ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತು ತೋರಿದ ಪ್ರಯಾಣಿಕನಿಗೆ ಇಂಡಿಗೋ ವಿಮಾನಗಳಲ್ಲಿ ಪ್ರಯಾಣಿಸದಂತೆ ನಿರ್ಬಂಧ 

03-08-25 05:44 pm       HK News Desk   ದೇಶ - ವಿದೇಶ

ಮುಂಬೈ- ಕೋಲ್ಕತ್ತಾ ನಡುವಿನ ಇಂಡಿಗೋ ವಿಮಾನದಲ್ಲಿ ಆ.1ರಂದು ಸಹ ಪ್ರಯಾಣಿಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ ಪ್ರಯಾಣಿಕನಿಗೆ ಇಂಡಿಗೋ ಸಂಸ್ಥೆ ತನ್ನ ವಿಮಾನದಲ್ಲಿ ಇನ್ಯಾವತ್ತೂ ಹಾರಾಟ ಮಾಡದಂತೆ ಆಜೀವ ನಿಷೇಧ ಹೇರಿದೆ.

ನವದೆಹಲಿ, ಆ.3: ಮುಂಬೈ- ಕೋಲ್ಕತ್ತಾ ನಡುವಿನ ಇಂಡಿಗೋ ವಿಮಾನದಲ್ಲಿ ಆ.1ರಂದು ಸಹ ಪ್ರಯಾಣಿಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ ಪ್ರಯಾಣಿಕನಿಗೆ ಇಂಡಿಗೋ ಸಂಸ್ಥೆ ತನ್ನ ವಿಮಾನದಲ್ಲಿ ಇನ್ಯಾವತ್ತೂ ಹಾರಾಟ ಮಾಡದಂತೆ ಆಜೀವ ನಿಷೇಧ ಹೇರಿದೆ.

6E138 ಇಂಡಿಗೋ ವಿಮಾನದಲ್ಲಿ ಘಟನೆ ನಡೆದಿದ್ದು, ಲ್ಯಾಂಡ್ ಆಗುತ್ತಲೇ ವಿಮಾನ ಸಿಬಂದಿ ಆರೋಪಿತ ವ್ಯಕ್ತಿಯನ್ನು ಕೋಲ್ಕತ್ತಾ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರಯಾಣಿಕನನ್ನು ಅಶಿಸ್ತಿನ ವ್ಯಕ್ತಿ ಎಂದು ಘೋಷಿಸಿದ್ದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಅಶಿಸ್ತಿನ ಗ್ರಾಹಕರನ್ನು ಒಳಗೊಂಡ ಘಟನೆಯ ಬಗ್ಗೆ ಅಗತ್ಯ ಕ್ರಮಕ್ಕಾಗಿ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ. 

ವಿಮಾನಗಳಲ್ಲಿ ಅಶಿಸ್ತಿನ ವರ್ತನೆ ನಿಯಂತ್ರಿಸುವ ನಮ್ಮ ಬದ್ಧತೆಗೆ ಅನುಗುಣವಾಗಿ, ಆ ವ್ಯಕ್ತಿಯನ್ನು ಯಾವುದೇ ಇಂಡಿಗೋ ವಿಮಾನಗಳಲ್ಲಿ ಹಾರಾಟ ನಡೆಸದಂತೆ ನಿಷೇಧ ಹೇರಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. 

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಘಟನೆಯ ವಿಡಿಯೋ ಕ್ಲಿಪ್‌ನಲ್ಲಿ ತನ್ನ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ಇನ್ನೊಬ್ಬ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡುತ್ತಾರೆ. ಏಟು ತಿಂದ ವ್ಯಕ್ತಿ ಅಳುವುದು, ಸಿಬಂದಿ ಬಳಿಕ ಅವರನ್ನು ಸ್ಥಳದಿಂದ ಕರೆದೊಯ್ಯುವ ವಿಡಿಯೋ ವೈರಲ್ ಆಗಿತ್ತು. ‌

IndiGo has banned a man from all its flights after a video showed him slapping a co-traveller on board a Mumbai-Kolkata flight, while the latter was suffering a panic attack.