ಬ್ರೇಕಿಂಗ್ ನ್ಯೂಸ್
28-07-25 10:41 pm Mangalore Correspondent ಕರಾವಳಿ
ಮಂಗಳೂರು, ಜುಲೈ 28 : ಧರ್ಮಸ್ಥಳ ಹೆಣ ಹೂತ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ದೂರುದಾರ ವ್ಯಕ್ತಿಯನ್ನು ಸೋಮವಾರ ಧರ್ಮಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಮಧ್ಯಾಹ್ನದಿಂದ ಸಂಜೆಯ ಆರು ಗಂಟೆ ವರೆಗೆ ಸಮಾಧಿ ಸ್ಥಳವನ್ನು ಗುರುತಿಸಲಾಗಿದ್ದು, 13 ಜಾಗಗಳನ್ನು ಗುರುತಿಸಿ ಪೊಲೀಸ್ ಭದ್ರತೆ ನೀಡಲಾಗಿದೆ.
ಮಧ್ಯಾಹ್ನ ವೇಳೆಗೆ ಬಿಗಿ ಭದ್ರತೆಯಲ್ಲಿ ಪೊಲೀಸರು ದೂರುದಾರ ವ್ಯಕ್ತಿಯನ್ನು ನೇತ್ರಾವತಿ ಸ್ನಾನಘಟ್ಟದ ಬಳಿಗೆ ಕರೆತಂದಿದ್ದು, ಅಲ್ಲಿಂದ ರಸ್ತೆ ಬದಿಯ ರಕ್ಷಿತಾರಣ್ಯದ ಒಳಗಡೆ ತೆರಳಿದ್ದಾರೆ. ಎಸ್ಐಟಿ ಅಧಿಕಾರಿಗಳು, ಸ್ಥಳೀಯ ಪೊಲೀಸರು ಮತ್ತು ಡಿಎಆರ್ ಪೊಲೀಸರು ಇದ್ದರು. ಇದಲ್ಲದೆ, ಎಎನ್ಎಫ್ ಪೊಲೀಸ್ ತುಕಡಿಯನ್ನೂ ಸ್ಥಳಕ್ಕೆ ಕರೆಸಲಾಗಿದೆ.
ಕಾಡಿನ ಒಳಗಡೆ ಒಂದೊಂದೇ ಜಾಗವನ್ನು ಗುರುತಿಸಲಾಗಿದ್ದು, ಸಂಜೆಯ ವರೆಗೆ 13 ಸ್ಥಳಗಳನ್ನು ಗುರುತು ಹಾಕಲಾಗಿದೆ ಎಂದು ಅಧಿಕಾರಿಗಳಿಂದ ತಿಳಿದುಬಂದಿದೆ. 15 ಸಮಾಧಿ ಜಾಗವನ್ನು ಗುರುತಿಸಲು ಲೆಕ್ಕ ಹಾಕಿದ್ದರೂ, ಸಂಜೆಯ ವೇಳೆಗೆ ಮಳೆ ಬಂದಿದ್ದು ಮತ್ತು ಕತ್ತಲು ಆವರಿಸಿದ್ದರಿಂದ ಸ್ಥಳ ಶೋಧವನ್ನು ನಿಲ್ಲಿಸಲಾಯಿತು. ಪೊಲೀಸ್ ಬ್ಯಾರಿಕೇಡ್ ಹಾಕಿ ಸಮಾಧಿ ಸ್ಥಳವನ್ನು ಮಾರ್ಕ್ ಹಾಕಲಾಗಿದ್ದು, ಅಲ್ಲಿ ಎಎನ್ಎಫ್ ಪಡೆಯ ಶಸ್ತ್ರಸಜ್ಜಿತ ಪಡೆಯನ್ನು ನಿಯೋಜಿಸಲಾಗಿದೆ. ಒಂದೊಂದು ಜಾಗದಲ್ಲಿ ಇಬ್ಬರು ಪೊಲೀಸರನ್ನು ಕಾವಲು ಹಾಕಲಾಗಿದೆ.
ಎಸ್ಐಟಿ ತಂಡದ ಎಸ್ಪಿಗಳಾದ ಜಿತೇಂದ್ರ ದಯಾಮ ಮತ್ತು ಸಿಎ ಸೈಮನ್ ನೇತೃತ್ವದಲ್ಲಿ ಸ್ಥಳ ಗುರುತು ಹಾಕಲಾಗಿದೆ. ತಂಡಕ್ಕೆ ನಿಯೋಜನೆಗೊಂಡಿರುವ ವಿವಿಧ ಠಾಣೆಗಳ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರುಗಳೂ ಜೊತೆಗಿದ್ದರು. ದೂರುದಾರ ವ್ಯಕ್ತಿಯನ್ನು ಸ್ಥಳಕ್ಕೆ ಕರೆತರುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದು, ಕುತೂಹಲದ ಕಣ್ಣು ನೆಟ್ಟಿದ್ದರು. ಸಮಾಧಿಯನ್ನು ಈಗಲೇ ಅಗೆಯುತ್ತಾರೆಯೇ ಎಂದು ಸ್ಥಳೀಯ ಜನರು ಮತ್ತು ಪೊಲೀಸರು ಮಾಧ್ಯಮ ಮಂದಿಯಲ್ಲಿ ಕೇಳುವಂತಾಗಿತ್ತು. ಆದರೆ ಯಾರ ಪ್ರಶ್ನೆಗಳಿಗೂ ಎಸ್ಐಟಿ ತಂಡ ಉತ್ತರ ನೀಡುತ್ತಿರಲಿಲ್ಲ. ತಮ್ಮ ಪಾಡಿಗೆ ತನಿಖೆಯತ್ತ ಗಮನ ನೆಟ್ಟಿತ್ತು.
ಸದ್ಯಕ್ಕೆ ಸ್ಥಳ ಗುರುತು ಹಾಕುವ ಕೆಲಸ ಮುಂದುವರಿಯುವ ಸಾಧ್ಯತೆಯಿದ್ದು, ಸಮಾಧಿ ಅಗೆತದ ಬಗ್ಗೆ ಬೆಳ್ತಂಗಡಿ ಕೋರ್ಟಿನಿಂದ ಅನುಮತಿ ಪಡೆದು ಶೋಧ ನಡೆಯಲಿದೆ. ತಹಸೀಲ್ದಾರ್ ಅಥವಾ ವಿಭಾಗಾಧಿಕಾರಿ ಸಮ್ಮುಖದಲ್ಲಿ ಸಮಾಧಿ ಅಗೆತ ಆಗಲಿದೆ. ಸದ್ಯಕ್ಕೆ ಗುರುತು ಹಾಕಿರುವ ಸ್ಥಳ ರಕ್ಷಿತಾರಣ್ಯವಾಗಿದ್ದು, ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಕೂಡ ಇದ್ದರು. ಗುರುತು ಹಾಕಿರುವ ಜಾಗ ಕೆಲವು ಕಡೆ ರಸ್ತೆ ಬದಿಯಲ್ಲಿಯೂ ಇದ್ದು, 15-20 ವರ್ಷಗಳ ಹಿಂದಿನ ಘಟನೆಯಾದ್ದರಿಂದ ಆನಂತರ ಭೌಗೋಳಿಕ ಸ್ಥಿತಿ ಬದಲಾವಣೆ ಆಗಿರುವ ಸಾಧ್ಯತೆಯಿದೆ. ಸ್ನಾನಘಟ್ಟದ ಬಳಿಯ ನೇತ್ರಾವತಿ ತಟದ ಕಾಡಿನಲ್ಲೇ ಸದ್ಯಕ್ಕೆ ಮಾರ್ಕ್ ಹಾಕಲಾಗಿದೆ. ಕಾಡಿನಲ್ಲಿ ಮಳೆಯಿಂದಾಗಿ ತಿಗಣೆ ಕಾಟವೂ ಜೋರಾಗಿದ್ದು ಪೊಲೀಸರು ಅದನ್ನು ಸಹಿಸಿಕೊಂಡೇ ಕೆಲಸ ನಿರ್ವಹಿಸಬೇಕಿದ್ದರೆ, ಮಾಧ್ಯಮ ತಂಡವನ್ನು ದೂರವೇ ನಿಲ್ಲಿಸಿದ್ದರಿಂದ ತಿಗಣೆ ಕಾಟ ತಪ್ಪಿತು ಎಂದು ನಿಟ್ಟುಸಿರು ಬಿಡುವಂತಾಗಿತ್ತು.
In a significant development in the Dharmasthala human burial investigation, the Special Investigation Team (SIT) has intensified its probe. On Monday, investigators escorted the main complainant to the suspected burial site near the Netravati riverbank for an on-ground inspection, which lasted from noon until 6 PM.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm