ಬ್ರೇಕಿಂಗ್ ನ್ಯೂಸ್
25-11-24 11:14 pm Mangalore Correspondent ಕರಾವಳಿ
ಮಂಗಳೂರು, ನ.25: ಅಂದಾಜು 20 ವರ್ಷಗಳ ಹಿಂದೆ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಚೈನ್ ಲಿಂಕ್ ಬಿಸಿನೆಸ್ ಹಾವಳಿ ಜೋರಾಗಿತ್ತು. ಆದೀಶ್ವರ್, ಆರ್ ಎಂಎಸ್ ಸೇರಿದಂತೆ ನಾನಾ ರೀತಿಯ ಮಾರ್ಕೆಟಿಂಗ್ ಬಿಸ್ನೆಸ್ ನಡೀತಿತ್ತು. ಆವರ್ತನ ರೀತಿಯಲ್ಲಿ ಒಬ್ಬರಿಂದ ಇಬ್ಬರು, ಇಬ್ಬರಿಂದ ನಾಲ್ವರು ಎನ್ನುವ ಚೈನ್ ಲಿಂಕ್ ಬೆಳೆಸಿದರೆ, ಇಂತಿಷ್ಟು ಪರ್ಸೆಂಟ್ ಕಮಿಷನ್ ನೀಡುವುದಾಗಿ ಹೇಳುತ್ತಿದ್ದರು. ಕೆಲವು ವರ್ಷ ಜೋರಾಗಿಯೇ ನಡೆದಿದ್ದ ಇಂಥ ಮಾರ್ಕೆಟಿಂಗ್ ಬಿಸಿನೆಸ್ಸಿನಲ್ಲಿ ಹೆಣ್ಣು- ಗಂಡು ಎನ್ನುವ ಭೇದ ಇಲ್ಲದೆ ಮಧ್ಯಮ ವರ್ಗದ ಯುವಜನರು ಮುಗಿಬಿದ್ದು ಸೇರುತ್ತಿದ್ದರು. ಕೈಗೆ ಚೊಂಬನ್ನೂ ಗಿಟ್ಟಿಸಿಕೊಂಡಿದ್ದರು.
ಅದೇ ಮಾದರಿಯ ಚೈನ್ ಲಿಂಕ್ ಬಿಸ್ನೆಸ್ ಮತ್ತೆ ಶುರುವಾಗಿದೆ. ಹೆಸರು ಮಾತ್ರ ಥರಾವರಿ. ಒಬ್ಬೊಬ್ಬರದ್ದು ಒಂದೊಂದು ಥರಾ ಎನ್ನುವ ರೀತಿ. ತಿಂಗಳಿಗೆ ಒಂದು ಸಾವಿರ ಕಟ್ಟಿದರೆ, ದುಬಾರಿ ಕಾರು, ಫ್ಲಾಟ್ ಗೆಲ್ಲುವ ಆಮಿಷ ತೋರಿಸಲಾಗುತ್ತಿದೆ. ಇದಲ್ಲದೆ, ನಾನಾ ರೀತಿಯ ಚಿನ್ನಾಭರಣ, ಇನ್ನಿತರ ಇಲೆಕ್ಟ್ರಾನಿಕ್ ಸಾಮಗ್ರಿಗಳನ್ನು ತೋರಿಸಿ ಡ್ರಾದಲ್ಲಿ ಗೆದ್ದರೆ ಸ್ವರ್ಗಕ್ಕೆ ಒಂದೇ ಗೇಣು ಎನ್ನುವ ರೀತಿ ಸಾಮಾನ್ಯ ಜನರನ್ನು ಹುಚ್ಚೆಬ್ಬಿಸುವ ನಕಲಿ ಕಂಪನಿಗಳು ಹುಟ್ಟಿಕೊಂಡಿವೆ. ಅಸ್ತ್ರ ಎನ್ನುವ ಹೆಸರಿನಲ್ಲಿ ನಡೆಯುವ ಇಂಥದ್ದೇ ಚೈನ್ ಲಿಂಕ್ ಬಿಸ್ನೆಸ್ ನಲ್ಲಿ ಗ್ರಾಹಕರನ್ನು ಕರೆತರುವವರಿಗೆ ಭಾರೀ ಆಮಿಷ ಒಡ್ಡಿರುವುದು ಪತ್ತೆಯಾಗಿದೆ.
ಒಂದು ಸಾವಿರ ಮೊತ್ತವನ್ನು ಕಟ್ಟಬಲ್ಲ ಒಬ್ಬ ಗ್ರಾಹಕರನ್ನು ಕರೆತಂದರೆ, 400 ರೂ. ಕಮಿಷನ್ ಜೊತೆಗೆ 2ರಿಂದ 12ರ ವರೆಗಿನ ಪ್ರತೀ ಪಾವತಿಗೂ 100 ರೂ. ಸಿಗುತ್ತದೆ. ಹತ್ತು ಗ್ರಾಹಕರನ್ನು ಕರೆತಂದಲ್ಲಿ ನಾಲ್ಕು ಸಾವಿರ ರೂ. ಜೊತೆಗೆ 2ರಿಂದ 12ರ ವರೆಗಿನ ಪಾವತಿಗೆ ಅದೇ ರೀತಿಯಲ್ಲಿ ಮೊತ್ತ ಸಿಗುತ್ತದೆ. 50 ಗ್ರಾಹಕರನ್ನು ತೋರಿಸಿದರೆ 20 ಸಾವಿರ ರೂ. ಜೊತೆಗೆ ಚಿನ್ನದ ಉಂಗುರ, 150 ಪ್ಲಸ್ ಗ್ರಾಹಕರನ್ನು ಕರೆತಂದಲ್ಲಿ 60 ಸಾವಿರ ರೂ. ರಿವಾರ್ಡ್ ಜೊತೆಗೆ ಸ್ಮಾರ್ಟ್ ಫೋನ್ ಉಚಿತ. 300ಕ್ಕೂ ಹೆಚ್ಚು ಗ್ರಾಹಕರನ್ನು ಪರಿಚಯಿಸಿದರೆ 1.20 ಲಕ್ಷ ರೂ. ರಿವಾರ್ಡ್ ಜೊತೆಗೆ ಫಾರಿನ್ ಟ್ರಿಪ್, 500ಕ್ಕೂ ಹೆಚ್ಚು ಗ್ರಾಹಕರನ್ನು ಕರೆತಂದರೆ 2 ಲಕ್ಷ ರಿವಾರ್ಡ್ ಮೊತ್ತದೊಂದಿಗೆ 2 ಲಕ್ಷ ನಗದು ಬಹುಮಾನ ಇದೆ. ಒಂದು ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಕರೆತಂದಲ್ಲಿ 4 ಲಕ್ಷ ರಿವಾರ್ಡ್ ಜೊತೆಗೆ ಹುಂಡೈ ನಿಯೋಸ್ ಕಾರು, 3 ಸಾವಿರ ಗ್ರಾಹಕರನ್ನು ಪರಿಚಯಿಸಿದಲ್ಲಿ 12 ಲಕ್ಷ ಬಹುಮಾನದ ಜೊತೆಗೆ ಕಿಯಾ ಸೋನೆಟ್ ಕಾರು ಗಿಟ್ಟಿಸುವ ಅವಕಾಶ.
ಈ ರೀತಿ ಕಂಪನಿ ಪರವಾಗಿ ಗ್ರಾಹಕರನ್ನು ಪರಿಚಯಿಸುವುದಕ್ಕೆ ಫೈನಾನ್ಸ್ ಅಡ್ವೈಸರ್ ಹೆಸರಲ್ಲಿ ಉದ್ಯೋಗದ ಜೊತೆಗೆ ಭಾರೀ ಕಮಿಷನ್ ಮೊತ್ತ ಗೆಲ್ಲುವುದಕ್ಕೆ ಅವಕಾಶ ಎಂದು ಆಕರ್ಷಣೆ ಗಿಟ್ಟಿಸಲಾಗುತ್ತಿದೆ. ಮೊನ್ನೆಯಷ್ಟೇ ಡ್ರೀಮ್ ಡೀಲ್ ಹೆಸರಿನ ಇಂಥದ್ದೇ ಒಂದು ಕಂಪನಿಯಲ್ಲಿ ಕಾರು ಗೆಲ್ಲುವ ಡ್ರಾ ಫಲಿತಾಂಶದ ವಿಡಿಯೋ ಹೊರಬಂದು ಅಸಲಿಯತ್ತನ್ನು ಬಯಲು ಮಾಡಿತ್ತು. ಮಂಗಳೂರಿನಲ್ಲಿ ಇಂಥ 25ಕ್ಕೂ ಹೆಚ್ಚು ಡ್ರಾದಲ್ಲಿ ಕಾರು, ಫ್ಲಾಟ್ ಗೆಲ್ಲುವ ಆಮಿಷದ ಚೈನ್ ಲಿಂಕ್ ಬಿಸ್ನೆಸ್ ಇದೆಯಂತೆ. ಉದ್ಯೋಗ ಇಲ್ಲದ ಯುವಜನರಿಗೆ ಉದ್ಯೋಗ ಜೊತೆಗೆ ಕಮಿಷನ್ ಹೆಸರಲ್ಲಿ ಹಣ ಗೆಲ್ಲುವ ಆಮಿಷ, ಜೊತೆಗೆ ತಿಂಗಳಿಗೆ ಒಂದು ಸಾವಿರ ರೂ.ನಂತೆ ಹಣ ಕಟ್ಟಿಸಿ ಗ್ರಾಹಕರ ಕೈಗೆ ಚೊಂಬು ನೀಡುವ ಈ ರೀತಿಯ ಬಿಸ್ನೆಸ್ ಗಳಿಗೆ ಕಡಿವಾಣ ಇಲ್ಲದಾಗಿದೆ.
ಯಾವುದೇ ಹಣಕಾಸು ವಹಿವಾಟು ನಡೆಸುವುದಿದ್ದರೂ, ಕಾನೂನು ಪ್ರಕಾರ ರಿಜಿಸ್ಟ್ರೇಶನ್ ಮಾಡಿರಬೇಕಾಗುತ್ತದೆ. ಸಂಗ್ರಹಿತ ಮೊತ್ತಕ್ಕೆ ಇಂತಿಷ್ಟು ಜಿಎಸ್ಟಿಯನ್ನೂ ಕಟ್ಟಬೇಕಾಗುತ್ತದೆ. ಆದರೆ ಈ ಕಂಪನಿಗಳು ಹಣಕಾಸು ವಹಿವಾಟು ನಡೆಸುವುದಕ್ಕೆ ನಿಗದಿತ ಪ್ರಾಧಿಕಾರದಿಂದ ಲೈಸನ್ಸನ್ನೇ ಪಡೆದಿಲ್ಲ. ಇದರ ಮೇಲೆ ಜಿಎಸ್ಟಿ ಕಟ್ಟುವುದು ದೂರದ ಮಾತು. ತಿಂಗಳಿಗೆ 15-20 ಸಾವಿರ ಜನರಿಂದ ಈ ರೀತಿ ಹಣ ಸಂಗ್ರಹಿಸುವ ಮಂದಿ ಅದರ ಮೇಲೆ ಸರಕಾರಕ್ಕೆ ತೆರಿಗೆ ಪಾವತಿಸುವುದಿಲ್ಲ. ಇತ್ತೀಚೆಗೆ ಈ ರೀತಿ ದುಬಾರಿ ಆಮಿಷವೊಡ್ಡಿ ಜನರನ್ನು ಯಾಮಾರಿಸುವ ಕಂಪನಿಗಳ ಬಗ್ಗೆ ತನಿಖೆ ನಡೆಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೇಳಿತ್ತು. ಯಾವ ರೀತಿಯ ತನಿಖೆಯಾಗುತ್ತೆ, ವಂಚನೆಗೊಳಗಾದವರಿಗೆ ಹೇಗೆ ಪರಿಹಾರ ನೀಡುತ್ತೆ ಎನ್ನುವುದು ಸವಾಲಿನ ಸಂಗತಿ.
"The Mangalore Astra Group's lucky draw scheme has been exposed for its deceptive practices. The company has been creating various offers to attract more customers by promising to give away cars and gold."
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm