ಬ್ರೇಕಿಂಗ್ ನ್ಯೂಸ್
30-04-25 11:26 pm Mangalore Correspondent ಕರಾವಳಿ
ಮಂಗಳೂರು, ಎ.30 : ಬಿಜೆಪಿ ಕಾರ್ಪೊರೇಟರ್ ಒಬ್ಬರ ಪತಿ ಪಿಸ್ತೂಲ್ ರವಿಯ ಪ್ರಚೋದನೆಯಿಂದಲೇ ಕುಡುಪುವಿನಲ್ಲಿ ಗುಂಪು ಹತ್ಯೆಯಂತಹ ಘಟನೆಯಾಗಿದೆ. ಕೋಮು ಶಕ್ತಿಗಳ ಪಿತೂರಿಯಿಂದಲೇ ಈ ಕೃತ್ಯ ಆಗಿದ್ದು ಮತೀಯ ದ್ವೇಷದ ಹತ್ಯೆ ಹೆಚ್ಚಲು ಬಿಜೆಪಿ ನಾಯಕರ ಹೇಳಿಕೆಗಳೇ ಕಾರಣ. ಈ ಪ್ರಕರಣದಲ್ಲಿ ಸ್ಥಳೀಯ ಠಾಣೆ ಪೊಲೀಸರ ವೈಫಲ್ಯವಾಗಿದ್ದು ಇನ್ಸ್ ಪೆಕ್ಟರ್ ಅಮಾನತು ಮಾಡುವಂತೆ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ನಡೆದ ಬಳಿಕ ಪಿಸ್ತೂಲ್ ರವಿ ತಲೆಮರೆಸಿಕೊಂಡಿದ್ದು ಮೂರು ಮೊಬೈಲ್ಗಳು ಸ್ವಿಚ್ಆಫ್ ಆಗಿವೆ. ಮೊದಲ ದಿನ ಪೊಲೀಸರು ವಿಫಲಗೊಂಡರೂ ಆಬಳಿಕ ಶೀಘ್ರ ಕಾರ್ಯಾಚರಣೆ ಮೂಲಕ 20 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬು
ಗುಂಪು ಹತ್ಯೆ ಪ್ರಕರಣದಲ್ಲಿ ಮಂಗಳೂರು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಹರೀಶ್ ಕುಮಾರ್ ಹೇಳಿದಾಗ, ಪೊಲೀಸ್ ಇಲಾಖೆಯ ವೈಫಲ್ಯ ಅಂದರೆ ಅದು ರಾಜ್ಯ ಸರಕಾರದ ವೈಫಲ್ಯ ಅಲ್ಲವೇ? ಗೃಹ ಸಚಿವರು ಯಾರ ಮಾತನ್ನು ಆಧರಿಸಿ ಹತ್ಯೆಗೀಡಾದ ಯುವಕ 'ಪಾಕಿಸ್ತಾನ ಝಿಂದಾಬಾದ್' ಎಂದಿದ್ದಾರೆ? ಇಲ್ಲಿ ಕಮಿಷನರ್ ಆ ರೀತಿ ಹೇಳದೇ ಇರುವಾಗ ಅವರು ಹೇಳಿದ್ದು ಹೇಗೆ ಎಂದು ಕೆಲವು ಪತ್ರಕರ್ತರು ಪ್ರಶ್ನೆ ಮಾಡಿದರು.
ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಅನ್ಯಕೋಮಿನ ಯುವಕ ಎಂದು ಪದ ಬಳಕೆ ಮಾಡಿದ್ದು ಎಷ್ಟು ಸರಿ. ಸರ್ಕಾರಕ್ಕೆ ಅನ್ಯ ಮತದ ಯುವಕ ಅಂದರೆ ಯಾರು ಎಂದು ಕೂಡ ಪತ್ರಕರ್ತರು ಪ್ರಶ್ನಿಸಿದರು. ಗೃಹ ಸಚಿವರು ತಮಗಿರುವ ಮಾಹಿತಿ ಹೇಳಿದ್ದಾರೆ. ಹೆಚ್ಚಿನದನ್ನು ಅವರಲ್ಲೇ ಕೇಳಿ. ನಾವು ಹೇಳಿಕೊಟ್ಟು ಹೇಳಿದ್ದಲ್ಲ ಎಂದು ಹರೀಶ್ ಕುಮಾರ್ ಹೇಳಿದರು. ಇದಕ್ಕೆ ಮತ್ತೆ ಆಕ್ಷೇಪ ಸೂಚಿಸಿದಾಗ, ತಾನು ಪೊಲೀಸ್ ಇಲಾಖೆಯ ವೈಫಲ್ಯ ಎಂದು ಹೇಳಲೇ ಇಲ್ಲ. ಕಮಿಷನರ್ ತುರ್ತಾಗಿ ಕೆಲಸ ಮಾಡಿದ್ದಾರೆ. ತಳಮಟ್ಟದ ಅಧಿಕಾರಿಗಳಿಂದಷ್ಟೆ ಲೋಪ ಆಗಿದೆ ಎಂದು ಹೇಳಿ ಜಾರಿಕೊಂಡರು. ಅನ್ಯ ಕೋಮಿನ ಬಗ್ಗೆ ನೀವು ಪತ್ರಿಕೆಯಲ್ಲು ಬರೆಯುವುದನ್ನು ನೋಡಿದ್ದೇನೆ, ಅದೇ ರೀತಿ ಹೇಳಿರಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆ.ಕೆ.ಶಾಹುಲ್ ಹಮೀದ್, ಸುಹೈಲ್ ಕಂದಕ್, ನವಾಝ್, ಲಾರೆನ್ಸ್ ಡಿಸೋಜ, ವಿಶ್ವಾಸ್ ಕುಮಾರ್ ದಾಸ್, ಶಬ್ಬಿರ್ ಸಿದ್ದಕಟ್ಟೆ, ಟಿ.ಕೆ.ಸುಧೀರ್, ಪ್ರಕಾಶ್ ಸಾಲ್ಯಾನ್, ಶುಭೋದಯ ಆಳ್ವ, ಹೊನ್ನಯ್ಯ ಉಪಸ್ಥಿತರಿದ್ದರು.
The Kudupu mob lynching case has sparked political outrage as Congress Dakshina Kannada District President Harish Kumar came down heavily on the Mangaluru police, accusing them of negligence and failure in handling the case. He also demanded strict action against the police inspector allegedly involved. Addressing a press conference, Harish Kumar stated that the brutal mob lynching was not a spontaneous act but a premeditated crime, orchestrated with the support of a local BJP leader.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm