ಬ್ರೇಕಿಂಗ್ ನ್ಯೂಸ್
14-12-20 04:50 pm Mangalore Correspondent ಕರಾವಳಿ
ಮಂಗಳೂರು, ಡಿ. 14: ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತ ಯಂತ್ರವನ್ನು ದುರುಪಯೋಗ ಮಾಡುತ್ತಿದೆ. ಮೀಸಲಾತಿ ಕ್ಷೇತ್ರಗಳನ್ನ ಅನಗತ್ಯ ಬದಲಾವಣೆ ಮಾಡಲಾಗಿದೆ. ವಾರ್ಡ್ ಗಳನ್ನ ಅವೈಜ್ಞಾನಿಕವಾಗಿ ಪುನರ್ ವಿಂಗಡಿಸಲಾಗಿದ್ದು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆದರಿಸುವ, ಅಪಹರಿಸುವ ಕೆಲಸ ನಡೆಯುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ , ಎಂಎಲ್ಸಿ ಹರೀಶ್ ಕುಮಾರ್ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಹರೀಶ್ ಕುಮಾರ್, ಆಡಳಿತ ಪಕ್ಷ ಇಷ್ಟರಮಟ್ಟಿಗೆ ಹಸ್ತಕ್ಷೇಪ ನಡೆಸುವುದನ್ನು ನಾವು ನೋಡಿರಲಿಲ್ಲ. ಹೇಗಾದ್ರು ಗೆಲ್ಲಬೇಕೆಂದು ಬಿಜೆಪಿ ವಾಮಮಾರ್ಗ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ದ.ಕ. ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆ ಮೇಲೆ ಕಸ್ತೂರಿ ರಂಗನ್ ವರದಿ ಪರಿಣಾಮ ಬೀರಲಿದೆ. ಪಶ್ಚಿಮ ಘಟ್ಟ ಪ್ರದೇಶಗಳ ಜನರು ಆತಂಕಿತರಾಗಿದ್ದಾರೆ. ಇದರಿಂದ ಬಿಜೆಪಿ ವಿರುದ್ಧ ಜನ ನಿಲ್ಲಲಿದ್ದಾರೆ ಎಂದು ಹರೀಶ್ ಕುಮಾರ್ ಹೇಳಿದ್ರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಯುಟಿ ಖಾದರ್, ಗ್ರಾ.ಪಂ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪರ ನಿಲ್ಲಲಿದ್ದಾರೆ. ಬಿಜೆಪಿ ಸರಕಾರದ ಬಗ್ಗೆ ಜನ ಬೇಸತ್ತು ಹೋಗಿದ್ದಾರೆ. ಬಿಜೆಪಿ ಏನು ಮಾಡಿದೆ ಅಂತಾ ವೋಟ್ ನೀಡಬೇಕು? ಸರಕಾರದ ಯಾವುದೇ ಯೋಜನೆಗಳು ತಲುಪುತ್ತಿಲ್ಲ ಎಂದು ಹೇಳಿದರು.
ಅಲ್ಲದೆ, ನಾವು ಕಳೆದ ಬಾರಿ ಜಾರಿ ಮಾಡಿದ್ದ ಯೋಜನೆಗಳಿಗೂ ಕತ್ತರಿ ಹಾಕಲಾಗಿದೆ. ಸರಕಾರದ ವಿರುದ್ಧ ರೈತರು ಬೀದಿಗೆ ಬಂದು ನಿಂತಿದ್ದಾರೆ. ಅಗತ್ಯ ವಸ್ತುಗಳ ದರ ಏರಿಕೆ ಜನರ ಮೇಲೆ ಪರಿಣಾಮ ಬೀರಿದೆ. ಹೀಗಿದ್ದ ಮೇಲೂ ಬಿಜೆಪಿಗೆ ಜನ ವೋಟ್ ನೀಡಬೇಕೆ ಎಂದು ಖಾದರ್ ಪ್ರಶ್ನೆ ಮಾಡಿದರು.
Video:
MLA U T in Mangalore Khader said People will stand with Congress and vote against BJP government in the upcoming gram panchayat elections at any cost.
01-07-25 10:52 pm
Bangalore Correspondent
ಹಾಸನ ಬಳಿಕ ಶಿವಮೊಗ್ಗ ಸರದಿ ; ಎರಡು ದಿನದಲ್ಲಿ ವಿದ್ಯ...
01-07-25 09:57 pm
Stampede, IPS Officer Vikas Kumar Suspension:...
01-07-25 04:19 pm
Sri Rama Sene, Belagavi, SP: ಶ್ರೀರಾಮಸೇನೆ ಸೇನೆ...
30-06-25 10:30 pm
CM Siddaramaiah, Dk Shivakumar, CM Post: ಹೇಯ್...
30-06-25 02:55 pm
01-07-25 08:57 pm
HK News Desk
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 04:36 pm
Mangalore Correspondent
Bangalore crime, TALAQ, Politicians: ರಾಜಕಾರಣಿ...
01-07-25 02:22 pm
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm
Sirsi Job Fraud: ನೌಕರಿ ಕೊಡಿಸುವುದಾಗಿ 200 ರೂ. ಪ...
01-07-25 12:07 pm
Gold Loan Scam at Paduva Society, ShaktiNagar...
30-06-25 06:12 pm