ಬ್ರೇಕಿಂಗ್ ನ್ಯೂಸ್
10-06-25 07:30 pm Mangalore Correspondent ಕರಾವಳಿ
ಮಂಗಳೂರು, ಜೂನ್ 10 : ಪೊಲೀಸರ ವಿರುದ್ಧ ಆಂದೋಲನ ಮಾಡ್ತೀವಿ, ಬೀದಿಗೆ ಇಳಿಯುತ್ತೇವೆ, ಹಿಂದುಗಳನ್ನು ಮುಟ್ಟಿದರೆ ಜಾಗ್ರತೆ, ಗೂಂಡಾವರ್ತನೆ ಎಂದೆಲ್ಲಾ ಹೇಳುವ ಮೂಲಕ ರಾಜ್ಯ ಬಿಜೆಪಿ ನಾಯಕರು ಜಿಲ್ಲೆಯ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಯತ್ನ ಮಾಡಿದ್ದಾರೆ. ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡ್ತಾರೆ, ಅದು ಬಿಟ್ಟು ನಿಮಗೆ ಬೇಕಾದಂತೆ ಕೆಲಸ ಮಾಡೋಕ್ಕಿರುವುದಲ್ಲ. ಯಾರ ಮೇಲೆ ಸುಳ್ಳು ಕೇಸು ಹಾಕಿದ್ದಾರೆ ಅಂತ ಆಧಾರ ಸಹಿತ ಹೇಳಲಿ. ಏನು ಬೇಕಾದ್ರೂ ಮಾತಾಡಿ ಹೋಗ್ತೀವಿ ಅಂದ್ರೆ ನಾವು ಒಪ್ಪುವುದಿಲ್ಲ. ಇದರ ಬಗ್ಗೆ ಕ್ರಮ ಆಗಬೇಕೆಂದು ಗೃಹ ಇಲಾಖೆಯನ್ನು ಆಗ್ರಹಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಗೃಹ ಸಚಿವರಾಗಿ ಕೆಲಸ ಮಾಡಿದವರು ಈ ರೀತಿ ಕ್ಷುಲ್ಲಕವಾಗಿ ಮಾತನಾಡಬಾರದು, ಪೊಲೀಸರು ಯಾರ ಮನೆಗೂ ಹೋಗಬಾರದು ಅಂತೀರಿ.. ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡುತ್ತಾರೆ, ಕಾನೂನು ಮೀರಿ ಮಾಡಿದ್ರೆ ನ್ಯಾಯಾಲಯ ಇದೆ, ಪ್ರಶ್ನೆ ಮಾಡಬಹುದು. ಅದು ಬಿಟ್ಟು ಪೊಲೀಸರಿಗೆ ಧಮ್ಕಿ ಹಾಕುವುದು ಸರಿಯಲ್ಲ.
ಕರಾವಳಿಯಲ್ಲಿ ಸುದೀರ್ಘ ಕಾಲ ಆಡಳಿತ ಮಾಡಿದ್ದು ಕಾಂಗ್ರೆಸ್. ಇಲ್ಲಿ ಶಾಂತಿ ಸ್ಥಾಪನೆಗಾಗಿ ಕೋಮು ನಿಗ್ರಹ ದಳ ಮಾಡಿದ್ರೆ ಅದನ್ನು ಪ್ರಶ್ನೆ ಮಾಡುತ್ತೀರಿ, ಅದನ್ನು ಮಾಡಿಲ್ಲಾಂದ್ರೆ ಅದ್ಯಾಕೆ ಮಾಡಿಲ್ಲ ಅಂತ ಕೇಳುತ್ತೀರಿ. ಬಿಜೆಪಿಗೆ ಸದಾ ಕರಾವಳಿಯಲ್ಲಿ ಗೊಂದಲ ಇರಬೇಕು, ಸೌಹಾರ್ದ ಇರಬಾರದು, ಇದರ ನಡುವೆ ಬೇಳೆ ಬೇಯಿಸುವ ಕೆಲಸ ಆಗುತ್ತಿರಬೇಕು. ನಾವಿದಕ್ಕೆ ಅವಕಾಶ ಕೊಡಲ್ಲ ಎಂದರು.
ಮಂಗಳೂರಿನ ಸಂಸದರು ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಮಾತ್ರ ಯಾಕೆ ಎನ್ಐಎಗೆ ಕೊಡಿಸಿದ್ದಾರೆ. ಜಿಲ್ಲೆಯ ಬಗ್ಗೆ ಕಾಳಜಿ ಇರುತ್ತಿದ್ದರೆ ಅಶ್ರಫ್, ಅಬ್ದುಲ್ ರಹಿಮಾನ್ ಕೇಸನ್ನೂ ಕೊಡಿಸಬೇಕಿತ್ತು. ಈ ಕುರಿತ ಆದೇಶದಲ್ಲಿ ಆರೋಪಿಗಳಿಗೆ ಪಿಎಫ್ಐ ಸಂಪರ್ಕದ ಅನುಮಾನ ಇದೆಯೆಂದು ಹೇಳಿದೆ. ಕೇವಲ ಅನುಮಾನದ ಮೇಲೆ ತನಿಖೆಗೆ ಆದೇಶ ನೀಡುವುದಕ್ಕಾಗುತ್ತಾ.. ಯಾವ ಮಾನದಂಡದ ಮೇಲೆ ಅಂತ ಬೇಕಲ್ವಾ.. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ ಅಂತ ಯಾಕೆ ಮಾಡುತ್ತೀರಿ. ಪ್ರವೀಣ್ ನೆಟ್ಟಾರು ಕೊಲೆ ಬಳಿಕದ ಎಲ್ಲ ಕೋಮು ಆಧಾರಿತ ಹತ್ಯೆಗಳ ಬಗ್ಗೆಯೂ ಎನ್ಐಎ ತನಿಖೆ ಮಾಡಲಿ. ಸತ್ಯ ಏನೆಂದು ಹೊರಬರುತ್ತದೆ ಎಂದು ಹೇಳಿದರು.
ಎನ್ಐಎ ತನಿಖೆ ಕೊಡುವಾಗ ರಾಜ್ಯ ಸರಕಾರದ ಅನುಮತಿ ಪಡೆಯಬೇಕಿತ್ತು. ಅದನ್ನು ಮಾಡಿಲ್ಲ. ಇದಲ್ಲದೆ, ಈ ಎನ್ಐಎ ತನಿಖೆಯ ಅಗತ್ಯ ಮತ್ತು ಔಚಿತ್ಯದ ಬಗ್ಗೆ ಚರ್ಚೆಯಾಗಬೇಕಿದೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಐವಾನ್ ಡಿಸೋಜ ಹೇಳಿದರು.
Congress MLC Ivan D’Souza launched a sharp attack against BJP leaders on Monday, accusing them of attempting to demoralize the police force in Dakshina Kannada through provocative statements and threats.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
07-08-25 03:26 pm
Mangalore Correspondent
Dharmasthala Temple, NIA, Bomb: ಕುಕ್ಕರ್ ಬಾಂಬ್...
07-08-25 11:19 am
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm