ಬ್ರೇಕಿಂಗ್ ನ್ಯೂಸ್
05-11-24 10:14 pm Mangaluru Correspondent ಕರಾವಳಿ
ಉಳ್ಳಾಲ, ನ.5: ಅಕ್ರಮ ದಂಧೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವವರನ್ನ ಹಲ್ಲೆಗೈದು ಕೊಲೆಗೆ ಯತ್ನಿಸುವುದಾದರೆ ನ್ಯಾಯದ ಪರ ಧ್ವನಿ ಎತ್ತಲು ಸಾಧ್ಯವೇ.. ಸೋಮೇಶ್ವರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದ ಕಿಶೋರ್ ಉಚ್ಚಿಲ್ ಅವರ ಮೇಲಿನ ದಾಳಿ ಖಂಡನೀಯ. ಸೋಮೇಶ್ವರ ಕಡಲ ತೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದಲೇ ಕಡಲ್ಕೊರೆತ ಉಲ್ಭಣಗೊಳ್ಳುತ್ತಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿಯೆತ್ತಿ ಹೋರಾಟ ನಡೆಸುವವರ ಮೇಲೆ ಹಲ್ಲೆ ನಡೆಸುವ ಜುಟ್ಟು ಪೂಜಾರಿಯಂತಹ ಪುಡಿ ರೌಡಿಗಳನ್ನ ಪೊಲೀಸ್ ಇಲಾಖೆ ಮಟ್ಟ ಹಾಕಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ದಿನೇಶ್ ಕುಂಪಲ ಆಗ್ರಹಿಸಿದ್ದಾರೆ.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಸೋಮೇಶ್ವರ ಕಡಲ ತೀರದಲ್ಲಿ ನಡೆಯುತ್ತಿರುವ ಮರಳು ಮಾಫಿಯಾ ವಿರುದ್ಧ ಕಿಶೋರ್ ಎಂ. ಉಚ್ಚಿಲ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ರಿವೇಂಜ್ ತೆಗೆಯಲು ಮರಳು ದಂಧೆಕೋರ ಸುನಿಲ್ ಪೂಜಾರಿ ಯಾನೆ ಜುಟ್ಟು ಪೂಜಾರಿ ಕಿಶೋರ್ ಅವರಿಗೆ ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವುದು ಖಂಡನೀಯ. ಅದೃಷ್ಟವಶಾತ್ ಕಿಶೋರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಬಂಧಪಟ್ಟ ಪೊಲೀಸ್ ಇಲಾಖೆ ಹಲ್ಲೆಗೊಳಗಾದ ಕಿಶೋರ್ ಅವರ ಜೊತೆ ನಿಲ್ಲಬೇಕು. ಸೋಮೇಶ್ವರ ಕಡಲ ತೀರದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸೋಮೇಶ್ವರ ಕಡಲ ತೀರದಲ್ಲಿ ನಿರಂತರ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ಪರಿಸರಕ್ಕೆ ಪೆಟ್ಟು ಬಿದ್ದಿದೆ. ನಿತ್ಯವೂ ಮರಳು ಕಳ್ಳತನ ನಡೆಸುವುದರಿಂದ ಕಡಲ್ಕೊರೆತ ತೀವ್ರವಾಗಿ ಅನೇಕ ಮನೆಗಳು ಕೊಚ್ಚಿ ಹೋಗಿವೆ. ಕಡಲ್ಕೊರೆತ ಉಲ್ಭಣಗೊಂಡಾಗ ತೀರ ಪ್ರದೇಶದ ಜನರು ಸುಮ್ನೆ ಬೊಬ್ಬೆ ಹೊಡೆದು ಸರಕಾರ, ಜನಪ್ರತಿನಿಧಿಗಳ ಕಾಲೆಳೆಯುತ್ತಾರೆ. ಆದರೆ ಸಮುದ್ರ ತೀರದಲ್ಲಿ ನಿರಂತರ ಅಕ್ರಮವಾಗಿ ಮರಳನ್ನ ಕಳವುಗೈಯುತ್ತಿರುವ ಜುಟ್ಟು ಪೂಜಾರಿಯಂತವರ ವಿರುದ್ಧ ಯಾರೂ ಧ್ವನಿ ಎತ್ತಿ ಪ್ರತಿಭಟನೆ ನಡೆಸುತ್ತಿಲ್ಲ. ಇನ್ನಾದರೂ ಸೋಮೇಶ್ವರ ಕಡಲ ತೀರದ ಎಲ್ಲಾ ವರ್ಗದ ಜನರು ಒಟ್ಟಾಗಿ ಕಿಶೋರ್ ಪರವಾಗಿ ನಿಂತು ಮರಳು ಮಾಫಿಯಾ ವಿರುದ್ಧ ಪ್ರತಿಭಟನೆ ನಡೆಸಬೇಕಿದೆ. ಕಿಶೋರ್ ಅವರಿಗೆ ಹಲ್ಲೆ ನಡೆಸಿದ ಜುಟ್ಟು ಪೂಜಾರಿ ಓರ್ವ ಪುಡಿ ರೌಡಿ. ಈ ಹಿಂದೆಯೂ ಸೋಮೇಶ್ವರದಲ್ಲಿ ನಡೆಯುತ್ತಿದ್ದ ಮರಳು ಮಾಫಿಯಾದಲ್ಲಿ ಆತ ಕೈ ಜೋಡಿಸಿದ್ದ.
ಬೋವಿ ಸಮಾಜದ ಹಿರಿಯ ಮುಖಂಡ ಕಿಶೋರ್ ಅವರು ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿದ್ದಾರೆ. ಓರ್ವ ಧಾರ್ಮಿಕ ಮುಖಂಡನ ಮೇಲೆ ನಡೆದಿರುವ ಹಲ್ಲೆಯನ್ನ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಆರೋಪಿ ಜುಟ್ಟು ಪೂಜಾರಿ ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ದಿನೇಶ್ ಕುಂಪಲ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.
ಸೋಮೇಶ್ವರ ಸೋಮನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೀಪಕ್ ಪಿಲಾರು, ಸುಂದರ ಚೆಂಬುಗುಡ್ಡೆ, ಮೊಗವೀರ ಸಮಾಜದ ಮುಖಂಡರಾದ ಪ್ರೇಮನಾಥ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಕಾರ್ಯದರ್ಶಿ ರಕ್ಷಿತ್ ಪೂಜಾರಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Attempted murder of an informant regarding illegal sand mining in Mangalore: Congress spokesperson Dinesh Kumpla demands action against the rowdies who are living without any fear of the police.An informant on illegal sand mining, and member of the Someshwar temple management committee, was attacked with an iron rod late Monday night near the Someshwar municipality office. The assailant was reportedly an accused in the illegal sand mining case.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm