ಬ್ರೇಕಿಂಗ್ ನ್ಯೂಸ್
13-11-24 03:17 pm Mangalore Correspondent ಕರಾವಳಿ
ಉಳ್ಳಾಲ, ನ.13: ನಗರೋತ್ಥಾನ ಯೋಜನೆಯಡಿ ಉಳ್ಳಾಲ ನಗರಸಭೆ ಕಟ್ಟಡದ ಪಕ್ಕದಲ್ಲಿ ಹೊಸ ಗ್ರಂಥಾಲಯ ನಿರ್ಮಾಣಕ್ಕಾಗಿ ಹಳೆಯ ಕಟ್ಟಡ ನೆಲಸಮಗೊಳಿಸಲಾಗಿತ್ತು. ನೆಲಸಮ ಕಾಮಗಾರಿ ನೆಪದಲ್ಲಿ ಪಕ್ಕದ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಶೆಡ್ಡಿನ ಲಕ್ಷಾಂತರ ರೂಪಾಯಿ ಮೌಲ್ಯದ ಸಿಲಿಕಾನ್ ಶೀಟ್ ಟೆಂಟ್ ಗಳನ್ನೆ ಕೆಡವಿ ಅಕ್ರಮವಾಗಿ ಹೊತ್ತೊಯ್ದ ಆರೋಪ ಕೇಳಿಬಂದಿತ್ತು. ಮಂಗಳವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಶೀಟ್ ಕಳ್ಳತನ ಪ್ರಕರಣದ ತನಿಖೆಗೆ ಸದನ ಸಮಿತಿ ರಚಿಸಲು ಆಗ್ರಹಿಸಿದ್ದಾರೆ.
ಹಳೆಯ ಕಟ್ಟಡ ನೆಲಸಮ ಕಾಮಗಾರಿ ನೆಪದಲ್ಲಿ ನಗರಸಭೆ ಪ್ರಾಂಗಣಕ್ಕೆ ಮೂರು ವರ್ಷದ ಹಿಂದಷ್ಟೆ ಆರು ಲಕ್ಷ ವೆಚ್ಚದಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ಗಾಗಿ ಅಳವಡಿಸಿದ್ದ ಸಿಲಿಕಾನ್ ಶೀಟ್ ಮತ್ತು ಕಬ್ಬಿಣದ ಆಂಗ್ಲರ್ ಗಳೇ ಮಾಯವಾಗಿವೆ. ಈ ಬಗ್ಗೆ ಅಧಿಕಾರಿಗಳಲ್ಲಿ ಕೇಳಿದಾಗ, ಯೋಜನೆಯ ಗುತ್ತಿಗೆದಾರರೇ ಕೊಂಡೊಯ್ದಿದ್ದು ಅವರಲ್ಲಿ ಸೊತ್ತುಗಳನ್ನ ವಾಪಸ್ ತರುವಂತೆ ಹೇಳಿರೋದಾಗಿ ಸಬೂಬು ನೀಡಿದ್ದರು. ಸರಕಾರಿ ಆಸ್ತಿಯನ್ನ ತೆರವುಗೊಳಿಸುವಾಗ ಟೆಂಡರು ಕರೆದು, ಸೊತ್ತುಗಳನ್ನ ಮಾರಾಟ ಮಾಡಲು ಹರಾಜು ಪ್ರಕ್ರಿಯೆ ನಡೆಸುವ ನಿಯಮಗಳಿವೆ. ಇಲ್ಲಿ ಅದ್ಯಾವುದೂ ನಡೆಯದೆ ಬೆಲೆ ಬಾಳುವ ಸರಕಾರಿ ಸೊತ್ತುಗಳನ್ನ ಏಕಾಏಕಿ ಕಳಚಿ ಕೊಂಡೊಯ್ಯಲಾಗಿತ್ತು. ಹೆಡ್ ಲೈನ್ ಕರ್ನಾಟಕದಲ್ಲಿ ಇದರ ಬಗ್ಗೆ ವರದಿ ಪ್ರಕಟಿಸಲಾಗಿತ್ತು.
ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಎಸ್ಡಿಪಿಐ ಪಕ್ಷದ ಕೌನ್ಸಿಲರ್ಗಳು ಶೀಟ್ ಕಳ್ಳತನದ ಬಗ್ಗೆ ಧ್ವನಿ ಎತ್ತಿದ್ದಾರೆ. ವಿರೋಧ ಪಕ್ಷದ ನಾಯಕಿ ರೇಷ್ಮಾ ಅವರು ಸಿಲಿಕಾನ್ ಶೀಟ್ ಕಳ್ಳತನದ ಬಗ್ಗೆ ಮಾಧ್ಯಮಗಳಿಗೆ ಬೇಜವಾಬ್ದಾರಿ ಹೇಳಿಕೆ ನೀಡಿದ ನಗರಸಭಾ ಅಧಿಕಾರಿಗಳನ್ನ ತರಾಟೆಗೆತ್ತಿದ್ದಾರೆ. ಸಭಾಧ್ಯಕ್ಷರು, ಪೌರಾಯುಕ್ತರಲ್ಲಿ ಸದನ ಸಮಿತಿ ರಚಿಸಿ ಪ್ರಕರಣದ ತನಿಖೆ ನಡೆಸುವಂತೆ ನಗರ ಸದಸ್ಯರು ಆಗ್ರಹಿಸಿದ್ದಾರೆ. ಪ್ರಕರಣದ ಬಗ್ಗೆ ಮೇಲಧಿಕಾರಿಗಳಲ್ಲಿ ತನಿಖೆಗೆ ತಿಳಿಸಿರುವುದಾಗಿ ಪೌರಾಯುಕ್ತ ಮತ್ತಡಿ ನಗರ ಸದಸ್ಯರಿಗೆ ಪ್ರತಿಕ್ರಿಯಿಸಿದ್ದಾರೆ.
ಕಳ್ಳತನ ಪ್ರಕರಣದ ಹಿಂದೆ ಕೌನ್ಸಿಲರ್ ಕೈವಾಡ?
ಲಕ್ಷಾಂತರ ಬೆಲೆಯ ಸೊತ್ತುಗಳ ಕಳ್ಳತನದ ಹಿಂದೆ ನಗರಸಭೆಯ ಸದ್ಯಸರೊಬ್ಬರ ಕೈವಾಡ ಇರುವ ದೂರುಗಳಿವೆ. ಇಂಥವರ ಸದಸ್ಯತನ ರದ್ದುಗೊಳಿಸಬೇಕು. ನಗರಸಭೆ ಆಯುಕ್ತರ ಅಧ್ಯಕ್ಷತೆಯಲ್ಲೇ ಎಲ್ಲಾ ಪಕ್ಷದ ತಲಾ ಓರ್ವ ಕೌನ್ಸಿಲರ್ಗಳನ್ನ ಒಳಗೊಂಡ ಸದನ ಸಮಿತಿ ರಚಿಸಿ ಕೂಲಂಕುಷ ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತಕ್ಕೂ ಈ ಬಗ್ಗೆ ದೂರು ನೀಡಬೇಕೆಂದು ಎಸ್ಡಿಪಿಐ ನಗರ ಸದಸ್ಯರು ಜಿಲ್ಲಾಧಿಕಾರಿಗೆ ಬರೆದ ಲಿಖಿತ ದೂರನ್ನ ಪೌರಾಯುಕ್ತರಿಗೆ ಸಲ್ಲಿಸಿದರು.
ಸಿವಿಲ್ ಗುತ್ತಿಗೆದಾರನೋರ್ವ ನಗರಸಭೆ ಕಚೇರಿಯ ಕಪಾಟಿನ ಕೀ ತೆಗೆದು ಅಮೂಲ್ಯ ಕಡತವನ್ನ ತೆಗೆದು ಮತ್ತೆ ಅಲ್ಲೇ ಇರಿಸಿದ್ದಾನೆಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕ್ಷೇತ್ರದ ಶಾಸಕರೇ ಪೊಲೀಸ್ ದೂರು ನೀಡಲು ಸೂಚಿಸಿದ್ದಾರೆ. ಆದರೂ ಇಷ್ಟರವರೆಗೆ ಅಧಿಕಾರಿಗಳ ಮೌನವೇಕೆ. ಅಂತಹ ಗುತ್ತಿಗೆದಾರರನ್ನ ಕಚೇರಿ ಒಳಗೆ ಬಿಡುವುದಾದರೂ ಯಾಕೆಂದು ನಗರಸಭೆ ಸದಸ್ಯ ಬಶೀರ್ ಪ್ರಶ್ನಿಸಿದ್ದಾರೆ.
ಕಿರಿಯ ಅಭಿಯಂತರರ ಅಸಡ್ಡೆ ವಿರುದ್ಧ ಆಕ್ರೋಶ
ಉಳ್ಳಾಲಬೈಲಿನ ಕೌನ್ಸಿಲರ್ ನಮಿತಾ ಗಟ್ಟಿ ಮಾತನಾಡಿ ತನ್ನ ವಾರ್ಡಿನ ಕಲ್ಲುರ್ಟಿ ದೈವಸ್ಥಾನದ ಬಳಿಯ ಜನಸಂಚಾರದ ಮೋರಿ ಶಿಥಿಲಗೊಂಡಿದೆ. ನನ್ನ ಸ್ವಂತ ಖರ್ಚಿನಿಂದ 13 ಸಿಮೆಂಟ್ ಸ್ಲ್ಯಾಬ್ ಗಳನ್ನ ಹಾಕಿಸಿದ್ದೇನೆ. ಶಾಶ್ವತ ಕಾಮಗಾರಿಗೆ ನಾಲ್ಕು ವರ್ಷದಿಂದ ಮನವಿ ನೀಡುತ್ತಿದ್ದರೂ ಕಿರಿಯ ಅಭಿಯಂತರರು ಸ್ಪಂದಿಸುತ್ತಿಲ್ಲ. ಮೂರು ತಿಂಗಳ ಹಿಂದಷ್ಟೆ ಮೂರು ಲಕ್ಷದ ಕಾಮಗಾರಿಯ ಟೆಂಡರು ಆಗಿದೆ. ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆಯಿಂದ ಕಾಮಗಾರಿ ಅನುಷ್ಟಾನಗೊಂಡಿಲ್ಲ. ಈಗ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕಾಮಗಾರಿ ನಡೆಸಲು ವಿಳಂಬವೇಕೆಂದು ನಮಿತಾ ಅವರು ಕಿರಿಯ ಅಭಿಯಂತರ ತುಳಸಿಯವರನ್ನ ತರಾಟೆಗೆ ತೆಗೆದರು. ಎಲ್ಲದಕ್ಕೂ ಟೆಂಡರ್ ಆಗಬೇಕನ್ತೀರಾ, ಸಿಲಿಕಾನ್ ಶೀಟ್ ಕೊಂಡೊಯ್ಯಲು ಟೆಂಡರ್ ಕರೆದಿದ್ದೀರಾ ಎಂದು ಪ್ರಶ್ನಿಸಿದರು.
ಉಳ್ಳಾಲ ನಗರಸಭಾ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಪ್ನ ಹರೀಶ್, ಪ್ರಭಾರ ಪೌರಾಯುಕ್ತ ಮತ್ತಡಿ, ನಗರಸಭೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ತೇಜು ಮೂರ್ತಿ ಉಪಸ್ಥಿತರಿದ್ದರು.
Mangalore Ullal town municipal robbery case, case filed to DC and lokayukta. Recently steel sheets were which belongs to ullal municipal were stolen after which the officlas have come to know that it was done by of the members.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
16-03-25 10:43 am
Mangalore Correspondent
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm