ಬ್ರೇಕಿಂಗ್ ನ್ಯೂಸ್
24-12-20 10:49 pm Mangaluru Correspondent ಕರಾವಳಿ
ಮಂಗಳೂರು, ಡಿ. 24: ಬ್ರಿಟನ್ ಮೂಲದ ರೂಪಾಂತರಿ ವೈರಸ್ ಕರಾವಳಿಯಲ್ಲಿ ಹುಟ್ಟಿಸಿದ್ದ ಆತಂಕವನ್ನು ಆರೋಗ್ಯ ಇಲಾಖೆ ದೂರ ಮಾಡಿಸಿದೆ. ಡಿ.7ರ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ 66 ಜನ ಬ್ರಿಟನ್ ನಿಂದ ಬಂದಿದ್ದರು. ಎಲ್ಲರನ್ನೂ ಆರೋಗ್ಯ ಇಲಾಖೆ ವತಿಯಿಂದ ಪರೀಕ್ಷೆಗೆ ಒಳಪಡಿಸಿದ್ದು 66 ಮಂದಿಯೂ ನೆಗೆಟಿವ್ ಆಗಿದ್ದಾರೆ.
ಬುಧವಾರ 47 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು 41 ಮಂದಿಯ ವರದಿ ಬಂದಿತ್ತು. ಅವು ನೆಗೆಟಿವ್ ಆಗಿತ್ತು. ಉಳಿದವರನ್ನು ಗುರುವಾರ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದ್ದು ಎಲ್ಲರೂ ಕೋವಿಡ್ ನೆಗೆಟಿವ್ ಆಗಿದ್ದಾರೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ.ರಾಮಚಂದ್ರ ಬಾಯರಿ ಹೇಳಿದ್ದಾರೆ.
66 ಮಂದಿಯ ಪೈಕಿ ಹಲವರು ತಾಯ್ನಾಡಿಗೆ ಬಂದು ಹತ್ತು ದಿನ ಕಳೆದಿತ್ತು. ಎರಡು ದಿನಗಳ ಹಿಂದೆ 15 ಮಂದಿಯಷ್ಟೆ ಇಂಗ್ಲೆಂಡ್ ನಿಂದ ಬಂದಿದ್ದರು. ಅವರು ಸೇರಿದಂತೆ ಈ ಹಿಂದೆ ಬಂದಿದ್ದವರನ್ನೂ ಪರೀಕ್ಷೆ ನಡೆಸಲಾಗಿದೆ. 66 ಮಂದಿಯಲ್ಲಿ ಮೂವರು ಜಿಲ್ಲೆಗೆ ಆಗಮಿಸಿ ಬ್ರಿಟನ್ ಗೆ ಮರಳಿದ್ದಾರೆ. ಇಬ್ಬರು ಬೆಂಗಳೂರಿನಲ್ಲಿದ್ದು ಅಲ್ಲಿಯೇ ಪರೀಕ್ಷೆಗೆ ಒಳಗಾಗಿದ್ದಾರೆ.
ವರದಿ ನೆಗೆಟಿವ್ ಬಂದಿರುವ ಕಾರಣ ಇನ್ನು ಕ್ವಾರಂಟೈನ್ ಆಗುವ ಅವಶ್ಯಕತೆಯಿಲ್ಲ. ಎರಡು ದಿನಗಳ ಹಿಂದೆ ಬಂದವರು ಮಾತ್ರ ಏಳು ದಿನಗಳ ಕಾಲ ಸ್ವಯಂ ಕ್ವಾರಂಟೈನ್ ಆಗುವಂತೆ ಸೂಚಿಸಲಾಗಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಬ್ರಿಟನ್ ವೈರಸ್ ಆತಂಕ ತರುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ಅಧಿಕಾರಿ ಹೇಳಿದ್ದಾರೆ.
20-03-25 01:07 pm
Bangalore Correspondent
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
20-03-25 07:19 pm
HK News Desk
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm