ಬ್ರೇಕಿಂಗ್ ನ್ಯೂಸ್
01-05-25 04:01 pm Mangalore Correspondent ಕರಾವಳಿ
ಮಂಗಳೂರು, ಮೇ 1 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಧರ್ಮಾಧರಿತ ಹತ್ಯೆಗಳ ಬಗ್ಗೆ ತನಿಖೆ ನಡೆಸಲು ಎಸ್ಐಟಿ ರಚನೆ ಆಗಬೇಕು. ಹತ್ಯೆಗೆ ಕಾರಣಗಳೇನು, ಅದರ ಹಿಂದಿರುವ ವ್ಯಕ್ತಿಗಳು ಯಾರು ಎನ್ನುವ ಬಗ್ಗೆ ತನಿಖೆ ಆಗಬೇಕಾಗಿದೆ. ಇದಕ್ಕಾಗಿ ನಾವು ಹತ್ತು ಜನರ ನಿಯೋಗ ಮತ್ತೊಮ್ಮೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಗ್ರಹ ಮಾಡುತ್ತೇವೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ರಮಾನಾಥ ರೈ, ಕುಡುಪು ಭಾಗದಲ್ಲಿ ನಡೆದಿರುವ ಗುಂಪು ಹತ್ಯೆಯನ್ನು ಪ್ರಸ್ತಾಪಿಸುತ್ತ ಆ ಯುವಕ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದಾನೆಯೇ, ಇಲ್ಲವೇ ಎನ್ನುವುದು ಅಲ್ಲಿದ್ದವರಿಗೆ ಮಾತ್ರ ಗೊತ್ತು. ಯಾರು ಹೊಡೆದಿದ್ದಾರೋ ಅವರು ಮತ್ತು ಅಲ್ಲಿ ಸಾಕ್ಷಿಗಳಾಗಿದ್ದವರಿಗೆ ತಿಳಿದಿರಬಹುದು. ಅದನ್ನು ಹೊರತುಪಡಿಸಿ ಸತ್ತ ಯುವಕನಿಗೆ ಮಾತ್ರ ಗೊತ್ತಿರಬಹುದು. ಆರಂಭದಲ್ಲಿ ಪೊಲೀಸರು ಸ್ವಲ್ಪ ತಡವರಿಸಿದ್ದಾರೆ, ಆನಂತರ ಶೀಘ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಲ್ಲಿ ಏನು ಘಟನೆ ಆಗಿದೆಯೆಂದು ನಮಗೆ ಗೊತ್ತಿಲ್ಲ. ಆದರೆ ಈ ರೀತಿಯ ಕೃತ್ಯ ಆಗಬಾರದಿತ್ತು. ಧರ್ಮಾಧರಿತ ಹತ್ಯೆಗಳು ಈ ಜಿಲ್ಲೆಯಲ್ಲಿ ಹಿಂದೆ ಇರಲಿಲ್ಲ. ಇತ್ತೀಚೆಗೆ ಏಳೆಂಟು ವರ್ಷಗಳಲ್ಲಿ ಉಂಟಾಗಿರುವಂಥದ್ದು. ಅದಕ್ಕೆ ಎರಡು ಮತೀಯ ಸಂಘಟನೆಗಳೂ ಕಾರಣ. ಎರಡು ಕಡೆಯೂ ಕಳೆದ ಹತ್ತು ವರ್ಷಗಳಲ್ಲಿ ಆಗಿರುವು ಕೊಲೆ ಕೃತ್ಯಗಳ ಬಗ್ಗೆ ತನಿಖೆ ನಡೆಸಿ, ಅದರ ಹಿಂದಿನ ಶಕ್ತಿಗಳನ್ನು ಮಟ್ಟಹಾಕಿದರೆ ಇಂತಹ ಕೊಲೆಗಳಿಗೆ ಕಡಿವಾಣ ಬೀಳಬಹುದು ನನ್ನ ಭಾವನೆ. ಟಾರ್ಗೆಟ್ ಮಾಡಿ ಹತ್ಯೆ ಮಾಡುವಂತಹ ಕೃತ್ಯಗಳು ಆಗಲಿಕ್ಕಿಲ್ಲ. ಇಲ್ಲಿ ಒಬ್ಬ ಸತ್ತಿದ್ದಾನೆಂದು ಎಸ್ಐಟಿ ಮಾಡಲು ಹೇಳುತ್ತಿಲ್ಲ. ಇಂತಹ ಕೃತ್ಯ ಮರುಕಳಿಸಬಾರದು ಎನ್ನುವುದಕ್ಕಾಗಿ ಎಸ್ಐಟಿ ತನಿಖೆ ಆಗಬೇಕಾಗಿದೆ ಎಂದು ರಮಾನಾಥ ರೈ ಹೇಳಿದರು.
ಕ್ರಿಕೆಟ್ ಆಡುತ್ತಿರಬೇಕಾದರೆ ಯಾವುದೇ ವ್ಯಕ್ತಿ ಪಾಕಿಸ್ತಾನ್ ಜಿಂದಾಬಾದ್ ಕೂಗಲಿಕ್ಕಿಲ್ಲ. ಆದರೆ ಇಲ್ಲಿ ಕೂಗಿದ್ದಾನೆಂದರೆ ಅದಕ್ಕೆ ಕಾರಣ ಇರಬಹುದು. ಗೃಹ ಸಚಿವರು ಸ್ಥಳೀಯ ಪೊಲೀಸರ ಮೂಲಗಳಿಂದಲೇ ಈ ಮಾತು ಹೇಳಿರಬಹುದು ಎಂದು ಪ್ರಶ್ನೆಗೆ ಉತ್ತರಿಸಿದರು. ಗೋಷ್ಟಿಯಲ್ಲಿ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಶಾಹುಲ್ ಹಮೀದ್ ಮತ್ತಿತರರಿದ್ದರು.
Senior Congress leader and former minister Ramanath Rai, along with a delegation, has urged Chief Minister Siddaramaiah to constitute a Special Investigation Team (SIT) to probe the recent murder in Kudupu and other suspected communal killings in the region. The delegation emphasized the need to not only investigate the incidents thoroughly but also to dismantle the forces operating behind such crimes.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm