ಬ್ರೇಕಿಂಗ್ ನ್ಯೂಸ್
25-07-25 08:25 pm Mangalore Correspondent ಕರಾವಳಿ
ಮಂಗಳೂರು, ಜುಲೈ 25 : ಧರ್ಮಸ್ಥಳ ಹೆಣ ಹೂತ ಪ್ರಕರಣದ ಬಗ್ಗೆ ತನಿಖೆಗೆ ನೇಮಕಗೊಂಡ ವಿಶೇಷ ತನಿಖಾ ತಂಡದ ಡಿಐಜಿ ಎಂ.ಎನ್ ಅನುಚೇತ್ ಮತ್ತು ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಮಂಗಳೂರಿಗೆ ಆಗಮಿಸಿದ್ದು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ.
ಮಂಗಳೂರಿನ ಎಸ್ಪಿ ಕಚೇರಿ ಬಳಿಯಿರುವ ಐಜಿಪಿ ಕಚೇರಿಯಲ್ಲಿ ಅನುಚೇತ್, ಜಿತೇಂದ್ರ ದಯಾಮ ಮತ್ತು ದ.ಕ. ಎಸ್ಪಿ ಡಾ.ಅರುಣ್ ಅವರು ಐಜಿಪಿ ಜೊತೆಗೆ ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಸಂಜೆ ಐದು ಗಂಟೆ ವೇಳೆಗೆ ಮಂಗಳೂರಿಗೆ ಆಗಮಿಸಿದ ಅನುಚೇತ್ ನೇರವಾಗಿ ಕದ್ರಿ ಮಲ್ಲಿಕಟ್ಟೆಯ ಸರ್ಕಾರಿ ಅತಿಥಿ ಬಂಗಲೆಯಲ್ಲಿ ಎಸ್ಐಟಿ ತಂಡದ ಇತರ ಕೆಲವು ಸದಸ್ಯರನ್ನು ಭೇಟಿಯಾಗಿ ಅಲ್ಲಿಂದ ಐಜಿ ಕಚೇರಿಗೆ ತೆರಳಿದ್ದಾರೆ.







ಐಜಿ ಕಚೇರಿಯಲ್ಲಿ ಧರ್ಮಸ್ಥಳ ಪ್ರಕರಣದ ಬಗ್ಗೆ ನಾಲ್ವರು ಐಪಿಎಸ್ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಸಭೆಯ ಬಳಿಕ ಹೊರಬಂದ ಅನುಚೇತ್ ಅವರನ್ನು ಧರ್ಮಸ್ಥಳಕ್ಕೆ ಯಾವಾಗ ಎಂದು ಪತ್ರಕರ್ತರು ಕೇಳಿದಾಗ, ನೋ ಕಮೆಂಟ್ಸ್ ಎನ್ನುತ್ತ ಕಾರು ಹತ್ತಿಕೊಂಡು ತೆರಳಿದರು. ಅದೇ ಕಾರಿನಲ್ಲಿ ಎಸ್ಪಿ ಜಿತೇಂದ್ರ ದಯಾಮ ಕೂಡ ತೆರಳಿದ್ದಾರೆ.
ಇದೇ ವೇಳೆ, ಬೆಳ್ತಂಗಡಿ ಪೊಲೀಸ್ ಠಾಣೆ ಪಕ್ಕದಲ್ಲಿ ಎಸ್ಐಟಿ ತಂಡಕ್ಕೆ ಪ್ರತ್ಯೇಕ ಕಚೇರಿ ತೆರೆಯಲಾಗಿದ್ದು ಕಂಪ್ಯೂಟರ್, ಪ್ರಿಂಟರ್ ಹಾಕಲಾಗಿದೆ. ಅಲ್ಲದೆ, ಎಸ್ಐಟಿ ತಂಡದ ಸಹಾಯವಾಣಿ ಸಂಖ್ಯೆಯನ್ನೂ ಆರಂಭಿಸಲಿದ್ದಾರೆ ಎನ್ನುವ ಮಾಹಿತಿ ಇದೆ. ಇನ್ನೆರಡು ದಿನದಲ್ಲಿ ತಂಡಕ್ಕೆ ನೇಮಕಗೊಂಡಿರುವ ಎಲ್ಲ ಇನ್ಸ್ ಪೆಕ್ಟರ್, ಎಸ್ಐಗಳು ಕೂಡ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬಂದು ರಿಪೋರ್ಟ್ ಮಾಡಲಿದ್ದಾರೆ.
ಧರ್ಮಸ್ಥಳ ಪ್ರಕರಣ ಭಾರೀ ಸಂಚಲನ ಎಬ್ಬಿಸಿರುವುದರಿಂದ ಸೀಮಿತ ಅವಧಿಯಲ್ಲಿ ತನಿಖೆ ಮಾಡಿ ಮುಗಿಸಲು ಪೊಲೀಸ್ ತಂಡ ಮುಂದಾಗಿರುವಂತಿದೆ. ಇಲಾಖಾ ಮಟ್ಟದಲ್ಲಿ ಅಧಿಕಾರಿಗಳಿಗೆ ಆರ್ಡರ್ ತಲುಪಿದ ಬೆನ್ನಲ್ಲೇ ತಮ್ಮ ಕೆಲಸ ಆರಂಭಿಸಲಿದ್ದಾರೆ. ಸದ್ಯಕ್ಕೆ ಇಬ್ಬರು ಎಸ್ಪಿಗಳನ್ನು ತಂಡದಲ್ಲಿ ಸೇರಿಸಲಾಗಿದ್ದು ಅವರೇ ತನಿಖೆಯ ನೇತೃತ್ವ ವಹಿಸಲಿದ್ದಾರೆ. ಅಲ್ಲದೆ, ತಂಡದ ಮುಖ್ಯಸ್ಥ ಪ್ರಣವ್ ಮೊಹಂತಿ ಕೂಡ ಇನ್ನೆರಡು ದಿನದಲ್ಲಿ ಬೆಳ್ತಂಗಡಿಗೆ ಆಗಮಿಸುವ ಸಾಧ್ಯತೆ ಇದೆ.
ಎಸ್ಐಟಿ ರಚನೆಯ ಆದೇಶದಲ್ಲಿ ತನಿಖಾ ಪ್ರಗತಿಯ ಬಗ್ಗೆ ಐಜಿಪಿ ಮತ್ತು ಡಿಜಿಪಿಗೆ ವರದಿ ನೀಡುವಂತೆ ಸೂಚಿಸಲಾಗಿತ್ತು. ಇದರಂತೆ, ಅನುಚೇತ್ ಮತ್ತು ತಂಡ ಮೊದಲಿಗೆ ಐಜಿಪಿ ಭೇಟಿ ಮಾಡಿರುವ ಸಾಧ್ಯತೆಯಿದೆ.
The investigation into the sensational Dharmasthala mass burial case has gained momentum with senior police officers holding an emergency meeting in Mangaluru on Thursday. DIG M.N. Anucheth and SP Jitendra Kumar Dayama, key members of the Special Investigation Team (SIT), arrived in the city and met with Western Range IGP Amit Singh to discuss the case.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm