ಬ್ರೇಕಿಂಗ್ ನ್ಯೂಸ್
22-11-24 10:17 pm Mangalore Correspondent ಕರಾವಳಿ
ಉಳ್ಳಾಲ, ನ.22 : ದೇರಳಕಟ್ಟೆ ಬ್ಯಾರೀಸ್ ವಾಣಿಜ್ಯ ಕಟ್ಟಡದಿಂದ ಕುತ್ತಾರು ಪಂಡಿತ್ ಹೌಸ್ ವರೆಗಿನ ರಸ್ತೆಯನ್ನು ಅತಿಕ್ರಮಿಸಿದ್ದ ಅಂಗಡಿ, ಮಳಿಗೆಗಳನ್ನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ಶುಕ್ರವಾರ ಜೆಸಿಬಿ ಬಳಸಿ ಕೆಡವಿ ಹಾಕಿದ್ದಾರೆ. ನೋಟೀಸು ನೀಡದೆ ದಿಢೀರ್ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳನ್ನ ವ್ಯಾಪಾರಿಗಳು ತರಾಟೆಗೆತ್ತಿಕೊಂಡಿದ್ದಾರೆ.
ಇದೇ ವೇಳೆ, ಲೋಕೋಪಯೋಗಿ ರಸ್ತೆ ಅತಿಕ್ರಮಿಸಿರುವ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಬೋರ್ಡ್ ಗಳನ್ನ ಕೆಡವಲು ನಿಮಗೆ ತಾಕತ್ತಿಲ್ಲವೇ ಎಂದು ಅಧಿಕಾರಿಗಳನ್ನ ಪ್ರಶ್ನಿಸಿದ್ದಾರೆ. ಪೊಲೀಸರ ರಕ್ಷಣೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್ ಆರ್.ಬಿ, ಸಹಾಯಕ ಇಂಜಿನಿಯರ್ ದಾಸ್ ಪ್ರಕಾಶ್ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ರಸ್ತೆ ಅತಿಕ್ರಮಿತ ಅಂಗಡಿ, ಮಳಿಗೆಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ. ದೇರಳಕಟ್ಟೆಯಿಂದ ಕುತ್ತಾರು, ಪಂಡಿತ್ ಹೌಸ್ ತನಕದ ರಸ್ತೆ ಇಕ್ಕೆಲಗಳನ್ನ ಅತಿಕ್ರಮಿಸಿದ ಅಂಗಡಿ, ಮಳಿಗೆಗಳನ್ನ ಜೆಸಿಬಿ ಯಂತ್ರದಿಂದ ಕೆಡವಲಾಗಿದೆ. ಅಂಗಡಿ, ಮಳಿಗೆಗಳ ಮುಂದೆ ರಸ್ತೆ ಅತಿಕ್ರಮಿಸಿ ಅಳವಡಿಸಲಾಗಿದ್ದ ಶೀಟ್ ಛಾವಣಿ, ಆವರಣ ಗೋಡೆ, ಇಂಟರ್ ಲಾಕ್ ಗಳನ್ನ ಕೆಡವಲಾಗಿದೆ.



ಅಧಿಕಾರಿಗಳು ಅಂಗಡಿಗಳ ಮಾಲೀಕರಿಗೆ ನೋಟೀಸು ನೀಡದೆ ದಿಢೀರ್ ಕಾರ್ಯಾಚರಣೆ ನಡೆಸಿದ್ದು ಅಂಗಡಿಗಳಲ್ಲಿ ಬಾಡಿಗೆದಾರರಾಗಿ ವ್ಯಾಪಾರ ನಡೆಸುತ್ತಿರುವ ನಮ್ಮಂತಹ ಬಡ ವ್ಯಾಪಾರಿಗಳು ನಷ್ಟ, ಸಮಸ್ಯೆ ಅನುಭವಿಸುವಂತಾಗಿದೆ ಎಂದು ವ್ಯಾಪಾರಸ್ಥರು ದೂರಿದ್ದಾರೆ. ಪಕ್ಕದಲ್ಲೇ ಇರುವ ಖಾಸಗಿ ಆಸ್ಪತ್ರೆಯವರು ರಸ್ತೆಯನ್ನ ಅತಿಕ್ರಮಿಸಿ ದೊಡ್ಡ ದೊಡ್ಡ ಬೋರ್ಡ್ ಗಳನ್ನ ಹಾಕಿದ್ದು ಉಳ್ಳವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಾಕತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಲೋಕೋಪಯೋಗಿ ರಸ್ತೆ ಅತಿಕ್ರಮಿತ ಅಂಗಡಿ, ಮುಂಗಟ್ಟುಗಳಿಗೆ ನಾವು ಇಲಾಖೆಯಿಂದ ಕಳೆದ ಆರು ತಿಂಗಳಿಂದ ಮೂರು ಬಾರಿ ನೋಟೀಸು ನೀಡಿದ್ದೇವೆ. ಅಷ್ಟಲ್ಲದೆ ಅಂಗಡಿಗಳ ಗೋಡೆಗೂ ನೋಟೀಸನ್ನ ಅಂಟಿಸಿದ್ದೇವೆ. ಕೆಲ ಅಂಗಡಿ ಮಾಲೀಕರು ಅದನ್ನ ಲೆಕ್ಕಿಸದೆ ನೋಟೀಸ್ಗೆ ಪೈಂಟ್ ಬಳಿದಿದ್ದಾರೆ. ರಸ್ತೆ ಅತಿಕ್ರಮಿತ ಮಳಿಗೆಗಳನ್ನ ತೆರವುಗೊಳಿಸಲು ನಮಗೆ ಸುಪ್ರೀಂ ಕೋರ್ಟ್ ಆದೇಶವಿದೆ. ಹಾಗಾಗಿ ತೆರವು ಕಾರ್ಯಾಚರಣೆ ನಡೆಸಿದ್ದೇವೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ದಾಸ್ ಪ್ರಕಾಶ್ ತಿಳಿಸಿದ್ದಾರೆ.
Mangalore Kuthar Illegal buildings vandalised. People protest against officals for not touching illegal hospital building premises over encroachment
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm