲಿ ಶವದ ಅವಶೇಷಗಳು ಪತ್ತೆಯಾಗಿದ್ದವು. ಆನಂತರ, ಎರಡನೇ ಬಾರಿಗೆ ಅಲ್ಲಿ ಕರೆದೊಯ್ದಿದ್ದ ವೇಳೆ ಹಲವಾರು ತಲೆಬುರುಡೆ ಮತ್ತು ಅವಶೇಷಗಳನ್ನು ನೋಡಿದ್ದಾಗಿ ವಿಠಲ ಗೌಡರ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೊಮ್ಮೆ ಶೋಧ ನಡೆಸುತ್ತಾರಾ ಎಂಬ ಶಂಕೆ ಮೂಡಿತ್ತು.
ಇದೀಗ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬೆಳ್ತಂಗಡಿಗೆ ಬಂದಿದ್ದು, ಭಾನುವಾರ ರಾತ್ರಿ 9 ಗಂಟೆ ವರೆಗೂ ಎಸ್ಐಟಿ ಕಚೇರಿಯಲ್ಲಿ ತಂಡದ ಅಧಿಕಾರಿಗಳ ಜೊತೆಗೆ ತುರ್ತು ಮೀಟಿಂಗ್ ನಡೆಸಿದ್ದಾರೆ. ಹೀಗಾಗಿ ಸೋಮವಾರದಿಂದಲೇ ಸ್ಥಳ ಶೋಧ ಕಾರ್ಯಾಚರಣೆ ನಡೆಯುತ್ತೆ ಎನ್ನುವ ಮಾಹಿತಿಗಳಿದ್ದವು. ಇದಕ್ಕೆ ಪೂರಕ ಎನ್ನುವಂತೆ ಪುತ್ತೂರು ವಿಭಾಗಾಧಿಕಾರಿ ಮತ್ತು ಫಾರೆನ್ಸಿಕ್ ತಜ್ಞರನ್ನೂ ಸ್ಥಳಕ್ಕೆ ಬರುವಂತೆ ತಿಳಿಸಲಾಗಿತ್ತು. ಆದರೆ ಈಗ ಕೊನೆ ಕ್ಷಣದಲ್ಲಿ ಬದಲಾವಣೆಯಾಗಿದ್ದು, ಶೋಧ ಕಾರ್ಯಾಚರಣೆಯನ್ನು ಮುಂದಕ್ಕೆ ಹಾಕಿದ್ದಾರೆಂಬ ಮಾಹಿತಿ ಇದೆ. ಈಗ ಬೇಡ, ಮುಂದಿನ ದಿನಾಂಕ ತಿಳಿಸುತ್ತೇವೆ ಎಂದು ಎಸ್ಐಟಿ ಮುಖ್ಯಸ್ಥರು ಹೇಳಿದ್ದಾರೆಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಈ ಹಿಂದೆ ದೂರುದಾರ ಚಿನ್ನಯ್ಯ ಹೇಳಿದ್ದ 15 ಪಾಯಿಂಟ್ ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾಗ ಹೆಚ್ಚಿನ ಸಾಕ್ಷ್ಯ ಸಿಕ್ಕಿರಲಿಲ್ಲ. ಈಗ ವಿಠಲ ಗೌಡ ಕಾಡಿನ ಮೇಲ್ಮೈನಲ್ಲಿಯೇ ಶವಗಳ ಎಲುಬುಗಳು, ಐದಕ್ಕೂ ಹೆಚ್ಚು ತಲೆಬುರುಡೆ ಸಿಕ್ಕಿದೆ ಎಂದು ಹೇಳುತ್ತಿರುವುದರಿಂದ ಇದು ಹೇಗೆ ಸಾಧ್ಯ, ಪಂಚಾಯತ್ ದಾಖಲೆಗಳಲ್ಲಿ ಬಂಗ್ಲೆಗುಡ್ಡೆ ಕಾಡಿನಲ್ಲಿ ಶವಗಳನ್ನು ಹೂತಿರುವ ಮಾಹಿತಿ ಇದೆಯಾ ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪೂರಕ ದಾಖಲೆಗಳನ್ನು ಸಂಗ್ರಹಿಸಿದ ಬಳಿಕವೇ ಸ್ಥಳ ಶೋಧ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪಂಚಾಯತ್ ದಾಖಲೆಗಳಲ್ಲಿ ಇಲ್ಲದೇ ಇದ್ದರೆ, ಬಂಗ್ಲೆಗುಡ್ಡೆ ಕಾಡಿನಲ್ಲಿ ಇರುವ ಮನುಷ್ಯನ ಎಲುಬುಗಳ ಬಗ್ಗೆ ಹೊಸತಾಗಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವ ಸಾಧ್ಯತೆಯಿದೆ. ಹಿಂದೆ ನೇತ್ರಾವತಿ ಸ್ನಾನಘಟ್ಟದಲ್ಲಿ ಶವ ಹೂತಿದ್ದಾಗಿ ಮಾರ್ಕ್ ಹಾಕಿದ್ದಾಗ ಪಂಚಾಯತ್ ಮಾಜಿ ಅಧ್ಯಕ್ಷರು ಮತ್ತು ಫಾರೆನ್ಸಿಕ್ ವೈದ್ಯ ಮಹಾಬಲ ಶೆಟ್ಟಿ, ಆ ಜಾಗದಲ್ಲಿ ಬಹಳಷ್ಟು ಹೆಣಗಳನ್ನು ಹೂತು ಹಾಕಲಾಗಿತ್ತು. ಅಲ್ಲಿ 80ಕ್ಕೂ ಹೆಚ್ಚು ಬುರುಡೆ ಸಿಕ್ಕಿದರೂ ಅಚ್ಚರಿ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಚಿನ್ನಯ್ಯ ತಿಳಿಸಿದ ಆ ಜಾಗದಲ್ಲಿ ಮಾತ್ರ ಯಾವುದೇ ಬುರುಡೆಗಳು ಸಿಕ್ಕಿರಲಿಲ್ಲ.
The Special Investigation Team (SIT) probing the Dharmasthala case had prepared to carry out a search operation in the Banglegudde forest area near the Netravathi bathing ghat. The plan was to take accused Vithal Gowda to the spot and collect human skulls and skeletal remains reportedly found on the surface of the forest land.
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm