ಬ್ರೇಕಿಂಗ್ ನ್ಯೂಸ್
16-01-26 02:26 pm HK News Desk ದೇಶ - ವಿದೇಶ
ನವದೆಹಲಿ, ಜ.15 : ಭಾಷಾ ವಿಜ್ಞಾನದ ಇತಿಹಾಸದಲ್ಲಿ ಸಂಚಲನ ಮೂಡಿಸುವಂತಹ ಹೊಸ ವಾದವೊಂದನ್ನು ಪುಣೆ ಮೂಲದ ಸಂಶೋಧಕ ಡಾ. ರಾಹುಲ್ ಖಾಟೆ ಮಂಡಿಸಿದ್ದಾರೆ. ಇಂಗ್ಲಿಷ್ ಪದಗಳ ಮೂಲವು ಕೇವಲ ಊಹಾತ್ಮಕವಾದ 'ಪ್ರೊಟೊ-ಇಂಡೋ-ಯುರೋಪಯನ್' (PIE) ಭಾಷೆಯಲ್ಲಿದೆ ಎನ್ನುವ ಪಾಶ್ಚಿಮಾತ್ಯ ಸಿದ್ಧಾಂತವನ್ನು ಅವರು ತಳ್ಳಿಹಾಕಿದ್ದು, ಇಂಗ್ಲಿಷ್ನ ಮೂಲ ಬೇರುಗಳು ನೇರವಾಗಿ ಸಂಸ್ಕೃತದ ಧಾತುಗಳಲ್ಲಿವೆ ಎಂದು ಪ್ರತಿಪಾದಿಸಿದ್ದಾರೆ.
ಎರಡು ಸಾವಿರ ವರ್ಷಗಳ ಹಿಂದೆಯೇ ಸಂಸ್ಕೃತದ ವ್ಯಾಕರಣಕಾರ, ಭಾಷಾ ಶಾಸ್ತ್ರದ ಪಿತಾಮಹ ಎಂದು ಕರೆಯಲ್ಪಡುವ ಪಾಣಿನಿ ಮಹರ್ಷಿ ಬರದೆ ಎರಡು ಸಾವಿರಕ್ಕೂ ಹೆಚ್ಚು ಮೂಲಧಾತು ಪದಗಳನ್ನು ಅವಲೋಕಿಸಿ ರಾಹುಲ್ ಖಾಟೆ ತನ್ನ ಸಂಶೋಧನೆ ಮಂಡಿಸಿದ್ದಾರೆ. 'ಆರ್ಗನೈಸರ್' ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ, ಡಾ.ಖಾಟೆ ಅವರು ಈ ಕೆಳಗಿನ ಪ್ರಮುಖ ಅಂಶಗಳನ್ನು ಮುಂದಿಟ್ಟಿದ್ದಾರೆ.
ಇಲ್ಲಿಯವರೆಗೆ ಭಾಷಾ ಶಾಸ್ತ್ರಜ್ಞರು ನಂಬಿದ್ದ 'ಪ್ರೊಟೊ-ಇಂಡೋ-ಯುರೋಪಿಯನ್' ಎಂಬುದು ಕೇವಲ ಕಾಲ್ಪನಿಕ ರಚನೆಯಾಗಿದ್ದು, ವಸಾಹತುಶಾಹಿ ಕಾಲದ ವಿದ್ವಾಂಸರು ಸಂಸ್ಕೃತದ ಪ್ರಾಮುಖ್ಯತೆಯನ್ನು ಮರೆಮಾಚಲು ಇದನ್ನು ಬಳಸಿದ್ದಾರೆ ಎಂದು ಅವರು ವಾದಿಸಿದ್ದಾರೆ.
ಸಂಸ್ಕೃತದ ವ್ಯಾಕರಣಕಾರ ಪಾಣಿನಿಯು ಗುರುತಿಸಿರುವ ಸುಮಾರು 2,000ಕ್ಕೂ ಹೆಚ್ಚು ಧಾತುಗಳೇ (Verbal Roots) ಜಗತ್ತಿನ ಪ್ರಮುಖ ಭಾಷೆಗಳ ಮೂಲ ಅಡಿಪಾಯ. ಇಂಗ್ಲಿಷ್ನ ಸಾವಿರಾರು ಪದಗಳು ಈ ಧಾತುಗಳಿಂದಲೇ ಹುಟ್ಟಿಕೊಂಡಿವೆ. ಉದಾಹರಣೆಗೆ, ಇಂಗ್ಲಿಷ್ನ 'Mother' (ಮದರ್) ಪದವು ಸಂಸ್ಕೃತದ ಮಾತೃ ಧಾತುವಿನಿಂದಲೂ, 'Brother' (ಬ್ರದರ್) ಪದವು ಭ್ರಾತೃ ಧಾತುವಿನಿಂದಲೂ ಬಂದಿವೆ. ಹಾಗೆಯೇ 'Name' (ನೇಮ್) ಎಂಬುದು ನಾಮ್ ಧಾತುವಿನ ರೂಪಾಂತರವಾಗಿದೆ. Idea ಎಂಬ ಇಂಗ್ಲಿಷ್ ಪದವು ಇದಂ ಎನ್ನುವ ಸಂಸ್ಕೃತ ಮೂಲದಿಂದ ಬಂದಿದೆ ಎಂದು ತನ್ನ ವರದಿಯಲ್ಲಿ ಹೇಳಿದ್ದಾರೆ.
ಪುಣೆಯ ಈ ಸಂಶೋಧಕರು ಕಂಪ್ಯೂಟರ್ ಭಾಷೆಯ ಪೈಥಾನ್ ಸ್ಕ್ರಿಪ್ಟ್ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಸಂಸ್ಕೃತ ಧಾತುಗಳು ಮತ್ತು ಇಂಗ್ಲಿಷ್ ಪದಗಳ ನಡುವಿನ ಸಂಬಂಧವನ್ನು ಕಂಡುಕೊಂಡಿದ್ದಾರೆ. ಈ ಸಂಶೋಧನೆಯು ಕೇವಲ ಭಾಷಾಶಾಸ್ತ್ರಕ್ಕೆ ಸೀಮಿತವಾಗಿರದೆ, ಇದು "ಬೌದ್ಧಿಕ ವಸಾಹತುಶಾಹಿ" (Decolonization) ಪ್ರಕ್ರಿಯೆಯ ಭಾಗವಾಗಿದೆ. ಸಂಸ್ಕೃತವನ್ನು ಜಗತ್ತಿನ ಭಾಷೆಗಳ ಜನನಿ ಎಂದು ಗುರುತಿಸುವ ಮೂಲಕ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಾಗತಿಕ ಮಟ್ಟದಲ್ಲಿ ತೋರಿಸುವ ಗುರಿ ಹೊಂದಿದೆ.
ಪಾರಂಪರಿಕ ಭಾಷಾಶಾಸ್ತ್ರಜ್ಞರು ಈ ವಾದವನ್ನು ಸವಾಲು ಮಾಡಬಹುದಾದರೂ, ಡಾ. ಖಾತೆ ಅವರ ಈ "ಧಾತು ಕ್ರಾಂತಿ"ಯು ಭವಿಷ್ಯದಲ್ಲಿ ಭಾಷೆಗಳನ್ನು ಕಲಿಯುವ ಮತ್ತು ಇತಿಹಾಸವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸುವ ಸಾಧ್ಯತೆಯಿದೆ.
ಸಂಸ್ಕೃತದ ಧ್ವನಿ ಬೀಜಗಳೇ ಮೂಲ
ಡಾ.ರಾಹುಲ್ ಖಾತೆ ಅವರು ಸಂಸ್ಕೃತದ ಧಾತುಗಳನ್ನು ಕೇವಲ ವ್ಯಾಕರಣದ ಭಾಗವಾಗಿ ನೋಡದೆ, ಅವುಗಳನ್ನು ಸಾವಿರಾರು ವರ್ಷಗಳಿಂದ ವೇದಗಳ ಪಠಣದ ಮೂಲಕ ಅತ್ಯಂತ ನಿಖರವಾಗಿ ಸಂರಕ್ಷಿಸಿಕೊಂಡು ಬಂದಿರುವ "ಆದಿಮ ಧ್ವನಿ ಬೀಜಗಳು" ಎಂದು ಕರೆದಿದ್ದಾರೆ. ಈ 'ಧ್ವನಿ ಬೀಜ'ಗಳೇ ಇಂದಿನ ಆಧುನಿಕ ಇಂಗ್ಲಿಷ್ ಭಾಷೆಯ ಶಬ್ದಕೋಶವಾಗಿ ಹೇಗೆ ರೂಪಾಂತರಗೊಂಡಿವೆ ಎಂಬುದನ್ನು ಅವರು ತಮ್ಮ ಸಂಶೋಧನೆಯಲ್ಲಿ ವಿವರಿಸಿದ್ದಾರೆ. ಈ ಮೂಲಕ, ಇಂಗ್ಲಿಷ್ ಸೇರಿದಂತೆ ಅನೇಕ ಯುರೋಪಿಯನ್ ಭಾಷೆಗಳು ಸಂಸ್ಕೃತದ ಶಾಖೆಗಳೇ ಹೊರತು, ಸಂಸ್ಕೃತಕ್ಕೆ ಸಮಾನಾಂತರವಾದ ಭಾಷೆಗಳಲ್ಲ ಎಂಬುದು ಡಾ.ಖಾಟೆ ಅವರ ಸಂಶೋಧನೆಯ ಸಾರವಾಗಿದೆ.
In a claim stirring debate in linguistic circles, Pune-based researcher Dr. Rahul Khate has argued that English and several European languages originate directly from Sanskrit, not from the hypothetical Proto-Indo-European (PIE) language proposed by Western scholars. Drawing on over 2,000 Sanskrit verbal roots identified by ancient grammarian Panini, Dr. Khate asserts that many English words—such as mother, brother, name, and idea—can be traced back to Sanskrit roots. Using Python-based computational analysis and artificial intelligence, his research highlights structural and phonetic links between Sanskrit dhātus and modern English vocabulary.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
16-01-26 02:26 pm
HK News Desk
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
16-01-26 12:31 pm
Mangalore Correspondent
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm