ಬ್ರೇಕಿಂಗ್ ನ್ಯೂಸ್
17-12-20 03:22 pm Mangalore Correspondent ಕರಾವಳಿ
ಮಂಗಳೂರು, ಡಿ.17: ನಗರದ ಬೆಂದೂರ್ ವೆಲ್ ನ ಇಂಗ್ಲಿಷ್ ಮೀಡಿಯಂ ಶಾಲೆಯ ಶಿಕ್ಷಕಿ ದಿಢೀರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಶಾಲೆಯ ಸಿಬಂದಿ ಮತ್ತು ಸಹೋದ್ಯೋಗಿ ಶಿಕ್ಷಕರಲ್ಲಿ ದಿಗ್ಭ್ರಮೆ ಮೂಡಿಸಿದೆ.
ಕುಲಶೇಖರದಲ್ಲಿ ಪುತ್ರಿಯ ಜೊತೆಗೆ ವಾಸವಿದ್ದ ಗ್ರೆಟ್ಟಾ ಡಿಸೋಜ, ಕೆಲವು ಸಮಯದಿಂದ ಸರಿಯಾಗಿ ನಿದ್ದೆ ಬರುತ್ತಿಲ್ಲ. ಏನೋ ಮನಸ್ಸು ಸರಿಯಿಲ್ಲ ಎಂದು ಆಪ್ತರಲ್ಲಿ ಹೇಳಿಕೊಂಡಿದ್ದರಂತೆ. ಅಷ್ಟಕ್ಕೇ ಈ ರೀತಿ ಮಾಡುತ್ತಾರೆ ಎಂದುಕೊಂಡಿರಲಿಲ್ಲ ಎನ್ನುತ್ತಾರೆ, ಜೊತೆಗಿದ್ದ ಶಿಕ್ಷಕಿಯರು.
ಆಕೆಯ ಪತಿಗೆ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಕಾಫಿ ಎಸ್ಟೇಟ್ ಇದ್ದು, ಸಂಬಂಧ ಚೆನ್ನಾಗಿಯೇ ಇತ್ತು ಎನ್ನಲಾಗುತ್ತಿದೆ. ಕಳೆದ ನವೆಂಬರ್ ಕೊನೆಗೆ ಮಂಗಳೂರಿಗೆ ಬಂದು ಹೋಗಿದ್ದರಂತೆ. ಒಬ್ಬ ಮಗ ಕಲಿತು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ. ಇನ್ನೊಬ್ಬ ಪುತ್ರಿ ಮಂಗಳೂರಿನ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು.
ಮನೆಯಲ್ಲಿ ತಾಯಿ ಮತ್ತು ಕಾಲೇಜು ಓದುವ ಪುತ್ರಿ ಮಾತ್ರ ಇದ್ದರು. ಮೊನ್ನೆ (ಮಂಗಳವಾರ) ರಾತ್ರಿಯೂ ಮಗಳ ಜೊತೆ, ಊಟ ಮಾಡಿ ಜೊತೆಗೇ ಮಲಗಿದ್ದರಂತೆ. ಆದರೆ, ಮರುದಿನ ಮಗಳು ಬೆಡ್ಡಿನಿಂದ ಎದ್ದಾಗ ತಾಯಿ ಇರಲಿಲ್ಲ. ಗಾಬರಿಗೊಂಡು ಮನೆಯಲ್ಲಿ ಹುಡುಕಾಡಿದ್ದಾಳೆ. ಮನೆಯ ಒಳಗಾಗಲೀ, ಹೊರಗಾಗಲೀ ಇರಲಿಲ್ಲ. ಈ ಮಧ್ಯೆ ಟೇಬಲ್ ನಲ್ಲಿ ಒಂದು ಲೆಟರ್ ಕಂಡಿತ್ತು. ಅದರಲ್ಲಿ ನಾನು ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ. ತುಂಬ ಡಿಪ್ರೆಶನ್ ಆಗಿದ್ದು ಬದುಕುವುದು ಸಾಧ್ಯವಾಗುತ್ತಿಲ್ಲ. ನನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ. ನೀವೆಲ್ಲ ನನ್ನನ್ನು ಚೆನ್ನಾಗೇ ನೋಡಿಕೊಂಡಿದ್ದೀರಿ. ಆದರೆ, ಈ ಬದುಕು ಮುಗಿಸುತ್ತಿದ್ದೇನೆ, ಬೈ ಮಗಳೇ ಎಂದು ಬರೆದಿದ್ದು ಕಂಡುಬಂದಿತ್ತು. ತಾಯಿ ತನ್ನನ್ನು ಉದ್ದೇಶಿಸಿ ಬರೆದಿದ್ದ ಪತ್ರ ನೋಡಿ, ಮಗಳಿಗೆ ಶಾಕ್ ಆಗಿತ್ತು.
ಹೊರಗೆಲ್ಲಾ ಹುಡುಕಾಡಿದ್ದು, ಮನೆ ಆವರಣದಲ್ಲಿದ್ದ ಬಾವಿಯನ್ನು ನೋಡಿದ್ದಾಳೆ. ಬಾವಿ ನೋಡಿದಾಗ, ತಾಯಿ ಶವ ತೇಲುತ್ತಿತ್ತು. ಬೆಳಗ್ಗೆಯೇ ಶವ ತೇಲುತ್ತಿರಬೇಕಾದ್ರೆ, ಆಕೆ ನಸುಕಿನ ಜಾವದಲ್ಲೇ ಮನೆಯಿಂದ ಎದ್ದು ಹೊರಗೆಬಂದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಒಂದು ಕ್ಷಣದ ಮೈಮರೆವು, ಮನಸ್ಸಿನ ತೊಳಲಾಟ ಬದುಕನ್ನೇ ಮುಗಿಸಿಬಿಟ್ಟಿತ್ತು.
ಗಂಡ ಜೊತೆಗಿಲ್ಲ ಎಂಬ ಕೊರಗೋ, ದಾಂಪತ್ಯದಲ್ಲಿ ವೈಮನಸ್ಸು ಇತ್ತೋ ಏನೋ ಗೊತ್ತಿಲ್ಲ. ಹದಿಹರೆಯದ ಪುತ್ರಿಯ ಮನಸ್ಸಲ್ಲಿ ಮಾತ್ರ ತಾಯಿಯ ಸಾವು ಆಘಾತದ ಅಲೆಯನ್ನೇ ಸೃಷ್ಟಿಸಿಬಿಟ್ಟಿದೆ. ಆ ಕರಾಳ ರಾತ್ರಿಯಲ್ಲಿ ಒಮ್ಮಿಂದೊಮ್ಮೆಲೇ ಆ ತಾಯಿ ತೆಗೆದುಕೊಂಡ ಕೆಟ್ಟ ನಿರ್ಧಾರ ಸಂಬಂಧಿಕರು, ಶಾಲೆಯ ಮಕ್ಕಳು ಮತ್ತು ಇಡೀ ಶಿಕ್ಷಕ ವೃಂದಕ್ಕೆ ಶಾಕ್ ನೀಡಿದೆ.
Private school teacher Gretta D'souza of Mangalore committed Suicide by Jumping into the well. Here is a detailed report by Headline Karnataka.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm