ಬ್ರೇಕಿಂಗ್ ನ್ಯೂಸ್
22-11-24 10:33 pm Mangalore Correspondent ಕರಾವಳಿ
ಉಳ್ಳಾಲ, ನ.22: ಗ್ರಾಮೀಣ ಪ್ರದೇಶ ಸಜಿಪದಿಂದ ಕಲ್ಲಾಪು ನಗರ ಪ್ರದೇಶಕ್ಕೆ ನೇತ್ರಾವತಿ ನದಿ ತೀರದಲ್ಲಿ ತಡೆಗೋಡೆ ಕಮ್ ನೇರ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯ ಎರಡನೇ ಹಂತದ ಕಾಮಗಾರಿಗೆ ಸ್ಪೀಕರ್ ಯು.ಟಿ ಖಾದರ್ ಹರೇಕಳದಲ್ಲಿ ಶಿಲಾನ್ಯಾಸ ನೆರವೇರಿಸಿದರು.
ಸಜಿಪ ಗ್ರಾಮ ಮತ್ತು ಉಳ್ಳಾಲ ನಗರ ಪ್ರದೇಶ ಸಂಪರ್ಕ ರಸ್ತೆಯ ದೂರದೃಷ್ಟಿಯ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಶಿಲಾನ್ಯಾಸಗೈದ ಸ್ಪೀಕರ್ ಖಾದರ್ ಮಾತನಾಡಿ, ನೇತ್ರಾವತಿ ನದಿ ತೀರದಲ್ಲಿ ಹರೇಕಳದಿಂದ ಕಲ್ಲಾಪು ಸಂಪರ್ಕದ ತಡೆಗೋಡೆ ಮತ್ತು ರಸ್ತೆ ನಿರ್ಮಾಣ ಯೋಜನೆಯ ಮೊದಲ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದೆ.ಇದೀಗ ಹರೇಕಳ-ಪಾವೂರು-ಸಜಿಪಕ್ಕೆ ನೇರ ಸಂಪರ್ಕದ ತಡೆಗೋಡೆ ಮತ್ತು ರಸ್ತೆ ನಿರ್ಮಾಣದ ಎರಡನೇ ಹಂತದ ಕಾಮಗಾರಿಯು ಹನ್ನೆರಡು ಕೋಟಿ ರೂಪಾಯಿ ಅನುದಾನದಿಂದ ನಡೆಯಲಿದೆ. ಕಲ್ಲಾಪುವಿನಿಂದ ಸಜಿಪದ ವರೆಗಿನ ತಡೆಗೋಡೆ ಕಮ್ ರಸ್ತೆ ನಿರ್ಮಾಣ ಕಾಮಗಾರಿಗೆ ನೂರು ಕೋಟಿ ರೂಪಾಯಿ ಹೆಚ್ಚುವರಿ ಅನುದಾನದ ಪ್ರಸ್ತಾವನೆಯನ್ನ ಸಣ್ಣ ನೀರಾವರಿ ಸಚಿವರಿಗೆ ಸಲ್ಲಿಸಿದ್ದೇನೆ.
ನನ್ನ ಕ್ಷೇತ್ರದ ಎರಡು ಮಹತ್ತರ ಯೋಜನೆಗಳ ಪ್ರಸ್ತಾವನೆಯು ಅಂಗೀಕಾರವಾದ ನಂತರ, ಕಲ್ಲಾಪು-ಸಜಿಪ ರಸ್ತೆ ನಿರ್ಮಾಣ ಯೋಜನೆಗೆ ಹೆಚ್ಚುವರಿ ನೂರು ಕೋಟಿ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ. ಹಂತ ಹಂತವಾಗಿ ರಸ್ತೆ ನಿರ್ಮಾಣದ ಕೆಲಸ ಪೂರ್ಣಗೊಳ್ಳಲಿದೆ.ನೇತ್ರಾವತಿ ನದಿ ಪಾತ್ರದ ಜನರು ಮಳೆಗಾಲದ ನೆರೆಯಿಂದ ಬಹಳಷ್ಟು ಸಮಸ್ಯೆ ಅನುಭವಿಸಿದ್ದಾರೆ.ಅವರ ಸಹನೆ ಸಹಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ.
ನದಿ ತೀರದ ರಸ್ತೆ ನಿರ್ಮಾಣ ಯೋಜನೆ ಸಂಪೂರ್ಣಗೊಂಡ ಬಳಿಕ ಪಾವೂರು, ಹರೇಕಳ, ಸಜಿಪದಂತಹ ಗ್ರಾಮೀಣ ಭಾಗವು ನಗರ ಪ್ರದೇಶಕ್ಕೆ ಹತ್ತಿರವಾಗಿ ಚಿತ್ರಣವೇ ಬದಲಾಗಲಿದೆ. ಭವಿಷ್ಯದಲ್ಲಿ ಈ ರಸ್ತೆಯು ಜನರಿಗೆ ಬಹಳಷ್ಟು ಉಪಯೋಗಕಾರಿಯಾಗಲಿದ್ದು,ಹೊಸ ಯೋಜನೆಗಳು ಬಂದು ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಕಾಣಲಿದೆ ಎಂದರು.
ನಗರದಿಂದ ಪಾವೂರು ಉಳಿಯ ದ್ವೀಪ ಸಂಪರ್ಕದ ತೂಗುಸೇತುವೆ ನಿರ್ಮಾಣ ಯೋಜನೆಯೂ ಅಂತಿಮ ಹಂತದಲ್ಲಿದೆ. ಕಡತಗಳ ಕೆಲಸಗಳೆಲ್ಲವೂ ಮುಗಿದಿದ್ದು, ಶೀಘ್ರವೇ ಉಳಿಯ ಪ್ರದೇಶ ಸಂಪರ್ಕದ ತೂಗು ಸೇತುವೆಯೂ ನಿರ್ಮಾಣಗೊಳ್ಳಲಿದೆ ಎಂದು ಯು.ಟಿ.ಖಾದರ್ ಹೇಳಿದರು.
ಹರೇಕಳದಿಂದ ಸಜಿಪದ ವರೆಗೆ ದೋಣಿ ಮೂಲಕ ಸಾಗಿದ ಸ್ಪೀಕರ್ ಖಾದರ್ ಅವರು ತಡೆಗೋಡೆ ಕಮ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುವ ಪ್ರದೇಶದ ಸ್ಥಳ ಪರಿಶೀಲನೆ ನಡೆಸಿದರು. ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು , ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಬೋಳಿಯಾರ್, ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್ ಮೊದಲಾದವರು ಉಪಸ್ಥಿತರಿದ್ದರು.
Barrier cum-road construction along Netravati banks from Sajipa village to Kallap, Speaker Khader inspects site by boat.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm