ಬ್ರೇಕಿಂಗ್ ನ್ಯೂಸ್
14-11-24 02:48 pm Udupi Correspondent ಕರಾವಳಿ
ಉಡುಪಿ, ನ.14: ಸಕಲೇಶಪುರ ಸುಬ್ರಹ್ಮಣ್ಯ ಘಾಟಿ ಭಾಗದಲ್ಲಿ ರೈಲಿನ ವೇಗ ಹೆಚ್ಚಿಸುವುದು, ಕ್ರಾಸಿಂಗ್ ನಿಲ್ದಾಣವಾಗಿ ಅರೆಬೆಟ್ಟದಲ್ಲಿ ಅಭಿವೃದ್ಧಿ ಪಡಿಸುವುದು ಸೇರಿದಂತೆ ಹಲವು ಸುಧಾರಣೆ ವಿಷಯದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರೈಲ್ವೇ ಸಚಿವರ ಜತೆ ಮಾತುಕತೆ ನಡೆಸಿದ್ದು ಮುಂದಿನ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಸುದೀರ್ಘ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕರಾವಳಿಯ ರೈಲು ಸೇವೆಗಳು ಮತ್ತು ಹೆದ್ದಾರಿ ಸುಧಾರಣೆಗಳ ಕುರಿತು ಕುಂದಾಪುರ ರೈಲು ಸಮಿತಿ ಸಂಸದರಿಗೆ ಮನವಿ ಕೊಟ್ಟು ಚರ್ಚೆ ಮಾಡಿದೆ. ರೈಲು ಮತ್ತು ಹೆದ್ದಾರಿ ಸುಧಾರಣೆ ಕುರಿತು ಹಲವು ಮಾರ್ಗೋಪಾಯಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಈ ಸಂದರ್ಭ ಸಂಸದರು ಸಮಿತಿಯ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದರು.
ಪಂಚಗಂಗಾ ರೈಲು ಸೇರಿದಂತೆ ಹಲವು ವಿಶೇಷ ರೈಲು ಸೇವೆಗಳು ಪಶ್ಚಿಮ ಘಟ್ಟದ ಘಾಟಿ ಭಾಗದಲ್ಲಿ ನಿಧಾನಗತಿಯ ಕಾರಣದಿಂದ ಬೆಂಗಳೂರು ತಲುಪುವಾಗ ವಿಳಂಬವಾಗುವುದು, ಸರಿಯಾದ ಸಮಯಪಟ್ಟಿ ಸಿಗದೆ ಇರುವುದು, ಹೀಗೆ ಹಲವು ಸಮಸ್ಯೆಗಳಿಗೆ ಸಿಲುಕಿವೆ. ಅದರಲ್ಲೂ ಪಂಚಗಂಗಾ ರೈಲು ಕರಾವಳಿಯ ಜೀವನಾಡಿಯಾಗಿದ್ದು, ಈ ರೈಲು ಇನ್ನೂ ಬೇಗನೆ ಬೆಂಗಳೂರು ತಲುಪಿಸಲು ಬೇಡಿಕೆ ಇದೆ. ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಸಚಿವರ ಜತೆ ಚರ್ಚಿಸಲಾಗಿದೆ ಎಂದು ಸಂಸದರು ತಿಳಿಸಿದರು.
ಬ್ರಹ್ಮಾವರ, ಕುಂದಾಪುರ ಸೇರಿದಂತೆ ಹಲವೆಡೆ ಅಪಘಾತ ವಲಯಗಳು ತುಂಬಿರುವ ರಾಷ್ಟ್ರೀಯ ಹೆದ್ದಾರಿಯ ಸಮಗ್ರ ಸುಧಾರಣೆಗೆ ತಂತ್ರಜ್ಞರ ತಂಡವನ್ನು ಕುಂದಾಪುರ, ಬ್ರಹ್ಮಾವರ, ಉಡುಪಿ ಮಧ್ಯೆ ನೇರ ವೀಕ್ಷಣೆ ಮತ್ತು ಪರಿಹಾರೋಪಾಯಗಳ ಕುರಿತು ಪ್ರಸ್ತಾವ ರಚಿಸುವ ಕುರಿತು ನಿರ್ಧರಿಸಲಾಗಿದ್ದು, ಈ ಬಗ್ಗೆ ಕೆಲವೇ ದಿನಗಳಲ್ಲಿ ದಿಲ್ಲಿಗೆ ತೆರಳಲಿರುವುದಾಗಿ ಸಂಸದರು ತಿಳಿಸಿದ್ದಾರೆ.
Railway issue at Sakaleshpur ghat, Railway committee appeals to kota srinivas poojary in Udupi. discussion with the Minister of Railways regarding many improvements including increasing the speed of the train in the Sakaleshpura Subrahmanya Ghati section, developing Arebetta as a crossing station and said that they will hold a long discussion in the next winter session of Parliament.
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
22-08-25 10:00 pm
HK News Desk
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
ಮಹಾ ಸಿಎಂ ದೇವೇಂದ್ರ ಫಡ್ನವೀಸ್ - ಎಂಎನ್ಎಸ್ ಮುಖ್ಯಸ್...
21-08-25 06:09 pm
22-08-25 05:07 pm
Mangalore Correspondent
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
Vhp, Mangalore, Sharan Pumpwell: ಗಣೇಶೋತ್ಸವ, ದ...
21-08-25 09:12 pm
FIR, YouTuber Sameer MD, Doota Arrest: ಸಾವಿರಾ...
21-08-25 03:44 pm
22-08-25 09:57 pm
HK News Desk
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm
Mangalore, Derlakatte, Robbery, Muthoot finan...
20-08-25 08:10 pm