ಬ್ರೇಕಿಂಗ್ ನ್ಯೂಸ್
21-12-20 05:57 pm Mangalore Correspondent ಕರಾವಳಿ
ಮಂಗಳೂರು, ಡಿ.21: ಈಗೆಲ್ಲಾ ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನೋದು ವಿಚಿತ್ರ ಹುಚ್ಚು ಸೃಷ್ಟಿಸಿದೆ. ವಧು ವರರನ್ನು ಮಾಡೆಲ್ ಗಳ ರೀತಿ ಬಿಂಬಿಸಲು ಹೋಗಿ ಏನೋ ಗಿಮಿಕ್ ಮಾಡುವ ಸಾಹಸ ಮಾಡಿ, ವಿವಾದಕ್ಕೆ ಕಾರಣವಾಗುತ್ತಿದ್ದಾರೆ. ಕೆಲವು ಸನ್ನಿವೇಶಗಳಲ್ಲಿ ಆಕ್ರೋಶಕ್ಕೂ ಗುರಿಯಾಗುತ್ತಿದ್ದಾರೆ. ಕೇರಳದಲ್ಲಿ ನಡೆದಿರುವ ಹೊಸ ರೀತಿಯ ಫೋಟೊ ಶೂಟ್ ಒಂದು ಮತ್ತೆ ವಿವಾದಕ್ಕೆ ಸೃಷ್ಟಿಸಿದೆ.
ಯುವಜೋಡಿ ಋಷಿಗಳ ರೀತಿ ವೇಷ ತೊಟ್ಟು ಹಸಿಬಿಸಿ ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು ಫೋಟೊಗಳು ಭಾರೀ ವೈರಲ್ ಆಗಿದೆ. ತಿಂಗಳ ಹಿಂದೆ ಕೇರಳದಲ್ಲಿ ಇದೇ ರೀತಿ ಕಾಫಿ ತೋಟದಲ್ಲಿ ನಡೆಸಿದ್ದ ಪೋಸ್ಟ್ ವೆಡ್ಡಿಂಗ್ ಹಸಿಬಿಸಿ ಫೋಟೋ ಶೂಟ್ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಕೇರಳದ ಮತ್ತೊಂದು ಜೋಡಿ ಪ್ರೀವೆಡ್ಡಿಂಗ್ ಫೋಟೋಶೂಟ್ ನೆಪದಲ್ಲಿ ಹಿಂದುಗಳ ಋಷಿ ಪರಂಪರೆಯನ್ನು ಅಣಕಿಸುವ ರೀತಿ ಕಾನ್ಸೆಪ್ಟ್ ಇಟ್ಟುಕೊಂಡು ಕಾಡಿನ ಮಧ್ಯೆ ಚಿತ್ರ ವಿಚಿತ್ರ ಭಂಗಿಗಳಿಂದ ಫೋಟೊ ತೆಗೆಸಿಕೊಂಡಿದ್ದು ಹಿಂದು ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ವಿಶ್ವಾಮಿತ್ರ ಮೇನಕೆಯರೋ ಎನ್ನುವಂತೆ ಯುವಕ - ಯುವತಿ ಋಷಿಗಳ ಬಟ್ಟೆ ಧರಿಸಿಕೊಂಡು ತೀರಾ ಕೆಳಮಟ್ಟದ ಹಸಿಬಿಸಿಯ ದೃಶ್ಯಗಳಿಗೆ ಪೋಸು ನೀಡಿದೆ. ಮಲಯಾಳಂ ಭಾಷೆಯ ಹಳೆಯ ವಯಸ್ಕರ ಚಿತ್ರಗಳನ್ನು ನೆನಪಿಸುವಂತಿದೆ ಅಲ್ಲಿನ ದೃಶ್ಯಗಳು. ಈ ಫೊಟೋಗಳು ಇನ್ಸ್ಟಾ ಗ್ರಾಮ್ ಮತ್ತು ಫೇಸ್ಬುಕ್ ನಲ್ಲಿ ಭಾರೀ ವೈರಲ್ ಆಗಿದ್ದು ಜನ ಕೆಟ್ಟದಾಗಿ ಕಮೆಂಟ್ ಮಾಡಿದ್ದಲ್ಲದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೋಟೋಶೂಟ್ ಹೆಸರಿನಲ್ಲಿ ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ತ್ರಿಶ್ಯೂರಿನ ಋಗ್ವೇದ ಬ್ಯೂಟಿಕ್ ಎನ್ನುವ ಫೋಟೊ ಸ್ಟುಡಿಯೋ ಸಹಯೋಗದಲ್ಲಿ ನಡೆದ ಈ ಫೋಟೋ ಶೂಟ್ ಅನ್ನು 1988 ರಲ್ಲಿ ಮಲಯಾಳಂನಲ್ಲಿ ಬಂದಿದ್ದ ವೈಶಾಲಿ ಚಿತ್ರದಲ್ಲಿನ ದೃಶ್ಯಗಳನ್ನು ಮಾದರಿಯಾಗಿಟ್ಟು ಚಿತ್ರ ಸೆರೆಹಿಡಿಯಲಾಗಿದೆ ಎನ್ನಲಾಗಿದೆ. ತೃಶ್ಶೂರಿನ ಅಭಿಜಿತ್ ಹಾಗೂ ಮಾಯಾ ಎಂಬ ಯುವಜೋಡಿ ಪ್ರಿ ವೆಡ್ಡಿಂಗ್ ಶೂಟ್ ಗಾಗಿ ವಿಭಿನ್ನ ಪೋಸು ನೀಡಿ ಈಗ ಇಡೀ ಕೇರಳದಲ್ಲಿ ವೈರಲ್ ಆಗಿದ್ದಾರೆ.
Kerala Couple Photshoot in Rushis Costume lands in controversy after the pictures became viral on Social Media.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm