H.D. Kumaraswamy, Priyank Kharge: ಜೆಡಿಎಸ್ ನಿರ್ನಾಮ ಆಗಿದೆ ಎಂದ ಖರ್ಗೆ ; ಲೆಫ್ಟ್ - ರೈಟ್ ಕ್ಲಾಸ್ ತೆಗೆದುಕೊಂಡ ಹೆಚ್‌ಡಿಕೆ, ಜೆಡಿಎಸ್‌ನಿಂದ ಎಷ್ಟು ಜನ ಲೀಸ್‌ ಮೇಲೆ ಕಾಂಗ್ರೆಸ್‌ ಪಕ್ಷಕ್ಕೆ ಬಂದಿದ್ದಾರೆ, ನಿಮ್ಮಪ್ಪನನ್ನ ಕೇಳಿ !

16-01-26 09:38 pm       Bangalore Correspondent   ಕರ್ನಾಟಕ

ಜೆಡಿಎಸ್ ನಿರ್ನಾಮ ಆಗಿದೆ ಎಂದಿದ್ದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಹೆಚ್‌ಡಿ ಕುಮಾರಸ್ವಾಮಿ  ವ್ಯಂಗ್ಯವಾಡಿದ್ದರು. ಜೆಡಿಎಸ್‌ಗೆ ಪ್ರಿಯಾಂಕ್ ಖರ್ಗೆ ಸರ್ಟಿಫಿಕೇಟ್ ಬೇಕಿಲ್ಲ ಎಂದಿದ್ದಾರೆ.

ಬೆಂಗಳೂರು, ಜ.16: ಜೆಡಿಎಸ್ ನಿರ್ನಾಮ ಆಗಿದೆ ಎಂದಿದ್ದ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಹೆಚ್‌ಡಿ ಕುಮಾರಸ್ವಾಮಿ  ವ್ಯಂಗ್ಯವಾಡಿದ್ದರು. ಜೆಡಿಎಸ್‌ಗೆ ಪ್ರಿಯಾಂಕ್ ಖರ್ಗೆ ಸರ್ಟಿಫಿಕೇಟ್ ಬೇಕಿಲ್ಲ ಎಂದಿದ್ದಾರೆ. ಜೆಡಿಎಸ್‌ನಿಂದ ಎಷ್ಟು ಜನ ಲೀಸ್‌ ಮೇಲೆ ಕಾಂಗ್ರೆಸ್‌ ಪಕ್ಷಕ್ಕೆ ಬಂದಿದ್ದಾರೆ, ನಿಮ್ಮಪ್ಪನನ್ನು ಕೇಳಿ. ಸಿಎಂರಿಂದ ಹಿಡಿದು ಎಷ್ಟು ಜನ ಲೀಸ್ ಮೇಲೆ ನಿಮ್ಮ‌ಪಾರ್ಟಿಗೆ ತಗೊಂಡಿದ್ದಿರಾ? ಎಷ್ಟು ಜನ ಮಂತ್ರಿಗಳನ್ನ ಮಾಡಿಕೊಂಡಿದ್ದಿರಾ? ಅಂತ ಪ್ರಶ್ನಿಸಿದ್ದಾರೆ.

ನಿಮ್ಮ ಪಾರ್ಟಿ ಹಣೆ ಬರಹ ನೋಡಿಕೊಳ್ಳಿ ;

‌ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಒಬ್ಬರು ಲೀಸ್ ಅವಧಿ ಮುಗಿದಿದೆ ನನ್ನ ಸಿಎಂ ಮಾಡಿ ಅಂತಾರೆ. ಇನ್ನೊಬ್ಬರು ಲೀಸ್ ಅವಧಿ ಮುಗಿದಿಲ್ಲ, ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಅಂತಾರೆ. ಮೊದಲು ನಿಮ್ಮ ಪಾರ್ಟಿ ಹಣೆಬರಹ ನೋಡಿಕೊಳ್ಳಿ ಅಂತ ಪ್ರಿಯಾಂಕ್ ಖರ್ಗೆಗೆ ತಿರುಗೇಟು ಕೊಟ್ರು.

ದುರಹಂಕಾರ ಬಿಡದೇ ಇದ್ರೆ

ಮುಂಬೈನಲ್ಲಿ ಇವತ್ತು ಏನಾಗಿದೆ ಅದೇ ಆಗೋದು. ಕರ್ನಾಟಕ ಹಣೆಬರಹ ಮುಂದಿನ ಚುನಾವಣೆಯಲ್ಲಿ ಇದೇ ರೀತಿ ಬರುತ್ತೆ. ಬಿಹಾರದಲ್ಲಿ 6 ಸೀಟು ತಗೊಂಡಿದ್ದಿರಲ್ಲಾ? ಈ ದುರಂಹಕಾರ ಬಿಡದೆೇ ಇದ್ರೆ ಇದೇ ಪರಿಸ್ಥಿತಿ ಬರುತ್ತೆ. ಏನ್ ಅಭಿವೃದ್ಧಿ ಮಾಡಿದ್ದೀರಾ ಅಂತಾ ಜನರು ನಿಮಗೆ ಅಧಿಕಾರ ಕೊಡ್ತಾರೆ? ಅಂತ ಪ್ರಶ್ನಿಸಿದ್ದಾರೆ.

ನೀವು ಮಾಡಿದ್ದು ಏನಪ್ಪ?

ಅವರ ತಂದೆ ಮೊನ್ನೆ ಏನ್ ಮಾತಾಡಿದ್ದಾರೆ? ಮೈಸೂರು ಕನಕಪುರದ ತರ ಅಭಿವೃದ್ಧಿ ಮಾಡಿಕೊಡಿ‌ ಅಂದಿದ್ದಾರೆ. ನೀವು ಮಾಡಿದ್ದು ಏನು? ಖರ್ಗೆ ಅವರು 40 ವರ್ಷ ರಾಜಕಾರಣದಲ್ಲಿ ಇದ್ದಾರೆ. ಪ್ರಿಯಾಂಕ್ ಖರ್ಗೆ 8-9 ವರ್ಷ ಮಂತ್ರಿ,‌ ನೀವು ಮಾಡಿದ್ದು ಏನಪ್ಪ? ಅದಕ್ಕೆ ನಿಮಗೆ ಜನ ಅಧಿಕಾರ ಕೊಡ್ತಾರಾ..? ಅಂತ ಹೆಚ್‌ಡಿಕೆ ಖಾರವಾಗಿ ಪ್ರಶ್ನಿಸಿದ್ರು.

ನನ್ನ ಪಕ್ಷದ ಬಗ್ಗೆ ಚಿಂತೆ ಮಾಡಬೇಡಿ;

ನಮ್ಮ‌ ಪಕ್ಷ ಉಳಿದಿದ್ಯೊ ಇಲ್ವೋ ಅನ್ನೋದು ಜನ ತೀರ್ಮಾನ ಮಾಡ್ತಾರೆ. ನಿಮ್ಮ ಪರಿಸ್ಥಿತಿ ಎಲ್ಲಿಗೆ ಬರ್ತಿರಾ ಅಂತಾ ಸ್ವಲ್ಪ ಯೋಚನೆ ಮಾಡಿ. ಏನ್ ಏನ್ ಮಾಡ್ತಿದ್ದಿರಿ, ನಿಮ್ಮನ್ನ ಎಲ್ಲಿಗೆ ತಗೊಂಡು ಹೋಗ್ತಾರೆ ಜನ? ಅದನ್ನ ಸ್ವಲ್ಪ ಯೋಚನೆ ಮಾಡಿಕೊಳ್ಳಿ. ನನ್ನ ಪಕ್ಷದ ಬಗ್ಗೆ ಚಿಂತೆ ಮಾಡಬೇಡಿ ಅಂತ ಹೆಚ್‌ಡಿಕೆ ಹೇಳಿದ್ರು.

ಬಿಜೆಪಿ ಜೊತೆ ಮೈತ್ರಿ ಆಗಿದ್ದಕ್ಕೆ ನಿಮ್ಮ ಹಣೆ ಬರಹ ಗೊತ್ತಾಯ್ತು. ಇಲ್ಲಿ ಇರುವ ಕಾಂಗ್ರೆಸ್ ನಾಯಕರಿಗೆ ಬೇರೆ ಪಕ್ಷದಿಂದ ಬಗ್ಗೆ ತೊಂದರೆ ಇಲ್ಲ, ಅವರಿಗೆ ಇರೋದೇ ಜೆಡಿಎಸ್, ಜನತಾದಳ ಫಿನಿಶ್ ಆದ್ರೆ ಅವರು ಉಳಿಯುತ್ತಾರೆ. ಜನತಾದಳ ಮೇಲೆ ಬಂದ್ರೆ ಅವರ ಲೈಫ್ ಏನ್ ಅಂತಾ ಗೊತ್ತಾ? ಜಸ್ಟ್ ನಾವು ಬಿಜೆಪಿ ಜೊತೆ ಲೋಕಸಭೆಯಲ್ಲಿ ಮೈತ್ರಿ ಮಾಡಿಕೊಂಡಿದಕ್ಕೆ ನಿಮ್ಮ ಹಣೆ ಬರಹ ಏನ್ ಅಂತಾ ಗೊತ್ತಾಯ್ತು ಅಂತ ಹೇಳಿದ್ರು.

ಜೆಡಿಎಸ್‌- ಬಿಜೆಪಿ ಮೈತ್ರಿ ಕಾರಣಕ್ಕೆ ನಿಮಗೆ ನಿದ್ದೆ ಬರುತ್ತಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಮೈತ್ರಿಯಿಂದ ನಿಮ್ಮ ಹಣೆಬರಹ 9 ಸೀಟುಗಳಿಗೆ ಬಂದಿದೆ. ನಮ್ಮ ಕೆಲ ದೋಷಗಳಿಂದ ನೀವು 9 ಸೀಟು ಗೆದ್ದಿದ್ದೀರಿ. ಇಲ್ಲದಿದ್ದರೆ ರಾಜ್ಯದಲ್ಲಿ ಅಧಿಕಾರ ಇದ್ದರೂ ನಿಮ್ಮ ನ್ಯಾಷನಲ್ ಪಾರ್ಟಿ 3 ಅಥವಾ 4 ಸೀಟುಗಳಿಗೆ ಇಳಿಯುತ್ತಿತ್ತು. ಜೆಡಿಎಸ್ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಿದೆಯೋ ಅಥವಾ ಕಾಂಗ್ರೆಸ್ ಪಕ್ಷ ನಾಶ ಆಗುತ್ತಿದೆಯೋ? ಹೇಳುವಿರಾ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

Former CM H.D. Kumaraswamy strongly countered Priyank Kharge’s remark that JDS is finished, accusing Congress of surviving by “leasing” leaders from other parties. Taking sharp digs at Congress leadership and governance, Kumaraswamy warned that arrogance could cost the party dearly in future elections.