ಬ್ರೇಕಿಂಗ್ ನ್ಯೂಸ್
14-12-20 03:03 pm Mangalore Correspondent ಕರಾವಳಿ
ಪುತ್ತೂರು, ಡಿ.14 : ರಾಜ್ಯದಲ್ಲೇ ಮೊದಲ ಬಾರಿಗೆ ಗ್ರಾಮೀಣ ಭಾಗದ ಪತ್ರಕರ್ತರ ಜೀವನ ಭದ್ರತೆಗಾಗಿ ಪುತ್ತೂರು ತಾಲೂಕು ಪತ್ರಕರ್ತರ ಸಂಘ ಅಭೂತಪೂರ್ವ ಯೋಜನೆ ಜಾರಿ ಮಾಡಿದೆ. ಪತ್ರಕರ್ತರ ಸಂಘದ ಸದಸ್ಯರ ಜೀವನ ಭದ್ರತೆಗಾಗಿ 34 ಲಕ್ಷ ರೂ. ಮೊತ್ತದ ಯೋಜನೆಯನ್ನು 2020ರ ಡಿ.14ರಿಂದ ಜಾರಿಗೊಳ್ಳಲಿದೆ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘ ಘೋಷಿಸಿದೆ.
ಪುತ್ತೂರು ಪತ್ರಿಕಾಭವನದಲ್ಲಿ ಸೋಮವಾರ ನಡೆದ ತಾಲೂಕು ಪತ್ರಕರ್ತರ ಸಂಘದ ವಿಶೇಷ ಮಹಾಸಭೆಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪತ್ರಕರ್ತರ ಸಾಮಾಜಿಕ ಮತ್ತು ಕುಟುಂಬ ಭದ್ರತಾ ಯೋಜನೆ ಹೆಸರಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು ಪುತ್ತೂರು ತಾ. ಪತ್ರಕರ್ತರ ಸಂಘದ ಸದಸ್ಯರ ಹೆಸರಿನಲ್ಲಿ ತಲಾ 25 ಸಾವಿರ ರೂ. ಬ್ಯಾಂಕ್ ಡೆಪೊಸಿಟ್ ಮಾಡಿ, ಸದಸ್ಯನಿಗೆ 60 ವರ್ಷ ವಯಸ್ಸು ದಾಟಿದ ನಂತರ ಬಡ್ಡಿ ಸಹಿತ ಪೂರ್ಣ ಪ್ರಮಾಣದ ಲಾಭಾಂಶ ದೊರೆಯಲಿದೆ. ಈ ಮೂಲಕ ಪುತ್ತೂರು ತಾಲೂಕು ಪತ್ರಕರ್ತರ ಸಂಘದ 23 ಸದಸ್ಯ ಪತ್ರಕರ್ತರು ಒಟ್ಟು 34 ಲಕ್ಷ ರೂ. ಮೊತ್ತದ ಫಲಾನುಭವಿ ಮೊತ್ತವನ್ನು ಪಡೆಯಲಿದ್ದಾರೆ.
ಕರ್ತವ್ಯ ಸಂದರ್ಭ ಅಪಘಾತ, ಮಾರಣಾಂತಿಕ ದಾಳಿ- ಹಲ್ಲೆ ಘಟನೆ ಸಂಭವಿಸಿದಲ್ಲಿ ಚಿಕಿತ್ಸೆಗಾಗಿ ಸದಸ್ಯನ ಹೆಸರಲ್ಲಿರುವ ಡೆಪೊಸಿಟ್ ಆಧಾರದಲ್ಲಿ ಗರಿಷ್ಠ 20 ಸಾವಿರ ರೂ. ತುರ್ತು ವೈಯಕ್ತಿಕ ಸಾಲ ಪಡೆಯುವ ಅವಕಾಶ ಇರಲಿದೆ ಎಂದು ಪುತ್ತೂರು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ತಿಳಿಸಿದ್ದಾರೆ.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಐ.ಬಿ ಸಂದೀಪ್ ಕುಮಾರ್, ಜತೆ ಕಾರ್ಯದರ್ಶಿ ಅಜಿತ್, ಕೋಶಾಧಿಕಾರಿ ಕೃಷ್ಣಪ್ರಸಾದ್ ಬಲ್ನಾಡ್, ಉಪ್ಯಾಧ್ಯಕ್ಷರಾದ ಸರ್ವೇಶ್ ಕುಮಾರ್ ಉಪ್ಪಿನಂಗಡಿ, ಅನೀಶ್ ಕುಮಾರ್ ಮರಿಲ್ ಉಪಸ್ಥಿತರಿದ್ದರು.

ಯೋಜನೆಯ ಕಾರ್ಯ ನಿರ್ವಹಣೆ ಹೇಗೆ ?
ಸೌಲಭ್ಯಕ್ಕೆ ಅಗತ್ಯ ಮಾನದಂಡಗಳು
Puttur press club to be states first club in providing welfare fund to Rural Journalists. Puttur taluk journalist union Shravan Kumar Nala announced its packages.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
16-09-26 10:51 am
HK News Staffer
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm