ಬ್ರೇಕಿಂಗ್ ನ್ಯೂಸ್
20-06-25 09:54 pm Dinesh, Mangaluru ಕರಾವಳಿ
ಉಳ್ಳಾಲ, ಜೂ.20 : ಸೋಮೇಶ್ವರ ಕಡಲ ಕಿನಾರೆಯಲ್ಲಿ ಐದು ಗಾಳಿ ಮರಗಳನ್ನ ಅರಣ್ಯ ಇಲಾಖೆಯವರೇ ಕಡಿದು ಲೂಟಿಗೈದ ವಿಷಯ ಸುದ್ದಿಯಾಗುತ್ತಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಕ್ಷೇತ್ರದ ಶಾಸಕ, ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದ್ದಾರೆ. ಮಿನಿಸ್ಟರ್ ಆದೇಶ ಇದೆಯೆಂದು ಬೋಂಗು ಬಿಟ್ಟ ಬಾಡಿ ಬಿಲ್ಡರ್ ಅರಣ್ಯ ರಕ್ಷಕನೇ ಮರಗಳಿಗೆ ಕೊಡಲಿ ಹಾಕಿರೋದಾಗಿ ಆರೋಪ ಕೇಳಿಬಂದಿದೆ.
ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಅಪಾಯಕಾರಿಯಾಗುವ ಮರಗಳು ಮತ್ತು ಸೋಮೇಶ್ವರ ಬೀಚಲ್ಲಿ ಮುರಿದು ನಿಂತಿದ್ದ ಒಂದು ಗಾಳಿ ಮರವನ್ನ ತೆರವುಗೊಳಿಸುವಂತೆ ಪುರಸಭೆ ಆಡಳಿತವು ಅರಣ್ಯ ಇಲಾಖೆಗೆ ಮನವಿ ಮಾಡಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಜನನಿಬಿಡ ಪ್ರದೇಶಗಳ ಅಪಾಯಕಾರಿ ಮರಗಳನ್ನ ಹಾಗೆಯೇ ಬಿಟ್ಟು ಸಮುದ್ರ ತೀರದಲ್ಲಿ ಅಳಿವಿನಂಚಿನಲ್ಲಿರುವ ಐದು ಬೃಹತ್ ಗಾತ್ರದ ಗಾಳಿ ಮರಗಳನ್ನ ಕಡಿದು ವಾಹನಗಳಲ್ಲಿ ತುಂಬಿಸಿ ಲೂಟಿಗೈದಿದ್ದರು. ಬೀಚಲ್ಲಿ ಅನಧಿಕೃತ ಗೂಡಂಗಡಿ ಹೊಂದಿರುವ ಕಾಂಗ್ರೆಸ್ ಪುಡಾರಿಯೇ ಮರಗಳನ್ನ ಕಡಿಸಲು ಲಾಬಿ ನಡೆಸಿದ್ದನೆಂದು ಸ್ಥಳೀಯರು ಆರೋಪಿಸಿದ್ದರು. ಮೊನ್ನೆ ಬುಧವಾರ ಸಂಜೆ ಸ್ಥಳಕ್ಕೆ ಬಂದಿದ್ದ ಕೋಟೆಕಾರು ಶಾಖೆ ಉಪ ವಲಯ ಅರಣ್ಯ ರಕ್ಷಕ ರೋಹಿತ್ ಎಂಬವರು ಸಚಿವರ ಆದೇಶವಿದೆ, ಹಾಗಾಗಿ ಮರಗಳನ್ನ ಕಡಿಯುತ್ತಿರೋದಾಗಿ ಸಬೂಬು ನೀಡಿ ಮರಗಳ ಮಾರಣ ಹೋಮ ನಡೆಸಿರೋದಾಗಿ ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭಾಸ್ಕರ ಗಟ್ಟಿ ಆರೋಪಿಸಿದ್ದಾರೆ.




ಬುಧವಾರ ಸಂಜೆ ಸೋಮೇಶ್ವರ ಸಮುದ್ರ ತೀರದಲ್ಲಿ ಅಳಿವಿನಂಚಿನಲ್ಲಿದ್ದ ಸುಮಾರು ಐವತ್ತು ವರುಷಕ್ಕೂ ಅಧಿಕ ವಯಸ್ಸಿನ ಐದು ಬಲಿತ ಗಾಳಿ ಮರಗಳನ್ನ ಅರಣ್ಯ ಇಲಾಖೆಯವರು ಬುಡ ಸಮೇತ ಕಡಿದು ಹಾಕಿ ವಾಹನದಲ್ಲಿ ಸಾಗಾಟ ನಡೆಸುತ್ತಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಭಾಸ್ಕರ ಗಟ್ಟಿಯವರು ಸ್ಥಳದಲ್ಲಿದ್ದ ಅರಣ್ಯ ರಕ್ಷಕ ರೋಹಿತ್ ರನ್ನು ಉದ್ದೇಶಿಸಿ ಸೋಮನಾಥ ಕ್ಷೇತ್ರ ವ್ಯಾಪ್ತಿಯ ಮರಗಳನ್ನ ವಿನಾಕಾರಣ ಯಾಕಾಗಿ ಕಡಿಯುತ್ತಿದ್ದೀರೆಂದು ಪ್ರಶ್ನಿಸಿದ್ದಾರೆ. ಇದಕ್ಕೆ ಹಾರಿಕೆಯ ಉತ್ತರ ನೀಡಿದ ರೋಹಿತ್ ಸಚಿವರ ಆದೇಶವೆಂದು ಸಬೂಬು ನೀಡಿದ್ದರಂತೆ. ಇದಲ್ಲದೆ ನಮಗೂ ಖರ್ಚಿಗೇನಾದರೂ ಮಾಡಬೇಕಲ್ಲವೇ ಎಂದು ಹೇಳಿಕೊಂಡಿದ್ದಾಗಿ ಭಾಸ್ಕರ್ ತಿಳಿಸಿದ್ದಾರೆ.
ಅರಣ್ಯ ರಕ್ಷಕ ರೋಹಿತ್, ಪೊಲೀಸ್ ಅಧಿಕಾರಿ ರೀತಿ ಪೋಸು ನೀಡುತ್ತಾ ಜನಸಾಮಾನ್ಯರಲ್ಲಿ ಉದ್ಧಟತನ ತೋರುವುದು, ಸರಕು ವಾಹನಗಳನ್ನ ಅಡ್ಡ ಹಾಕಿ ಜೇಬು ತುಂಬಿಸುತ್ತಿರುವ ಆರೋಪಗಳು ಕೇಳಿಬಂದಿವೆ.
A fresh controversy has erupted along the Someshwara coastal belt near Ullal after allegations surfaced that a forest guard himself illegally axed five large trees, claiming he was acting on orders from a "minister." The incident has prompted Karnataka Assembly Speaker and local MLA U.T. Khader to direct a detailed inquiry into the matter by the Mangaluru Division Deputy Conservator of Forests.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm