ಬ್ರೇಕಿಂಗ್ ನ್ಯೂಸ್
20-11-24 11:55 am Mangalore Correspondent ಕರಾವಳಿ
ಮಂಗಳೂರು, ನ.20: ತೆಲುಗಿನ ಹಿಟ್ ಚಿತ್ರ ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ರಕ್ತಚಂದನ ಕದ್ದು ಮಾರುವುದು, ಅರಣ್ಯಾಧಿಕಾರಿಗಳನ್ನು ಮತ್ತು ರಕ್ತಚಂದನ ಸಾಮ್ರಾಜ್ಯದ ಡಾನ್ ಗಳನ್ನು ಬಗ್ಗುಬಡಿಯುವ ಚಿತ್ರಣ ಇದೆ. ಈ ಚಿತ್ರದಲ್ಲಿಯೂ ರಕ್ತಚಂದನವನ್ನು ಇಂಥವರಿಗೇ ಕೊಡಬೇಕೆಂದು ಡಾನ್ ಗಳು ಷರತ್ತು ಹಾಕಿದ್ದು ಪುಷ್ಪನನ್ನು ಗೂಂಡಾನನ್ನಾಗಿ ಮಾಡಿತ್ತು. ಅದೇ ರೀತಿಯ ಚಿತ್ರಣ ನಕ್ಸಲ್ ನಾಯಕ ವಿಕ್ರಂ ಗೌಡನಿಗೂ ಹೋಲಿಕೆಯಾಗುತ್ತದೆ.
ಕೇವಲ ನಾಲ್ಕನೇ ಕ್ಲಾಸು ಕಲಿತಿದ್ದ ಕಬ್ಬಿನಾಲೆ ಬಳಿಯ ಕೂಡ್ಲುತೀರ್ಥ ನಿವಾಸಿಯಾಗಿದ್ದ ವಿಕ್ರಂ ಗೌಡ ಸಣ್ಣಂದಿನಲ್ಲಿ ಪರಿಚಯಸ್ಥರೊಂದಿಗೆ ಮುಂಬೈಗೆ ಹೊಟೇಲ್ ಕೆಲಸಕ್ಕೆ ಹೋಗಿದ್ದ. ಅಲ್ಲಿ ಒಂದಷ್ಟು ಕಾಲ ದುಡಿದು ರಟ್ಟೆ ಗಟ್ಟಿಯಾದ ಬಳಿಕ ಊರಿಗೆ ಹಿಂತಿರುಗಿದ್ದ. ಊರಿನಲ್ಲಿ ಕಾಡುತ್ಪತ್ತಿ ಸಂಗ್ರಹಿಸುವುದು, ಕೂಲಿ ಮಾಡುವುದರಲ್ಲಿ ತೊಡಗಿದ್ದ. ಕಾಡಿನಲ್ಲಿ ಸಿಗುತ್ತಿದ್ದ ರಾಮಪತ್ರೆಗೆ ಒಳ್ಳೆ ರೇಟಿತ್ತು. ಆದರೆ ಈ ಉತ್ಪನ್ನವನ್ನು ಕಾಡಿನಿಂದ ಕಷ್ಟಪಟ್ಟು ತಂದರೂ, ಅದನ್ನು ಊರಿನಲ್ಲಿ ಇಂಥದ್ದೇ ವ್ಯಾಪಾರಿಗೆ ಮಾರಬೇಕೆಂದು ಮಲೆಕುಡಿಯರಿಗೆ ತಾಕೀತು ಮಾಡಲಾಗಿತ್ತು.
ಊರ ಧಣಿಕರಿಗೆ ಅರಣ್ಯಾಧಿಕಾರಿಗಳು ಮತ್ತು ಪೊಲೀಸರ ಸಾಥ್ ಇತ್ತು. ಇದಕ್ಕೆ ವಿಕ್ರಂ ಗೌಡ ವಿರೋಧಿಸಿದ್ದು, ಕಾಡಿನಿಂದ ಕಷ್ಟಪಟ್ಟು ತಂದ ರಾಮಪತ್ರೆಯನ್ನು ನಾವ್ಯಾಕೆ ಕಡಿಮೆ ದರಕ್ಕೆ ಇವರಿಗೆ ಕೊಡಬೇಕೆಂದು ಪ್ರಶ್ನೆ ಮಾಡಿದ್ದ. ಅದೇ ಕಾರಣಕ್ಕೆ ರಾಮಪತ್ರೆಯನ್ನು ವಿಕ್ರಂ ಗೌಡ ಊರ ಹೊರಗಿನ ಬೇರೆ ವ್ಯಾಪಾರಿಗಳಿಗೆ ಮಾರಲು ತೊಡಗಿದ್ದ. ಇದೇ ವಿಷಯದಲ್ಲಿ ಜಟಾಪಟಿ ಆಗಿದ್ದು, ವ್ಯಾಪಾರಿಗಳು ಅರಣ್ಯಾಧಿಕಾರಿಗಳನ್ನು ಛೂಬಿಟ್ಟಿದ್ದರು. ಅರಣ್ಯದಿಂದ ರಾಮಪತ್ರೆಯನ್ನು ಕದ್ದು ತಂದು ಮಾರಾಟ ಮಾಡುತ್ತಿದ್ದಾನೆಂದು ವಿಕ್ರಂ ಗೌಡನ ವಿರುದ್ಧ ಕೇಸು ದಾಖಲಿಸಿ, ಹಿಂಸೆ ನೀಡತೊಡಗಿದ್ದರು. ಮನೆಗೆ ಬಂದು ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತಿದ್ದ ವಿಕ್ರಂ ಗೌಡ ಕಾಡಿನಲ್ಲೇ ಕಳೆಯತೊಡಗಿದ್ದ.
ಇದೇ ಸಂದರ್ಭದಲ್ಲಿ ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಚಳವಳಿ ಬೇರೂರುತ್ತಿತ್ತು. 2002ರಲ್ಲಿ ಬಿಜಿ ಕೃಷ್ಣಮೂರ್ತಿ ನೇತೃತ್ವದಲ್ಲಿ ನಕ್ಸಲ್ ಚಳವಳಿ ಅರಣ್ಯಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತಿನ ಯುವಕರನ್ನು ಆಕರ್ಷಿಸಿತ್ತು. ಸರ್ಕಾರದ ವಿರುದ್ಧ ಬಂದೂಕು ಹಿಡಿಯಲು ಪ್ರೇರೇಪಿಸಿತ್ತು. ಇದರಿಂದ ಆಕರ್ಷಿತನಾಗಿದ್ದ ವಿಕ್ರಂ ಗೌಡ ನಕ್ಸಲ್ ಚಳವಳಿಯಲ್ಲಿ ಸೇರಿಹೋಗಿದ್ದ. 2004ರಲ್ಲಿ ಕಬ್ಬಿನಾಲೆಯಲ್ಲೇ ಪೊಲೀಸರು ಸಾಗುತ್ತಿದ್ದ ಬಸ್ಸನ್ನು ಬೆಂಕಿ ಹಚ್ಚಿ ಸ್ಫೋಟಿಸಿದ್ದು ಆತನ ನೇತೃತ್ವದಲ್ಲಾದ ಮೊದಲ ಘಟನೆಯಾಗಿತ್ತು. ಆನಂತರ, ವಿಕ್ರಂ ಗೌಡ ಗ್ರಾಮದಲ್ಲಿ ಕಾಣಸಿಕ್ಕಿರಲಿಲ್ಲ. 2011ರಲ್ಲಿ ಸದಾಶಿವ ಗೌಡ ಯಾನೆ ಸಾಧು ಗೌಡ ಎಂಬ ತಿಂಗಳಮಕ್ಕಿಯ ನಿವಾಸಿಯನ್ನು ಕೈಕಾಲು ಕಟ್ಟಿ ನಕ್ಸಲರು ಹತ್ಯೆ ಮಾಡಿದ್ದರು. ಸಾಧು ಗೌಡ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆ ಎಂದು ನಕ್ಸಲರು ಅಪಹರಿಸಿ ಕೊಲೆ ಮಾಡಿದ್ದರು ಎನ್ನಲಾಗಿತ್ತು. ಈ ಕೃತ್ಯವನ್ನು ವಿಕ್ರಂ ಗೌಡನೇ ಮಾಡಿದ್ದಾನೆಂದು ಹೇಳಲಾಗಿತ್ತು. ಸಾಧು ಗೌಡನ ಶವ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಕಾಡಿನ ಮಧ್ಯೆ ಪತ್ತೆಯಾಗಿತ್ತು. ಇದರಿಂದ ಕಾಡಂಚಿನ ಗ್ರಾಮದಲ್ಲಿ ನಕ್ಸಲರ ಬಗ್ಗೆ ತೀವ್ರ ಭಯ ಆವರಿಸಿತ್ತು.
ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ರಕ್ತಚಂದನ ಮಾರುತ್ತಲೇ ಸಿರಿವಂತನಾಗಿದ್ದನಲ್ಲದೆ, ರಕ್ತಚಂದನ ಸಾಮ್ರಾಜ್ಯವನ್ನು ನಿಯಂತ್ರಿಸುತ್ತಿದ್ದ ಡಾನ್ ಗಳನ್ನು ಮಟ್ಟಹಾಕಿದ್ದ. ಇದಕ್ಕಾಗಿ ಕಾಡಿನಲ್ಲಿ ಅವಿತುಕೊಂಡು ಅರಣ್ಯಾಧಿಕಾರಿಗಳ ವಿರುದ್ಧವೇ ಹೋರಾಟ ಶುರುಹಚ್ಚಿದ್ದ. ವಿಕ್ರಂ ಗೌಡನದ್ದೂ ಅದೇ ಮಾದರಿಯ ಹೋರಾಟವಾಗಿದ್ದು, ಪುಷ್ಪನದ್ದು ಸಿನಿಮಾದ್ದಾದರೆ, ವಿಕ್ರಂನದ್ದು ರಿಯಲ್ ಸ್ಟೋರಿಯಾಗಿತ್ತು ಎನ್ನುವುದು ವಿಶೇಷ.
ತಿಂಗಳಮಕ್ಕಿಯ ನಾರಾಯಣ ಗೌಡರು ಹೇಳುವ ಪ್ರಕಾರ, 2011ರಲ್ಲಿ ಸಾಧು ಗೌಡನ ಕೊಲೆಯ ಬಳಿಕ ನಕ್ಸಲರು ಇಲ್ಲಿ ಕಾಣಿಸಿಕೊಂಡಿಲ್ಲ. ವಿಕ್ರಂ ಗೌಡ ಎಲ್ಲಿದ್ದಾನೆಂದೂ ತಿಳಿದಿರಲಿಲ್ಲ. ಕೆಲವೊಮ್ಮೆ ಮಾಧ್ಯಮದಲ್ಲಿ ಬಂದ ಸುದ್ದಿಯಿಂದಲೇ ನಮಗೆ ವಿಷಯ ತಿಳಿಯುತ್ತಿತ್ತು ಎನ್ನುತ್ತಾರೆ.
Udupi Naxal leader Vikram Gowda was operating just like movie Pushpa, tired of forest officlas harrasment after which he was forced to join the naxal team. Gowda’s killing is a result of heightened search and combing operations by the ANF in Malnad region since August this year, after some Naxal activity was reported there.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
17-03-25 11:02 pm
Udupi Correspondent
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm