Ullal Gang Rape, Crime, Update, Mangalore: ಗ್ಯಾಂಗ್ ರೇಪ್ ಪ್ರಕರಣ ; ಮೂರನೇ ಆರೋಪಿಯನ್ನು ಫಿಕ್ಸ್ ಮಾಡಿದ್ರಾ ಉಳ್ಳಾಲ ಪೊಲೀಸರು? ಕ್ರಿಮಿನಲ್ ಹಿನ್ನೆಲೆ ಇಲ್ಲದ ಯುವಕನಿಗೆ ಕಪ್ಪುಚುಕ್ಕೆ..!

19-04-25 09:22 pm       Mangalore Correspondent   ಕ್ರೈಂ

ಉಳ್ಳಾಲದ ರಾಣಿಪುರದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಗ್ಯಾಂಗ್ ರೇಪ್ ಮಾಡಿದ ಕೃತ್ಯಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಗುರುತಿಸಿ ಉಳ್ಳಾಲ ಪೊಲೀಸರು ಬಂಧಿಸಿದ್ದರು. ಆದರೆ, ಇದೀಗ ಮೂರನೇ ಆರೋಪಿ ಮನೀಶ್ ನನ್ನು ಪೊಲೀಸರು ವಿನಾಕಾರಣ ಫಿಕ್ಸ್ ಮಾಡಿದ್ದಾರೆಯೇ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮಂಗಳೂರು, ಎ.19 : ಉಳ್ಳಾಲದ ರಾಣಿಪುರದಲ್ಲಿ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಗ್ಯಾಂಗ್ ರೇಪ್ ಮಾಡಿದ ಕೃತ್ಯಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಗುರುತಿಸಿ ಉಳ್ಳಾಲ ಪೊಲೀಸರು ಬಂಧಿಸಿದ್ದರು. ಆದರೆ, ಇದೀಗ ಮೂರನೇ ಆರೋಪಿ ಮನೀಶ್ ನನ್ನು ಪೊಲೀಸರು ವಿನಾಕಾರಣ ಫಿಕ್ಸ್ ಮಾಡಿದ್ದಾರೆಯೇ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಬಗ್ಗೆ ಮನೀಶ್ ಪರ ವಕೀಲ ವಿಕ್ರಮ್ ರಾಜ್ ಮಂಗಳೂರು ಕೋರ್ಟಿಗೆ ಅಪೀಲು ಸಲ್ಲಿಸಿದ್ದು, ಕೃತ್ಯ ನಡೆದ ದಿನ ಮನೀಶ್ ಮಂಗಳೂರಿನಲ್ಲೇ ಇದ್ದ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಮನೀಶ್ ಓಡಾಡಿದ್ದ ಬಗ್ಗೆ ಸಿಸಿಟಿವಿ, ಮೊಬೈಲ್ ಕರೆಗಳು, ಸಿಡಿ ಆರ್ ಇನ್ನಿತರ ದಾಖಲೆಗಳನ್ನು ಪೊಲೀಸರು ಸಂಗ್ರಹಿಸುವಂತೆ ನಿರ್ದೇಶನ ನೀಡಬೇಕೆಂದು ಕೋರ್ಟಿನಲ್ಲಿ ಕೇಳಿಕೊಂಡಿದ್ದೇವೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಆರೋಪಿಗಳು ಯುವತಿಯನ್ನು ಕಾರಿನಲ್ಲಿ ಕರೆದೊಯ್ದು ಉಳ್ಳಾಲದ ರಾಣಿಪುರದಲ್ಲಿ ಅತ್ಯಾಚಾರ ನಡೆಸಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಆದರೆ ಮನೀಶ್ ಅಂದು ಮಂಗಳೂರು ಬಿಟ್ಟು ಎಲ್ಲಿಯೂ ಹೋಗಿಲ್ಲ. ಆತ ಅಂದು ರಾತ್ರಿ 10 ಗಂಟೆಯಿಂದ 12 ಗಂಟೆ ವರೆಗೂ ನಗರದ ಲಾಲ್ ಬಾಗ್ ನಲ್ಲಿರುವ ಬಾರ್ ಒಂದರಲ್ಲಿದ್ದ ಬಗ್ಗೆ ಸಿಸಿಟಿವಿ ದಾಖಲೆ ಇದೆ. ಇದಲ್ಲದೆ, ರಾತ್ರಿ 12.15ರ ವೇಳೆಗೆ ಪಡೀಲಿನ ತನ್ನ ಮನೆಗೆ ತೆರಳಿದ್ದಾನೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ರಾತ್ರಿ 12 ಗಂಟೆ ವೇಳೆಗೆ ಉಳ್ಳಾಲದ ಕುತ್ತಾರಿನಲ್ಲಿ ಯುವತಿಯನ್ನು ಬಿಟ್ಟು ಹೋಗಿದ್ದಾರೆ. ಮನೀಶ್ ತಾನು ಆ ತಂಡದಲ್ಲಿ ಇರಲಿಲ್ಲ. ಅವರ ಒಟ್ಟಿಗೆ ಹೋಗಿಲ್ಲ ಎಂದು ಪೊಲೀಸರಿಗೂ ತಿಳಿಸಿದ್ದಾನೆ. ಆದರೂ ಪೊಲೀಸರು ಪ್ರಕರಣದಲ್ಲಿ ಫಿಕ್ಸ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ, ಪೊಲೀಸರು ಆತನ ಫೋಟೋ ಬಿಡುಗಡೆ ಮಾಡಿ ಭವಿಷ್ಯವನ್ನೇ ಹಾಳು ಮಾಡಿದ್ದಾರೆ. ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲದ ವ್ಯಕ್ತಿಯನ್ನು ಕ್ರಿಮಿನಲ್ ಆಗಿಸಿದ್ದಾರೆ. ಸಮಾಜದಲ್ಲಿ ಯುವಕನಿಗೆ ಕಪ್ಪು ಚುಕ್ಕೆ ಆಗುವಂತೆ ಮಾಡಿದ್ದಾರೆ. ಸಿಸಿಟಿವಿ ದಾಖಲೆಗಳು ಹೆಚ್ಚು ದಿನ ಉಳಿಯದ ಕಾರಣ ಅವನ್ನು ಪೊಲೀಸರು ಕೂಡಲೇ ಸಂಗ್ರಹಿಸಬೇಕಾಗಿದೆ ಎಂದು ವಿಕ್ರಮ್ ರಾಜ್ ಹೇಳಿದರು. ಪ್ರಕರಣದಲ್ಲಿ ವಿಕ್ರಮ್ ರಾಜ್ ಮತ್ತು ಜೀವನ್ ಎಂ. ಆರೋಪಿ ಪರವಾಗಿ ವಾದಿಸುತ್ತಿದ್ದಾರೆ.

ಎಪ್ರಿಲ್ 16ರಂದು ರಾತ್ರಿ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಉಳ್ಳಾಲದ ಕುತ್ತಾರಿನ ರಾಣಿಪುರ ಎಂಬಲ್ಲಿ ನೇತ್ರಾವತಿ ನದಿ ದಡದಲ್ಲಿ ಆರೋಪಿಗಳು ಅತ್ಯಾಚಾರ ನಡೆಸಿದ್ದಾಗಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧಿಸಿ ಆಟೋ ಚಾಲಕ ಪ್ರಭುರಾಜ್(37), ಆತನ ಸ್ನೇಹಿತ ಕುಂಪಲ ನಿವಾಸಿ ಮಿಥುನ್ (38) ಮತ್ತು ಮಂಗಳೂರಿನ ಪಡೀಲ್ ನಿವಾಸಿ ಮನೀಶ್ ಎಂಬವರನ್ನು ಬಂಧಿಸಿದ್ದರು. ಆದರೆ ಮನೀಶ್ ಅಂದು ಎ ವನ್ ಆರೋಪಿ ಪ್ರಭುರಾಜ್ ಗೆ ಕರೆ ಮಾಡಿದ್ದು ಹೌದಾದರೂ ಆತನ ಕೃತ್ಯದಲ್ಲಿ ಪಾಲ್ಗೊಂಡಿರಲಿಲ್ಲ ಎನ್ನಲಾಗಿದೆ. ಕೇವಲ ಕರೆಯ ಮಾಹಿತಿ ಆಧರಿಸಿ ಪೊಲೀಸರು ಆರೋಪಿ ಬಂಧಿಸಿ ಜೈಲಿಗಟ್ಟಿರುವುದು ಒಟ್ಟು ಪ್ರಕರಣ ಸಡಿಲಗೊಳ್ಳಲು ಕಾರಣವಾಗಿದೆ.

In a shocking twist to the ongoing Ullal gang rape case, the advocate representing one of the accused, Manish, has alleged that his client has been falsely framed by the police. Speaking to media personnel, the advocate asserted that Manish was not present at the crime scene during the incident and instead was at a local bar in the city.