ಬ್ರೇಕಿಂಗ್ ನ್ಯೂಸ್
15-12-20 04:51 pm Mangalore Correspondent ಕರಾವಳಿ
ಮಂಗಳೂರು, ಡಿ.15: ಕುಲಶೇಖರದ ಕೆಎಂಎಫ್ ಹಾಲಿನ ಡೈರಿಯಲ್ಲಿ ಟ್ಯಾಂಕ್ ಕ್ಲೀನಿಂಗ್ ನಡೆಸುತ್ತಿದ್ದ ವೇಳೆ ಕೆಮಿಕಲ್ ಬ್ಲಾಸ್ಟ್ ಆಗಿ ಒಬ್ಬ ಕಾರ್ಮಿಕನ ದೇಹ ಪೂರ್ತಿ ಸುಟ್ಟುಹೋದ ಘಟನೆ ನಡೆದಿದೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಗುತ್ತಿಗೆ ನೌಕರ, ಸುಳ್ಯ ಮೂಲದ ಸತೀಶ್ (21) ಎಂಬಾತ ಟ್ಯಾಂಕ್ ಮತ್ತು ಟ್ಯೂಬ್ ಕ್ಲೀನ್ ಮಾಡಲೆಂದು ಕುದಿಯುತ್ತಿದ್ದ ನೀರಿಗೆ ಕೆಮಿಕಲ್ ಸುರಿದಾಗ ನೀರು ಒಮ್ಮೆಲೇ ಹೊರಗೆಸೆಯಲ್ಪಟ್ಟು ಘಟನೆ ನಡೆದಿದೆ. ಸೂಕ್ತ ಮುಂಜಾಗ್ರತೆ ಮತ್ತು ನಿರ್ಲಕ್ಷ್ಯ ವಹಿಸಿದ್ದರಿಂದ ಘಟನೆ ನಡೆದಿದ್ದು, ಸತೀಶ್ ದೇಹ ಬಿಸಿ ನೀರು ಮೈಗೆ ಬಿದ್ದು ಸುಟ್ಟು ಹೋಗಿದೆ.


ಇತರೇ ನೌಕರರು ಸೇರಿ ಕೂಡಲೇ ಸತೀಶ್ ನನ್ನು ನಗರದ ಎಜೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕೆಎಂಎಫ್ ಡೈರಿಯಲ್ಲಿ ಗುತ್ತಿಗೆ ಕಾರ್ಮಿಕನಾಗಿದ್ದರೂ, ಇವರಿಗೆ ಇಎಸ್ಐ ಸೌಲಭ್ಯ ಇರುತ್ತದೆ. ಆದರೆ, ಆಸ್ಪತ್ರೆಯಲ್ಲಿ ಇಎಸ್ಐ ಸೌಲಭ್ಯ ಕೇಳಿದರೆ ಬೆಡ್ ಇಲ್ಲ ಎಂದು ಸಬೂಬು ಹೇಳುತ್ತಿದ್ದಾರೆಂದು ಜೊತೆಗಿದ್ದ ಕಾರ್ಮಿಕರು ದೂರಿದ್ದಾರೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಇಎಸ್ಐ ಸೌಲಭ್ಯ ಸಿಗದಿದ್ದರೆ ಗುತ್ತಿಗೆ ಕಂಪನಿಯವರೇ ದುಡ್ಡು ಕೊಡಬೇಕು ಎನ್ನುತ್ತಿದ್ದಾರೆ.
ಕೆಎಂಎಫ್ ಡೈರಿಯಲ್ಲಿ ಪ್ರೊಡಕ್ಷನ್ ವಿಭಾಗದಲ್ಲಿ 350 ಜನರು ಕಾರ್ಮಿಕರಿದ್ದು, ಎಲ್ಲರೂ ಗುತ್ತಿಗೆ ಕಾರ್ಮಿಕರು. ಬೆಂಗಳೂರಿನ ಕ್ರಿಯೇಟಿವಿಟಿ ಎನ್ನುವ ಕಂಪನಿ ಉಪ ಗುತ್ತಿಗೆ ಪಡೆದು ಕಾರ್ಮಿಕರ ಮೂಲಕ ಕೆಲಸ ಮಾಡಿಸುತ್ತಿದೆ. ಹೀಗಾಗಿ ದುರ್ಘಟನೆ ನಡೆದರೂ, ಕೆಎಂಎಫ್ ಡೈರಿ ಪ್ರಮುಖರು ತಮಗೇನು ಸಂಬಂಧವೇ ಇಲ್ಲ ಎಂದು ವರ್ತಿಸುತ್ತಿದ್ದಾರೆ. ಬ್ಲಾಸ್ಟ್ ಆಗಿ ಸುಟ್ಟ ಗಾಯ ಆಗಿದ್ದರೂ ಆಸ್ಪತ್ರೆಗೆ ಒಯ್ಯುವುದಕ್ಕೂ ವಾಹನ ನೀಡಿಲ್ಲ ಎಂದು ಕಾರ್ಮಿಕರು ಅಲವತ್ತುಕೊಂಡಿದ್ದಾರೆ.
Chemical blast in KMF (Karnataka Milk Federation) one staff seriously injured has been admitted to A.J hospital. The negligence of the authorities has resulted in the blast it is said.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
16-09-26 10:51 am
HK News Staffer
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm