ಬ್ರೇಕಿಂಗ್ ನ್ಯೂಸ್
20-06-25 03:54 pm Udupi Correspondent ಕರಾವಳಿ
ಕುಂದಾಪುರ, ಜೂನ್ 20 : ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಬಾರದು ಎಂದು ತಾಕೀತು ಮಾಡಿ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕುಂದಾಪುರ ಪೊಲೀಸರು ನೋಟಿಸ್ ನೀಡಿದ್ದಾರೆ.
ಕುಂದಾಪುರದಲ್ಲಿ `ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’ ಎಂಬ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಅವರಿಂದ ಜೂ.20, 21 ಮತ್ತು 22ರಂದು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಪೊಲೀಸ್ ಅಧಿಕಾರಿಗಳು, ಉಪನ್ಯಾಸದಲ್ಲಿ ರಾಜಕೀಯ ಮಾತನಾಡಬಾರದು ಹಾಗೂ ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದು ಆಯೋಜಕರಿಗೆ ಹಾಗೂ ಸೂಲಿಬೆಲೆ ಅವರಿಗೆ ಷರತ್ತು ವಿಧಿಸಿ ನೊಟೀಸ್ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಕ್ರವರ್ತಿ ಸೂಲಿಬೆಲೆ, ಕರ್ನಾಟಕದಲ್ಲಿ ರಾಜಕೀಯ ಮಾತಾಡಬಾರದು ಎಂಬ ಕಾನೂನು ಯಾವಾಗಿನಿಂದ ಜಾರಿಯಾಗಿದೆ ಎಂದು ಪ್ರಶ್ನಿಸಿದ್ದಾರೆ. ಇದು ನನ್ನನ್ನು ಅಘೋಷಿತ ಗಡಿಪಾರು ಮಾಡಿಸುವ ಪ್ರಯತ್ನವಾಗಿದೆ. ನನಗೆ ನೋಟಿಸ್ ಹೊಸತಲ್ಲ, ಬಹಳ ಕಡೆಗಳಲ್ಲಿ ನೋಟಿಸ್ ಕೊಟ್ಟಿದ್ದಾರೆ. ಈ ಬಾರಿ ರಾಜಕೀಯ ಮಾತನಾಡಬಾರದು, ಯಾವುದೇ ನಾಯಕರ ತೇಜೋವಧೆ ಮಾಡಬಾರದು ಎಂದಿದ್ದಾರೆ. ನೆಹರು, ಇಂದಿರಾ, ರಾಜೀವ್ ಕುರಿತಂತೆ ಮಾತನಾಡಬಾರದು ಎಂದು ಅರ್ಥವೇ? ಘಜ್ನಿ, ಘೋರಿ, ಔರಂಗಜೇಬ್ ಮುಂತಾದ ಕ್ರೂರಿಗಳ ತೇಜೋವಧೆ ಮಾಡಬಾರದೆಂದು ಅರ್ಥವೇ? ಈ ಬಗ್ಗೆ ಕುಂದಾಪುರ ಪೊಲೀಸರೇ ಮಾಹಿತಿ ಕೊಟ್ಟರೆ ಉತ್ತಮ. ನಾನು ಕುಂದಾಪುರಕ್ಕೆ ಬರಬಾರದೆಂದು ಹೇಳುವವರು ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ, ನಾನು ಕುಂದಾಪುರಕ್ಕೆ ಬಂದೇ ಬರುತ್ತೇನೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮ ಆಯೋಜಕ ನಿರಂಜನ್ ಶೆಟ್ಟಿ ಪ್ರತಿಕ್ರಿಯಿಸಿದ್ದು ಎನ್ ಎಸ್ ಯುಐ ಕಡೆಯವರು ಚಕ್ರವರ್ತಿ ಸೂಲಿಬೆಲೆ ಕುಂದಾಪುರಕ್ಕೆ ಬರಲು ಬಿಡಬಾರದು ಎಂದು ಪೊಲೀಸರಿಗೆ ಮನವಿ ನೀಡಿದ್ದಾರೆ. ಕಾಶ್ಮೀರದ ವಿಚಾರ ಮಾತನಾಡದೇ ಅಖಂಡ ಭಾರತದ ಬಗ್ಗೆ ಉಪನ್ಯಾಸ ಅಸಾಧ್ಯ. ಕಾಶ್ಮೀರ ಕಾಂಗ್ರೆಸ್ ಕಾಲದಲ್ಲಿ ಸಮಸ್ಯೆ ಆಗಿ ಉಳಿದಿತ್ತು. ಈ ವಿಚಾರ ಜನರಿಗೆ ತಿಳಿಯಬಾರದು ಅನ್ನೋದು ಇವರ ಉದ್ದೇಶ ಇರಬಹುದು. ಕಾಂಗ್ರೆಸ್ ಬಣ್ಣ ಬಯಲಾಗುತ್ತೆ ಎನ್ನುವ ಕಾರಣಕ್ಕೆ ತಡೆಯಲು ಮುಂದಾಗಿದ್ದಾರೆ. ನಾವು ಕಾರ್ಯಕ್ರಮ ಮಾಡಿಯೇ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
A controversy has erupted in Kundapura after police issued a notice to noted orator and activist Chakravarthy Sulibele ahead of his scheduled lecture series titled “Now, Only After Building Akhand Bharat Will I Rest”. The event is scheduled to be held on June 20, 21, and 22.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 09:19 pm
HK News Staffer
ವಿಶೇಷ ಪೂಜೆಗೆ ಬೆತ್ತಲೆ ಫೋಟೊ ಕಳಿಸು, 30 ಲಕ್ಷ ಕೊಡ್...
03-05-26 02:31 pm
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm