ಬ್ರೇಕಿಂಗ್ ನ್ಯೂಸ್
06-05-25 04:02 pm Mangalore Correspondent ಕರಾವಳಿ
ಮಂಗಳೂರು, ಮೇ 5 : ಸುಹಾಸ್ ಶೆಟ್ಟಿ ಕೊಲೆಗೆ ಪ್ರತಿಯಾಗಿ ಕೊಂಚಾಡಿಯಲ್ಲಿ ಮೀನು ವ್ಯಾಪಾರಿಗೆ ಚೂರಿ ಇರಿತಕ್ಕೆ ಯತ್ನಿಸಿದ ಪ್ರಕರಣ ಸಂಬಂಧಿಸಿ ನಟೋರಿಯಸ್ ರೌಡಿ ಲೋಕಿ ಯಾನೆ ಲೋಕೇಶ್ ಕೋಡಿಕೆರೆ ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಮೇ 2ರಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್ ಘೋಷಣೆ ಸಂದರ್ಭದಲ್ಲಿ ಬೆಳ್ಳಂಬೆಳಗ್ಗೆ ಮೀನು ವ್ಯಾಪಾರಿ ಮೊಹಮ್ಮದ್ ಲುಕ್ಮಾನ್ ಎಂಬ ಯುವಕನಿಗೆ ಹಲ್ಲೆಗೈದು ಕಲ್ಲು ಎತ್ತಿ ಹಾಕಿ ಕೊಲ್ಲುವ ಯತ್ನ ನಡೆದಿತ್ತು. ಇನ್ನೋವಾ ಕಾರಿನಲ್ಲಿ ಬಂದಿದ್ದ ಆರು ಮಂದಿಯ ತಂಡ ಕೃತ್ಯ ನಡೆಸಿತ್ತು. ಆನಂತರ, ಸ್ಥಳೀಯ ಮಹಿಳೆಯೊಬ್ಬರು ಬೊಬ್ಬೆ ಹಾಕಿದ್ದರಿಂದ ಆಗಂತುಕರು ಯುವಕನನ್ನು ಬಿಟ್ಟು ಹೋಗಿದ್ದರು.
ಪ್ರಕರಣದಲ್ಲಿ ಲಿಖಿತ್, ರಾಕೇಶ್, ಧನರಾಜ್ ಮತ್ತು ಪ್ರಶಾಂತ್ ಶೆಟ್ಟಿ ಎಂಬ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇವರು ರೌಡಿ ಲೋಕಿಯ ಸಹಚರರಾಗಿದ್ದು, ಲೋಕಿ ಹೇಳಿದ್ದರಿಂದ ಈ ಕೃತ್ಯ ಮಾಡಿದ್ದೇವೆಂದು ಒಪ್ಪಿಕೊಂಡಿದ್ದರಿಂದ ಪೊಲೀಸರು ಲೋಕೇಶ್ ನನ್ನು ಬಂಧನ ಮಾಡಿದ್ದಾರೆ. ಇದೇ ವೇಳೆ, ಲೋಕೇಶ್ ಕೋಡಿಕೆರೆ ಫೋಟೋವನ್ನೂ ಜಾಲತಾಣದಲ್ಲಿ ಹಾಕಿ ಮುಂದಿನ ಟಾರ್ಗೆಟ್ ಇವನೇ ಎಂದು ಕೆಲವರು ಪೋಸ್ಟ್ ಹಾಕಿದ್ದು ವೈರಲ್ ಆಗಿತ್ತು.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸೂಚನೆಯಂತೆ, ಎಲ್ಲ ಠಾಣೆಗಳ ವ್ಯಾಪ್ತಿಯಲ್ಲೂ ಕೋಮು ದ್ವೇಷದ ಪ್ರಕರಣಗಳ ಹಿನ್ನೆಲೆಯಿರುವ ಆರೋಪಿಗಳ ಲಿಸ್ಟ್ ಮಾಡಲಾಗಿದ್ದು, ಅವರ ಮೇಲೆ ನಿಗಾ ಇಡುವುದು, ಅಗತ್ಯ ಬಿದ್ದರೆ ವಶಕ್ಕೆ ಪಡೆಯುವುದನ್ನು ಮಾಡುತ್ತಿದ್ದಾರೆ. ಲೋಕೇಶ್ ಕೋಡಿಕೆರೆಯನ್ನೂ ಇದೇ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದು, ಈತನ ಸಹಚರರೇ ಕೃತ್ಯ ಎಸಗಿದ್ದು ಕಂಡುಬಂದಿದ್ದರಿಂದ ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದ್ದಾರೆ. ಲೋಕಿ ವಿರುದ್ಧ ಸುರತ್ಕಲ್ ಮತ್ತು ಪಣಂಬೂರು ಠಾಣೆಗಳಲ್ಲಿ ರೌಡಿ ಲಿಸ್ಟ್ ಇದೆಯೆಂದು ಕಾವೂರು ಪೊಲೀಸರು ತಿಳಿಸಿದ್ದಾರೆ.
In a major operation aimed at preventing communal violence and maintaining law and order, Kavoor police have arrested notorious rowdy-sheeter Kodikere Loki. The arrest is part of an ongoing crackdown on individuals linked to old communal cases and those posing a threat to public peace in the region.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm