ಬ್ರೇಕಿಂಗ್ ನ್ಯೂಸ್
26-06-25 12:02 pm Mangalore Correspondent ಕರಾವಳಿ
ಪುತ್ತೂರು, ಜೂ.26 : ಪುತ್ತೂರಿನ ಆನೆಮಜಲು ಪರಿಸರದಲ್ಲಿರುವ ಸಂತ ಅಂತೋಣಿ ಚರ್ಚ್ ಸ್ಮಶಾನದಲ್ಲಿ ಸಮಾಧಿಯೊಂದನ್ನು ಅಗೆದು ಅಸ್ಥಿಪಂಜರವನ್ನು ಕಳವು ಮಾಡಲು ಯತ್ನಿಸಿದ ಘಟನೆ ನಡೆದಿದ್ದು ಚರ್ಚ್ ಧರ್ಮಗುರು ಬಾಲ್ತಿಜಾರ್ ಪಿಂಟೊ ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚರ್ಚ್ ಅಧೀನದ ಸ್ಮಶಾನದಲ್ಲಿ ದುಷ್ಕರ್ಮಿಗಳು ಸಮಾಧಿ ಒಂದನ್ನು ಒಡೆದು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಮಾಧಿ ಒಡೆದು ಹಾಕಿರುವ ಬಗ್ಗೆ ಪೊಲೀಸ್ ದೂರು ನೀಡಿದ್ದೇವೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಸ್ಥಿಪಂಜರ ಅಥವಾ ತಲೆಬುರುಡೆ ಕಳವು ಮಾಡುವ ಉದ್ದೇಶದಿಂದ ಯಾರೋ ದುಷ್ಕರ್ಮಿಗಳು ಈ ಕೆಲಸ ಮಾಡಿರಬಹುದೆಂಬ ಶಂಕೆ ಇದೆ. ಹಲವಾರು ವರ್ಷಗಳಿಂದ ಈ ಸ್ಮಶಾನ ಇಲ್ಲಿದ್ದು, ಇಂತಹ ಯಾವುದೇ ಘಟನೆಗಳು ಈವರೆಗೂ ನಡೆದಿರಲಿಲ್ಲ. ಈ ಕಾರಣದಿಂದ ಸಿಸಿ ಕ್ಯಾಮರಾ ಇಲ್ಲಿ ಅಗತ್ಯವಿರಲಿಲ್ಲ. ಇನ್ನು ಸ್ಮಶಾನಕ್ಕೂ ಸಿಸಿ ಕ್ಯಾಮರಾ ಅಳವಡಿಸುವ ಚಿಂತನೆ ನಡೆಸಲಾಗಿದೆ ಎಂದು ಧರ್ಮಗುರು ಪ್ರತಿಕ್ರಿಯಿಸಿದ್ದಾರೆ.

ಪುತ್ತೂರು ನಗರ ಠಾಣೆ ಇನ್ಸ್ಪೆಕ್ಟರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಅರುಣ್ ಕುಮಾರ್ ತಿಳಿಸಿದ್ದಾರೆ.
An incident of attempted grave desecration has been reported from the cemetery of St. Anthony’s Church located in the Anemajalu area near Puttur. Miscreants are alleged to have broken open a tomb in an apparent attempt to steal human remains. The incident came to light when the Church priest, Fr. Balthazar Pinto, filed a complaint with the Puttur Town Police Station. According to the complaint, unknown individuals vandalized one of the graves within the Church’s cemetery premises, possibly with the intention of taking skeletal remains or a skull.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm