ಬ್ರೇಕಿಂಗ್ ನ್ಯೂಸ್
24-04-25 11:08 pm Mangalore Correspondent ಕರಾವಳಿ
ಮಂಗಳೂರು, ಎ.24 : ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಇಡೀ ಜಗತ್ತು ಖಂಡಿಸಿದ್ದರೂ, ಕೆಲವರು ವಿಕೃತ ರೀತಿಯಲ್ಲಿ ಸಮರ್ಥನೆ ಮಾಡಿರುವುದು ಜಾಲತಾಣದಲ್ಲಿ ಕಂಡುಬಂದಿದೆ. ನಿಚ್ಚು ಮಂಗಳೂರು ಎನ್ನುವ ಹೆಸರಲ್ಲಿ ಫೇಸ್ಬುಕ್ ಪೇಜ್ ನಲ್ಲಿ ಪಹಲ್ಗಾಮ್ ಉಗ್ರರ ದಾಳಿಯನ್ನು ಸಮರ್ಥಿಸುವ ರೀತಿ ಪೋಸ್ಟ್ ಮಾಡಿದ್ದು, ಅದಕ್ಕೆ ಕೆಲವು ವಿಕೃತ ಬುದ್ಧಿಗಳು ಲೈಕ್ ಕೊಟ್ಟು ಕಮೆಂಟ್ ಮಾಡಿರುವುದು ಪರ- ವಿರೋಧ ಟೀಕೆಗೂ ಕಾರಣವಾಗಿದೆ.
ಇಂತಹ ಪೋಸ್ಟ್ ಹಾಕಿರುವುದನ್ನು ವಿರೋಧಿಸಿ ಉಳ್ಳಾಲದ ಸತೀಶ್ ಕುಮಾರ್ ಎಂಬವರು ಕೊಣಾಜೆ ಠಾಣೆಗೆ ದೂರು ನೀಡಿದ್ದು, ಇದರಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಬರಲಿದೆ. ಪೋಸ್ಟ್ ಹಾಕಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. ಇದರಂತೆ ಕೋಣಾಜೆ ಪೊಲೀಸರು ಸೆಕ್ಷನ್ 192 ಹಾಗೂ 353(1) ಬಿ ಪ್ರಕಾರ ನಿಚ್ಚು ಮಂಗಳೂರು ಎನ್ನುವ ಫೇಸ್ಬುಕ್ ಪೇಜ್ ವಿರುದ್ಧ ಕೇಸು ದಾಖಲಿಸಿದ್ದಾರೆ.

ಫೇಸ್ಬುಕ್ ಪೇಜ್ ನಲ್ಲಿ ಏನಿದೆ ?
‘2023ರಲ್ಲಿ ಮಹಾರಾಷ್ಟ್ರದ ಪಾಲ್ಘಾರ್ ರೈಲ್ವೇ ಸ್ಟೇಶನ್ನಲ್ಲಿ ಚೇತನ್ ಸಿಂಗ್ ಎಂಬ ಷಂಡ ಪರಿವಾರದ ವ್ಯಕ್ತಿ ನೀವು ಮುಸ್ಲಿಮಾ ಎಂದು ಕೇಳಿ ಮೂರು ಮಂದಿಯನ್ನು ಹತ್ಯೆ ಮಾಡಿರುವುದನ್ನು ನೆನಪಿಸಬೇಕು. ಅಂದು ಆತನನ್ನು ಸಾರ್ವಜನಿಕವಾಗಿ ಗಲ್ಲಿಗೆ ಹಾಕುತ್ತಿದ್ದರೆ ಇಂದು ಶ್ರೀನಗರದಲ್ಲಿ ಇಂತಹ ಕೃತ್ಯ ನಡೆಯುತ್ತಿರಲಿಲ್ಲ’ ಎಂದು ಪೋಸ್ಟ್ ಹಾಕಿದ್ದಾನೆ. ಈತನ ಪೋಸ್ಟ್ ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರೆ, ಕೆಲವರು ಲೈಕ್ಸ್ ಕಮೆಂಟ್ ಹಾಕಿದ್ದಾರೆ. ಆಮೂಲಕ ಭಯೋತ್ಪಾದಕ ಕೃತ್ಯವನ್ನೂ ಸಮರ್ಥಿಸುವ ರೀತಿ ಪೋಸ್ಟ್ ಹಾಕಿಸಿ, ಹಿಂದುಗಳನ್ನು ಅಣಕಿಸುವ ಕೆಲಸ ಮಾಡಲಾಗಿದೆ.
ಪಾಲ್ಘಾರ್ ನಲ್ಲಿ ಏನಾಗಿತ್ತು ಘಟನೆ
2023ರ ಜುಲೈ 31ರಂದು ಮುಂಬೈ ಬಳಿಯ ಪಾಲ್ಘಾರ್ ರೈಲ್ವೇ ಸ್ಟೇಶನ್ನಲ್ಲಿ ಚೇತನ್ ಸಿಂಗ್ ಎನ್ನುವ ಉತ್ತರ ಪ್ರದೇಶ ಮೂಲದ ರೈಲ್ವೇ ಪೊಲೀಸ್ ಸಿಬಂದಿಯೊಬ್ಬ ಇಲಾಖೆಯಲ್ಲಿ ತನ್ನ ಹಿರಿಯ ಸಹೋದ್ಯೋಗಿಯಾಗಿದ್ದ ಆರ್ ಪಿಎಫ್ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ತಿಕಾರಾಮ್ ಮೀನಾ ಮತ್ತು ಮೂವರು ಮುಸ್ಲಿಂ ಪ್ಯಾಸೆಂಜರ್ ಗಳನ್ನು ರೈಲು ಚಲಿಸುತ್ತಿದ್ದಾಗಲೇ ಗುಂಡಿಟ್ಟು ಹತ್ಯೆ ಮಾಡಿದ್ದ. ಕೂಡಲೇ ಆರೋಪಿ ಚೇತನ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದರು. ಉತ್ತರ ಪ್ರದೇಶದ ಹತ್ರಾಸ್ ನಿವಾಸಿಯಾಗಿರುವ ಚೇತನ್ ಸಿಂಗ್ ತಿಂಗಳ ಹಿಂದಷ್ಟೇ ಮುಂಬೈಗೆ ವರ್ಗಾವಣೆಗೊಂಡು ಕೆಲಸಕ್ಕೆ ಸೇರಿದ್ದ. ಯಾವ ಕಾರಣಕ್ಕಾಗಿ ಈ ರೀತಿಯ ಕೃತ್ಯ ಎಸಗಿದ್ದಾನೆಂದು ಪತ್ತೆಯಾಗಿರಲಿಲ್ಲ. ಆರೋಪಿ ಪರ ವಕೀಲರು ಮಾತ್ರ, ಚೇತನ್ ಮಾನಸಿಕ ತೊಂದರೆ ಹೊಂದಿದ್ದಾನೆ, ಅದರಿಂದಾಗಿ ಆ ರೀತಿಯ ಹತ್ಯೆ ಮಾಡಿದ್ದ ಎಂದು ಕೋರ್ಟಿನಲ್ಲಿ ವಾದ ಮಂಡಿಸಿದ್ದರು.
ಅದೇ ಸಂದರ್ಭದಲ್ಲಿ ಪಾಲ್ಘಾರ್ ಹತ್ಯೆಯನ್ನು ಸಮರ್ಥಿಸಿ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಚೇತನ್ ಸಿಂಗ್ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುವುದು ಮತ್ತು ಮೋದಿ, ಯೋಗಿಯ ಪರವಾಗಿ ಜೈಕಾರ ಹಾಕುವುದು ಇತ್ತು. ಆದರೆ ಈ ವಿಡಿಯೋ ಯಾವಾಗ ಆಗಿತ್ತು, ಅದು ಚೇತನ್ ಸಿಂಗ್ ನದ್ದೇಯಾ ಎನ್ನುವುದು ದೃಢವಾಗಿಲ್ಲ. ಆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದನ್ನೇ ನೆಪವಾಗಿಸಿ ನೀನು ಹಿಂದೂನಾ ಎಂದು ಕೇಳಿ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿ ಹತ್ಯೆ ಮಾಡಿರುವುದು ದೇಶಾದ್ಯಂತ ಆಕ್ರೋಶದ ಅಲೆ ಎದ್ದಿರುವಾಗಲೇ ಹಳೆ ಕೇಸನ್ನು ಮುಂದಿಟ್ಟು ವ್ಯಕ್ತಿಯೊಬ್ಬ ಸಮರ್ಥಿಸುವ ಕೆಲಸ ಮಾಡಿದ್ದು ಆಕ್ಷೇಪಕ್ಕೆ ಕಾರಣವಾಗಿದೆ.
Mangalore Provocative Facebook post on Pahalgam Terror Attack FIR filed on Nichu Mangaluru user name. A case has been registered at Konaje Police Station based on a complaint received from Shri Satish Kumar, a resident of Ullalthi, Ullal Taluk, regarding a provocative post on Facebook by a user named "Nichu Mangaluru".
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm