ಬ್ರೇಕಿಂಗ್ ನ್ಯೂಸ್
22-11-24 09:04 pm Mangalore Correspondent ಕರಾವಳಿ
ಮಂಗಳೂರು, ನ.22: ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಸಭೆ ಚುನಾವಣೆಗೆ ಮೊದಲೇ ‘ಬ್ಯಾಕ್ ಟು ಊರು’ ಎನ್ನುವ ವಿಶಿಷ್ಟ ಪರಿಕಲ್ಪನೆ ಮುಂದಿಟ್ಟಿದ್ದರು. ಮಂಗಳೂರು ಮೂಲದಿಂದ ದೇಶ- ವಿದೇಶಕ್ಕೆ ಹೋಗಿ ಸಾಧನೆ ಮಾಡಿದವರನ್ನು ಮರಳಿ ಕರೆದು ಮಂಗಳೂರಿನಲ್ಲೇ ಹೂಡಿಕೆ ಮಾಡಿಸುವುದು, ಆಮೂಲಕ ಇಲ್ಲಿನ ಯುವಜನರಿಗೆ ಉದ್ಯೋಗ ಕೊಡಿಸುವ ಕನಸು ಅದಾಗಿತ್ತು. ಸಂಸದರ ಬೇಡಿಕೆಗೆ ಇಟಲಿಯ ಗ್ರೀನ್ ಎನರ್ಜಿ ಕಟ್ಟಡ ನಿರ್ಮಾಣ ಕಂಪನಿಯೊಂದು ಸ್ಪಂದಿಸಿದ್ದು, ಮಂಗಳೂರು ಎಸ್ಇಝೆಡ್ ನಲ್ಲಿ 1500 ಕೋಟಿ ರೂಪಾಯಿ ಮೊತ್ತ ಹೂಡಿಕೆ ಮಾಡಲು ಮುಂದಾಗಿದೆ.
ಈ ಬಗ್ಗೆ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಮಂಗಳೂರು ಎಸ್ಇಝೆಡ್ ಲಿಮಿಟೆಡ್ ಮತ್ತು ಇಟಲಿಯ MIR Group ಎನ್ನುವ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದೆ. ಎಸ್ಇಝೆಡ್ ಸಂಸ್ಥೆಯ ಸೂರ್ಯನಾರಾಯಣ ಮತ್ತು ಮೀರ್ ಗ್ರೂಪ್ ಸಂಸ್ಥೆಯ ಸಿಇಓ ರಫೇಲೆ ಮರಾಝೋ ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು. ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆನರಾ ಚೇಂಬರ್ ಆಫ್ ಕಾಮರ್ಸ್, ಕ್ರೆಡೈ ಸೇರಿದಂತೆ ಉದ್ಯಮಿಗಳು, ವ್ಯಾಪಾರ ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಇದೇ ವೇಳೆ ಮಾತನಾಡಿದ ಸಂಸದ ಚೌಟ, ಬ್ಯಾಕ್ ಟು ಊರು ಎನ್ನುವ ಕಲ್ಪನೆಗೆ ಇಟಲಿಯ ಕಂಪನಿಯಿಂದ ಸ್ಪಂದನೆ ಸಿಕ್ಕಿದೆ. ನಾವು ಮಂಗಳೂರಿನಿಂದ ಬೇರೆ ಕಡೆಗೆ ತೆರಳಿ ಕಂಪನಿ ಸ್ಥಾಪಿಸಿರುವ ಹಲವು ಸಾಧಕರನ್ನು ಸಂಪರ್ಕಿಸಿದ್ದೇವೆ. ಮಂಗಳೂರಿನ ಪ್ರಮೋದ್ ಪಿಂಟೋ ಇಟಲಿ ಕಂಪನಿಯ ಬಗ್ಗೆ ಮಾಹಿತಿ ಕೊಟ್ಟಿದ್ದರು. ನಿತಿನ್ ರತ್ನಾಕರ್ ಮುತುವರ್ಜಿಯಿಂದ ಹೂಡಿಕೆ ಮಾಡಲು ಬಂದಿದ್ದಾರೆ. ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದರು. ಬ್ಯಾಕ್ ಟು ಊರು ಪರಿಕಲ್ಪನೆಯನ್ನು ಸಾಕಾರಗೊಳಿಸಲು ಕೆನರಾ ಚೇಂಬರ್ ಸಂಸ್ಥೆ ಮುತುವರ್ಜಿ ವಹಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಆಮೂಲಕ ಉತ್ತಮ ಉದ್ಯೋಗ ಲಭಿಸುವಂತಾಗಬೇಕು ಎಂದು ಕೇಳಿಕೊಂಡರು.
ವಿದೇಶಿ ಹೂಡಿಕೆಗೆ ಕೇಂದ್ರ ಸರ್ಕಾರದ ಅನುಮತಿ
ಇದು ವಿದೇಶಿ ನೇರ ಹೂಡಿಕೆಯಾಗಿದ್ದು, ಕೇಂದ್ರ ಸರಕಾರದ ಅನುಮತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೀರ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥರು, ಎಸ್ಇಝೆಡ್ ಸಿಇಓ ಅವರ ಜೊತೆಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನ.23ರಂದು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲಿದ್ದಾರೆ. ಮೊದಲ ಹಂತದಲ್ಲಿ ಮೀರ್ ಗ್ರೂಪ್ ಮಂಗಳೂರಿನಲ್ಲಿ ಹತ್ತು ಎಕ್ರೆ ಜಾಗ ಕೇಳಿದ್ದು, ಎಸ್ಇಝೆಡ್ ವ್ಯಾಪ್ತಿಯಲ್ಲಿ ಒದಗಿಸಲಾಗುವುದು. ಹಂತ ಹಂತವಾಗಿ ಉದ್ಯಮ ವಿಸ್ತರಣೆಯಾಗಲಿದ್ದು, ಇನ್ನೆರಡು ವರ್ಷದಲ್ಲಿ ಸಂಸ್ಥೆ ಕಾರ್ಯಾರಂಭ ಮಾಡಲಿದೆ ಎಂದು ಸಂಸದ ಚೌಟ ಹೇಳಿದರು.
ಗ್ರೀನ್ ಎನರ್ಜಿಯಿಂದಲೇ ಕಟ್ಟಡ ನಿರ್ಮಾಣ
ಇಟಲಿಯ MIR Group ಸಂಸ್ಥೆ ಗ್ರೀನ್ ಎನರ್ಜಿಯಿಂದ ಕಟ್ಟಡ ನಿರ್ಮಿಸುವುದರಲ್ಲಿ ಹೆಸರುವಾಸಿಯಾಗಿದ್ದು, ಸ್ವಿಜರ್ಲ್ಯಾಂಡ್, ದುಬೈನಲ್ಲಿ ಉದ್ಯಮ ಹೊಂದಿದೆ. ಕಂಪನಿಯ ದುಬೈ ಘಟಕದಲ್ಲಿ ಮಂಗಳೂರಿನ ಕುಲಶೇಖರ ನಿವಾಸಿ ನಿತಿನ್ ರತ್ನಾಕರ್ ಡೈರೆಕ್ಟರ್ ಆಗಿದ್ದಾರೆ. ಮಂಗಳೂರಿನಲ್ಲಿ ಹೂಡಿಕೆ ಮಾಡಬೇಕೆಂಬ ಸಂಸದರ ಆಸಕ್ತಿಗೆ ಸ್ಪಂದಿಸಿ, ನಿತಿನ್ ರತ್ನಾಕರ್ ಅವರು ಸಂಸ್ಥೆಯ ಸಿಇಓ ರಫೇಲೆ ಅವರನ್ನು ಮಂಗಳೂರಿಗೆ ಕರೆತಂದಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ಹೊಸ ರೀತಿಯ ಪರಿಕಲ್ಪನೆಯ ಗ್ರೀನ್ ಎನರ್ಜಿ ಕಟ್ಟಡ ರಚನೆಗೆ ಮುಂದಾಗಿದ್ದಾರೆ.
ಪರಿಸರ ಸ್ನೇಹಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ
ಮೀರ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ರಫೇಲೇ ಮೊರಾಝೊ ಮಾತನಾಡಿ, ಮಂಗಳೂರಿನಲ್ಲಿ ನಮ್ಮ ಕಂಪನಿಯ ಉತ್ಪಾದನಾ ಘಟಕ ಸ್ಥಾಪಿಸಿದರೆ, ಆಫ್ರಿಕಾ, ಮಧ್ಯಪ್ರಾಚ್ಯ ದೇಶಗಳಿಗೆ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ರಫ್ತು ಮಾಡುವುದು ಸುಲಭವಾಗಲಿದೆ. ಪರಿಸರಕ್ಕೆ ಪೂರಕವಾಗಬಲ್ಲ, ಕಾರ್ಬನ್ ನೆಗೆಟಿವ್ ಕಟ್ಟಡಗಳನ್ನು ಸ್ಥಾಪಿಸುವುದು ನಮ್ಮ ಆದ್ಯತೆ. ಸೋಲಾರ್ ಪ್ಯಾನಲ್ ಒಳಗೊಂಡ ಕಟ್ಟಡಗಳನ್ನು ನಿರ್ಮಾಣ ಮಾಡಲಿದ್ದೇವೆ. ಮಂಗಳೂರಿನಲ್ಲಿ 45 ಎಕ್ರೆ ಜಾಗದಲ್ಲಿ ಹಂತ ಹಂತಗಳಲ್ಲಿ ಉದ್ಯಮ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದರು.
ಕಲ್ಲು ಇಟ್ಟಿಗೆ ಬದಲು ಸೋಲಾರ್ ಪ್ಯಾನಲ್
ನಿತಿನ್ ರತ್ನಾಕರ್ ಮಾತನಾಡಿ, ಮಂಗಳೂರನ್ನು ಹಸಿರು ಇಂಧನ ಕೇಂದ್ರವಾಗಿ ಮಾಡುವ ಗುರಿ ಇದೆ. ಕಲ್ಲು ಇಟ್ಟಿಗೆಯ ಪರ್ಯಾಯವಾಗಿ ಸೋಲಾರ್ ಪ್ಯಾನಲ್ ಸಹಿತವಾದ, ವಿದ್ಯುತ್ ಉತ್ಪಾದಿಸಬಲ್ಲ ಗೋಡೆಗಳನ್ನು ತಯಾರಿ ಮಾಡುತ್ತೇವೆ. ಇಲ್ಲಿನ ಹವಾಗುಣ ಇಟಲಿ ಮಾದರಿಯಲ್ಲೇ ಇದ್ದು, ವಿಫುಲವಾಗಿರುವ ಸೂರ್ಯನ ಬೆಳಕನ್ನು ಬಳಸಿಕೊಂಡು ವಿದ್ಯುತ್ ತಯಾರಿಸುತ್ತೇವೆ. ಒಂದು ಚದರ ಮೀಟರ್ ವ್ಯಾಪ್ತಿಯ ಕಟ್ಟಡದಲ್ಲಿ ಪ್ರತಿ ಗಂಟೆಗೆ ಒಂದು ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಿದೆ. ಉಳಿಕೆಯ ವಿದ್ಯುತ್ತನ್ನು ಮಾರಾಟ ಮಾಡಬಹುದಾಗಿದ್ದು, ಹೊಸ ಮಾದರಿಯ ಕಟ್ಟಡಗಳನ್ನು ಮಾಡುತ್ತೇವೆ. ನೀರಿನಲ್ಲೂ ಕಟ್ಟಡಗಳನ್ನು ತಯಾರಿಸಬಲ್ಲ ಟೆಕ್ನಾಲಜಿ ಇಟಲಿಯಲ್ಲಿದ್ದು, ನಾವು ಭಾರತದಲ್ಲಿಯೂ ಮಾಡಲು ಬಯಸುತ್ತೇವೆ ಎಂದರು.
‘ಬ್ಯಾಕ್ ಟು ಊರು’ ಕಲ್ಪನೆಗೆ ಮೆಚ್ಚುಗೆ
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಬ್ಯಾಕ್ ಟು ಊರು ಕಲ್ಪನೆ ಅದ್ಭುತವಾಗಿದ್ದು, ನಮ್ಮ ಊರಿಗೆ ಏನಾದರೂ ಕೊಡುಗೆ ಕೊಡಬೇಕೆಂಬ ಇಚ್ಛೆಯಿತ್ತು. ಅದಕ್ಕೆ ಸಂಸದರು ಅವಕಾಶ ಮಾಡಿಕೊಟ್ಟಿದ್ದಾರೆ. ಅಂದಾಜು 1500 ಕೋಟಿ ರೂ. ಹೂಡಿಕೆಯನ್ನು ಮಂಗಳೂರಿನಲ್ಲಿ ಮಾಡುವ ಗುರಿಯಿದೆ. ಉದ್ಯಮ ವಿಸ್ತರಣೆಯಾದಂತೆ ಅದಕ್ಕಿಂತಲೂ ಹೆಚ್ಚಿನ ಹೂಡಿಕೆ ಆಗಬಹುದು ಎಂದು ನಿತಿನ್ ರತ್ನಾಕರ್ ಹೇಳಿದರು.
ಇಟಾಲಿಯನ್ ಡಿಸೈನ್ ವಿಶೇಷ ಮಾದರಿ
ಇಟಾಲಿಯನ್ ಡಿಸೈನ್ ಎನ್ನುವುದು ವಿಶೇಷ ಪರಿಕಲ್ಪನೆಯಾಗಿದ್ದು, ಸ್ಕಿಲ್ ಡೆವಲಪ್ಮೆಂಟ್ ಹೆಸರಿನಲ್ಲಿ ಯುನಿವರ್ಸಿಟಿಯಲ್ಲಿ ಕೋರ್ಸ್ ಆರಂಭಿಸಬಹುದು. 2030ರ ವೇಳೆಗೆ ಕಾರ್ಬನ್ ಡೈಆಕ್ಸೈಡ್ ಆದಷ್ಟು ಕಡಿಮೆಗೊಳಿಸುವ ಗುರಿಯನ್ನು ಭಾರತ ಸರಕಾರ ಹೊಂದಿದೆ. ಸರ್ಕಾರದ ಸಹಯೋಗ ಸಿಕ್ಕಿದರೆ, ಇನ್ನೋವೇಟಿವ್ ಆಗಿ ಚಿಂತನೆ ಮಾಡಬಹುದು. ರೂಫ್, ಬಿಲ್ಡಿಂಗ್ ಅನ್ನೇ ಸೋಲಾರಿನಲ್ಲೇ ಫಿನಿಶ್ ಮಾಡಬಹುದು. ಒಂದು ಕಟ್ಟಡದಿಂದ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾದರೆ, ಅದೇ ದೊಡ್ಡ ಹಣಕಾಸು ಮೂಲವಾಗಬಹುದು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಚಂದ್ರುಪರ್ವತ್ ರೆಡ್ಡಿ, ಮೀರ್ ಕಂಪನಿಯ ಕಾನೂನು ಘಟಕದ ಮುಖ್ಯಸ್ಥ ಕ್ಲಾಡಿಯೋ ಇದ್ದರು.
An exchange of expression of interest (EOI) between MIR Group, Italy and Mangaluru Special Economic Zone Ltd (MSEZ), to set up the MIR unit in Mangaluru as part of their expansion project, was held in Mangaluru on Friday.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm