ಬ್ರೇಕಿಂಗ್ ನ್ಯೂಸ್
22-11-24 11:55 am Mangalore Correspondent ಕರಾವಳಿ
ಉಳ್ಳಾಲ, ನ.22: ಸೋಮೇಶ್ವರ ಪುರಸಭೆಯಲ್ಲಿ ಈ ಹಿಂದೆ ಮುಖ್ಯಾಧಿಕಾರಿಯಾಗಿದ್ದ ವಾಣಿ ಆಳ್ವ ಎಂಬ ಭ್ರಷ್ಟ ಅಧಿಕಾರಿಯೇ ಅಕ್ರಮ ಗೆಸ್ಟ್ ಹೌಸ್ ಮಾಫಿಯಾವನ್ನ ಪೋಷಿಸಿದ್ದಾರೆ. ಸೋಮೇಶ್ವರ ರೆಸಾರ್ಟ್ ಈಜುಕೊಳದಲ್ಲಿ ಮೃತಪಟ್ಟ ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅಕ್ರಮ ಗೆಸ್ಟ್ ಹೌಸ್ ಗಳನ್ನ ಪೋಷಿಸುತ್ತಿರುವ ಭ್ರಷ್ಟ ಅಧಿಕಾರಿಗಳ ಸವಲತ್ತುಗಳನ್ನ ಕಡಿತಗೊಳಿಸಿ ತಲಾ ಐದು ಕೋಟಿ ಪರಿಹಾರ ನೀಡಬೇಕೆಂದು ಟೀಮ್ ಸೇವ್ ಬಟ್ಟಪ್ಪಾಡಿಯ ಕಾರ್ಯದರ್ಶಿ ಸುಖೇಶ್ ಜಿ. ಉಚ್ಚಿಲ್ ಆಗ್ರಹಿಸಿದ್ದಾರೆ.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 2011 ರಲ್ಲಿ ಉಚ್ಚಿಲ ಪ್ರದೇಶದ ಸಿಆರ್ ಝಡ್ ಪ್ರದೇಶದ ಐವತ್ತಕ್ಕೂ ಹೆಚ್ಚಿನ ಅಕ್ರಮ ಗೆಸ್ಟ್ ಹೌಸ್ ಗಳ ವಿರುದ್ಧ ಅವತ್ತಿನ ಜಿಲ್ಲಾಧಿಕಾರಿ ಪೊನ್ನುರಾಜ್ ಅವರು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಜೆಸಿಬಿಯಿಂದ ಕಟ್ಟಡಗಳನ್ನ ನೆಲಸಮಗೊಳಿಸಿದ್ದರು. ಆನಂತರ ಬಂದ ಯಾವುದೇ ಅಧಿಕಾರಿಗಳು ಸೋಮೇಶ್ವರ, ಉಚ್ಚಿಲದ ಅಕ್ರಮ ಗೆಸ್ಟ್ ಹೌಸ್ಗಳ ವಿರುದ್ಧ ಕ್ರಮ ಕೈಗೊಳ್ಳದ ಪರಿಣಾಮ ಮೂವರು ವಿದ್ಯಾರ್ಥಿನಿಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಅಕ್ರಮಗಳಿಗೆ ಸಾಥ್ ನೀಡುವ ಅಧಿಕಾರಿಗಳು ದುರ್ಘಟನೆಗಳು ನಡೆದಾಗ ನಮ್ಮ ಗಮನಕ್ಕೆ ಬಂದಿಲ್ಲವೆಂದು ಸಬೂಬು ಹೇಳಿ ಸಾಚಾರಂತೆ ವರ್ತಿಸುತ್ತಾರೆ. ಘಟನೆಗೆ ಇವರೇ ಕಾರಣರೆಂದು ಯಾರೋ ಇಬ್ಬರನ್ನ ಹಿಡಿದು ಜೈಲಿಗೆ ಹಾಕುವ ನಾಟಕ ಮಾಡುತ್ತಾರೆ. ವಾಝ್ಕೊ ರೆಸಾರ್ಟಿನ ಅಸಲಿ ಮಾಲೀಕ ಜರ್ಮನಿಯಲ್ಲಿದ್ದಾನೆ. ಆತನನ್ನ ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಿ, ದೇಶದಲ್ಲಿ ಆತನ ಹೆಸರಲ್ಲಿರುವ ಆಸ್ತಿಗಳನ್ನ ಜಪ್ತಿ ಮಾಡಬೇಕು. ಅಧಿಕಾರಿಗಳು ಸಾಚಾಗಳಾದರೆ ಸೋಮೇಶ್ವರದಿಂದ ಬಟ್ಟಪ್ಪಾಡಿ ತನಕದ ಅಕ್ರಮ ಗೆಸ್ಟ್ ಹೌಸ್ಗಳಿಗೆ ಬೀಗ ಜಡಿಯುವ ಕೆಲಸ ಯಾಕೆ ಮಾಡಿಲ್ಲ. ಈಜು ಕೊಳಕ್ಕೆ ಲೈಫ್ ಗಾರ್ಡ್ ನೇಮಿಸದೆ ನೀರಲ್ಲಿ ಪಂಕ್ಚರ್ ಶಾಪಿನ ಹಳೆಯ ಕಳಪೆ ಟ್ಯೂಬ್ ಇರಿಸಿದ್ದಾರೆ. ಸುರಕ್ಷತೆಗಳನ್ನ ಪರಿಶೀಲಿಸಬೇಕಾಗಿರುವುದು ಸ್ಥಳೀಯಾಡಳಿತದ ಅಧಿಕಾರಿಗಳ ಕರ್ತವ್ಯ ಅಲ್ಲವೇ ಎಂದು ಸುಕೇಶ್ ಪ್ರಶ್ನಿಸಿದರು.
ಅಕ್ರಮ ಗೆಸ್ಟ್ ಹೌಸ್ ಪೋಷಿಸಿದ್ದೇ ವಾಣಿ ಆಳ್ವ
ಸೋಮೇಶ್ವರ ಪುರಸಭೆಯಲ್ಲಿ ವಾಣಿ ಆಳ್ವ ಮುಖ್ಯಾಧಿಕಾರಿಯಾಗಿದ್ದ ಕಾಲದಲ್ಲಿ ಅಕ್ರಮ ಗೆಸ್ಟ್ ಹೌಸ್ ಗಳ ಭ್ರಷ್ಟಾಚಾರ ಪರಾಕಾಷ್ಠೆ ತಲುಪಿತ್ತು. ಆಕೆಯ ಕಾನೂನು ಹೇಗಿತ್ತೆಂದರೆ ಮಾಫಿಯಾಗಳಿಗೆ ಇಲಾಖೆಯಿಂದ ನೋಟೀಸು ಬಿಟ್ಟು ಆಕೆಯೇ ಅವರಿಗೆ ವಕೀಲರನ್ನ ನೇಮಿಸಿ ಪ್ರಕರಣಕ್ಕೆ ತಡೆ ಕೊಡಿಸುವ ಚಾಲಾಕಿತನ ಮೆರೆಯುತ್ತಿದ್ದರು. ಉಚ್ಚಿಲದಲ್ಲಿ ಕ್ಯಾಂಪ್ 21 ಅಕ್ರಮ ಗೆಸ್ಟ್ ಹೌಸ್ ಕಾರ್ಯಾಚರಿಸುತ್ತಿದೆ. ವಿಧವೆಯೋರ್ವರು ಜೀವನೋಪಾಯಕ್ಕಾಗಿ ಗೆಸ್ಟ್ ಹೌಸ್ ನಡೆಸುತ್ತಿರುವುದಾಗಿ ನೆಪ ಹೇಳಿ ಟ್ರೇಡ್ ಲೈಸೆನ್ಸ್ ಪಡೆಯಲು ಹೈಕೋರ್ಟಿಗೆ ಮೊರೆ ಹೋಗಿದ್ದರು. ವಿಧವೆ ಜೀವನೋಪಾಯಕ್ಕಾಗಿ ಹೋಂ ಸ್ಟೇ ನಡೆಸೋದಾದರೆ ಆಕೆ ಅಲ್ಲಿ ವಾಸವಿರಬೇಕು. ವಾಸ್ತವದಲ್ಲಿ ಅಲ್ಲಿ ಯಾವುದೇ ವಿಧವೆ ವಾಸವಿಲ್ಲ. ಮಾಫಿಯಾಗಳು ಮತ್ತು ಸ್ಥಳೀಯಾಡಳಿತದ ಅಧಿಕಾರಿಗಳ ಹೊಂದಾಣಿಕೆಯಿಂದ ಇವರಿಗೆ ಕೋರ್ಟ್ ಮೂಲಕ ಟ್ರೇಡ್ ಲೈಸೆನ್ಸ್ ಸಿಗುತ್ತದೆ ಎಂದು ಸುಖೇಶ್ ಉಚ್ಚಿಲ್ ಆರೋಪಿಸಿದರು.
ಜಲಚರ ಮತ್ತು ಸ್ಥಳೀಯರ ರಕ್ಷಣೆಗಾಗಿ ಸಿಆರ್ ಝಡ್ ಕಾನೂನು ರಚಿಸಲಾಗಿತ್ತು. ಸಿಆರ್ ಝಡ್ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ಮಾಡಲು ಅವಕಾಶವಿಲ್ಲ. ವಿದ್ಯಾರ್ಥಿನಿಯರು ಮೃತಪಟ್ಟ ಈಜು ಕೊಳವು ಸಿಆರ್ ಝಡ್ ವ್ಯಾಪ್ತಿಯಲ್ಲಿದೆ. ಕೆಳಗಿನ ಅಧಿಕಾರಿಗಳು ಜಿಲ್ಲೆಗೆ ವರ್ಗಾವಣೆ ಪಡೆದು ಬರುವ ಹಿರಿಯ ಅಧಿಕಾರಿಗಳಲ್ಲಿ ಈ ವಿಚಾರಗಳನ್ನ ಮುಚ್ಚಿಡುತ್ತಾರೆ. ನಾವು ಪ್ರಗತಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ವಿರೋಧಿಗಳಲ್ಲ. ಕಾನೂನು ಎಲ್ಲರಿಗೂ ಒಂದೇ ರೀತಿ ಜಾರಿ ಮಾಡಿ. ಕಾನೂನನ್ನ ಕಠಿಣಗೊಳಿಸಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಅದಕ್ಕೆ ಸ್ಪಷ್ಟ ನಿದರ್ಶನ ಜಿಲ್ಲೆಯ ಮರಳು ಮಾಫಿಯಾ. ಮರಳು ಸಮಸ್ಯೆಯನ್ನ ಬಗೆಹರಿಸುವುದು ಅಧಿಕಾರಿಗಳಿಗೆ ಸೆಕೆಂಡುಗಳ ಕೆಲಸವಾಗಿದೆ ಎಂದು ಸುಖೇಶ್ ಉಚ್ಚಿಲ್ ಹೇಳಿದರು.
ಆಧುನಿಕ ಹ್ಯೂಮನ್ ರೈಟ್ಸ್ ಕಮಿಟಿ, ಇಂಡಿಯಾದ ಅಧ್ಯಕ್ಷರು ಮತ್ತು ಆರ್ ಟಿಐ ಕಾರ್ಯಕರ್ತರಾದ ದೀಪಕ್ ರಾಜೇಶ್ ಕುವೆಲ್ಲೊ, ಟೀಮ್ ಸೇವ್ ಬಟ್ಟಪ್ಪಾಡಿಯ ಕಾರ್ಯಕರ್ತರಾದ ವಸಂತ್ ಎಸ್ ಉಚ್ಚಿಲ್ ,ಶಬೀರ್ ತಲಪಾಡಿ, ಹ್ಯೂಮನ್ ರೈಟ್ಸ್ ಆಂಡ್ ಅಗೈನ್ಸ್ಟ್ ಪೊಲ್ಯೂಷನ್ ಫಾರಮ್ ಕರ್ನಾಟಕದ ಜಿಲ್ಲಾಧ್ಯಕ್ಷ ಶಬೀರ್ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ಎಂ.ದಿವಾಕರ ರಾವ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Illegal resorts are rising high because of corrupted officers slams Team Batapady secretary Sukesh in Mangalore
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
22-08-25 10:00 pm
HK News Desk
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
22-08-25 05:07 pm
Mangalore Correspondent
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
22-08-25 09:57 pm
HK News Desk
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm