ಬ್ರೇಕಿಂಗ್ ನ್ಯೂಸ್
01-11-24 03:36 pm Mangalore Correspondent ಕರಾವಳಿ
ಉಳ್ಳಾಲ, ನ.1: ಅಸಂಖ್ಯಾತ ಪಾರ್ಥಿವ ಶರೀರಗಳನ್ನು ವಿಧಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಿರುವ ತೊಕ್ಕೊಟ್ಟುವಿನ ವಿಶಿಷ್ಟ ಸಮಾಜಸೇವಕ ಬಾಬು ಪಿಲಾರ್ ಅವರಿಗೆ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುತಿಸಿ ಕರ್ನಾಟಕ ಸಂಭ್ರಮ 50ರ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಕರ್ನಾಟಕ ಸಂಭ್ರಮ-50 ಅಭಿಯಾನದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 50 ಜನ ಮಹಿಳಾ ಸಾಧಕರು ಮತ್ತು 50 ಜನ ಪುರುಷ ಸಾಧಕರುಗಳಿಗೆ 2024ನೇ ಸಾಲಿನಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಾಬು ಪಿಲಾರ್ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಪ್ರಶಸ್ತಿಯ ಬಗ್ಗೆ ಅ.30 ರಂದು ಆದೇಶ ಹೊರಡಿಸಲಾಗಿದ್ದರೂ ಅಧಿಕಾರಿಗಳ ಎಡವಟ್ಟಿನಿಂದ ಬಾಬು ಪಿಲಾರ್ ಅವರಿಗೆ ಈ ಬಗ್ಗೆ ಸಂದೇಶ ರವಾಣೆಯಾಗಿರಲಿಲ್ಲ. ನಿನ್ನೆಯಷ್ಟೆ ಬಿಡುಗಡೆಯಾದ ರಾಜ್ಯೋತ್ಸವದ ದಕ್ಷಿಣ ಕನ್ನಡ ಜಿಲ್ಲಾ ಪ್ರಶಸ್ತಿಯಲ್ಲೂ ಬಾಬು ಪಿಲಾರು ಅವರ ಹೆಸರಿತ್ತು. ಗುರುವಾರ ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿ ಬಾಬು ಪಿಲಾರ್ ಅವರಿಗೆ ಕರೆ ಮಾಡಿ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ. ಬಾಬು ಅವರು ರಾಜ್ಯ ಪ್ರಶಸ್ತಿ ಪಡೆದಿರುವ ಹಿನ್ನಲೆಯಲ್ಲಿ ಜಿಲ್ಲಾ ಪ್ರಶಸ್ತಿಯನ್ನ ಹಿಂಪಡೆಯಲಾಗಿದೆ.
ಸಾಮಾನ್ಯ ಚಿತ್ರಕಲೆಗಾರರಾಗಿರುವ ಬಾಬು ಪಿಲಾರ್ ಅವರು ಕಳೆದ ನಲ್ವತ್ತು ವರುಷಗಳಿಂದ ತನ್ನನ್ನು ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1982ರಲ್ಲಿ ಉಳ್ಳಾಲ ಬೈಲಿನ ಬೀಡಿ ಕಟ್ಟುವ ಕಡು ಬಡವರೋರ್ವರು ಸಾವನ್ನಪ್ಪಿದ್ದ ಸಂದರ್ಭದಲ್ಲಿ ಬಾಬು ಪಿಲಾರ್ ಅವರೇ ಮುಂದೆ ನಿಂತು ಪಾರ್ಥಿವ ಶರೀರದ ಅಂತಿಮ ವಿಧಿ, ವಿಧಾನಗಳನ್ನು ನೆರವೇರಿಸಿ ಉಚಿತವಾಗಿ ಅಂತ್ಯ ಸಂಸ್ಕಾರ ನಡೆಸಿದ್ದರು. ಆ ಬಳಿಕ ಊರವರು ಪಾರ್ಥಿವ ಶರೀರಗಳ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲು ಬಾಬು ಪಿಲಾರ್ ಅವರನ್ನೇ ಕರೆಯುತ್ತಿದ್ದರು. ಬಾಬು ಪಿಲಾರ್ ಅವರು ಉಳ್ಳಾಲ ಪ್ರದೇಶ ಮಾತ್ರವಲ್ಲದೆ ಕಾಸರಗೋಡು, ಕುಂಬ್ಳೆ, ಸಜಿಪ ಗ್ರಾಮದ ಗುಡ್ಡ ಪ್ರದೇಶಗಳಿಗೂ ತೆರಳಿ ಅಂದಿನ ಕಾಲದಲ್ಲಿ ಕಟ್ಟಿಗೆಯ ಚಿತೆ ನಿರ್ಮಿಸಿ ಪಾರ್ಥಿವ ಶರೀರಗಳ ಅಂತ್ಯ ಸಂಸ್ಕಾರ ನಡೆಸಿದ್ದರು.
ಡೈರಿಯಲ್ಲಿ ಬರೆದಿರುವ ಪ್ರಕಾರ ಇದುವರೆಗೆ ಸುಮಾರು 4500 ಕ್ಕೂ ಹೆಚ್ಚಿನ ಅಂತ್ಯ ಸಂಸ್ಕಾರಗಳಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಬಾಬು ಪಿಲಾರ್ ಅವರು ಪಾಲ್ಗೊಂಡಿದ್ದಾರಂತೆ. 1977 ರಲ್ಲಿ ಸರಕಾರದ ವೆಲ್ಪೇರ್ ಸ್ಕೀಮ್ ನಿಂದ ವಿದ್ಯಾರ್ಥಿಗಳಿಗೆ ಬೀಡಿ ಸ್ಕಾರ್ಲರ್ ಶಿಫ್ ಆರಂಭವಾಗಿದ್ದರೂ ಅದರ ಬಗ್ಗೆ ಜನಸಾಮಾನ್ಯರಿಗೆ ತಿಳಿದಿರಲಿಲ್ಲ. ಸ್ಕಾಲರ್ ಶಿಪ್ ಅರ್ಜಿ ಫಾರಮನ್ನು ಭರ್ತಿ ಮಾಡಲು ಯಾರಿಗೂ ತಿಳಿದಿರಲಿಲ್ಲ. ಜಿಲ್ಲೆಯಲ್ಲಿರುವ ನಾಲ್ಕು ಲಕ್ಷ ಬೀಡಿ ಕಾರ್ಮಿಕರ ಮಕ್ಕಳಿಗೆ ಈ ಸೌಲಭ್ಯ ಸಿಗಬೇಕೆಂದು ಬಾಬು ಪಿಲಾರ್ ಅವರು ತಮ್ಮ ಸ್ನೇಹಿತರ ಜತೆಗೂಡಿ ಬಿಡುವಿಲ್ಲದೆ ಅರ್ಜಿ ಫಾರಂ ಭರ್ತಿ ಮಾಡುತ್ತಿದ್ದು ಪ್ರತೀ ವರುಷ ಸುಮಾರು 6,500 ಅರ್ಜಿಗಳನ್ನ ಉಚಿತವಾಗಿ ಬರೆಯುತ್ತಿದ್ದರು.
ಬಾಬು ಪಿಲಾರ್ ಅವರು ಪಾಲ್ಗೊಳ್ಳುತ್ತಿದ್ದ ಅಂತ್ಯ ಸಂಸ್ಕಾರಗಳಲ್ಲಿ ಪತಿ ಮರಣ ಹೊಂದಿದರೆ ಎಲ್ಲರ ಸಮ್ಮುಖದಲ್ಲೇ ಪತ್ನಿಯ ಮುತ್ತೈದೆತನದ ಹೆಗ್ಗುರತುಗಳಾದ ಕರಿಮಣಿ ಸರ ಎಳೆದು, ಕುಂಕುಮ ಅಳಿಸಿ, ಬಳೆಗಳನ್ನ ಪುಡಿಗೈದು ವಿಧವೆಯರನ್ನ ಹೀನವಾಗಿ ಹಿಂಸಿಸಲಾಗುತ್ತಿತ್ತು. ಬಾಬು ಪಿಲಾರ್ ಅವರು ಆ ಹೀನ ಪದ್ಧತಿಯನ್ನ ವಿರೋಧಿಸಿ ಇದು ಸಂಸ್ಕೃತಿಯಲ್ಲ, ಪಾಳೆಗಾರಿಕೆ ಎಂದು ಜನಸಾಮಾನ್ಯರಿಗೆ ಮನವರಿಕೆ ಮಾಡಿಸಿದ್ದರು. ಬಾಬು ಅವರು ಇದರ ಬಗ್ಗೆ ನಿರಂತರ ಜನಜಾಗೃತಿಗೊಳಿಸಿದ ಪರಿಣಾಮ ಕ್ರಮೇಣ ವಿಧವೆಯರ ಕುಂಕುಮ,ಬಳೆಗಳನ್ನ ಒಡೆಯುವ ಅನಿಷ್ಟ ಪದ್ಧತಿಗಳಿಗೆ ಬ್ರೇಕ್ ಬಿದ್ದಿತ್ತು.
ಬಾಬು ಪಿಲಾರ್ ಅವರ ವಿಶಿಷ್ಟ ಸಮಾಜ ಸೇವೆಯ ಬಗ್ಗೆ 2016 ರ ಇಸವಿಯಲ್ಲೇ ಮಾಧ್ಯಮಗಳಲ್ಲಿ ವಿಶೇಷ ವರದಿಗಳು ಪ್ರಕಟವಾಗಿದ್ದವು. ಅನೇಕ ಸಂಘ ಸಂಸ್ಥೆಗಳು ಅವರನ್ನ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದೆ. ಇತ್ತೀಚಿಗೆ ಉಳ್ಳಾಲ ಪ್ರೆಸ್ ಕ್ಲಬ್ ವತಿಯಿಂದಲೂ ಬಾಬು ಪಿಲಾರ್ ಅವರನ್ನ " ಗೌರವ ಅತಿಥಿ" ಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಲಾಗಿತ್ತು.
Mangalore Babu Pilar has been nominated for Karnataka sambrama award on 50th suvaran sambrama in Bangalore. For the past four decades, Babu Pilar, affectionately known as Babu Anna, has been a beacon of selfless service in Ullal and its surrounding areas. Since 1982, he voluntarily cremated an astonishing 4,500 bodies, providing solace and support to grieving families, without expecting anything in return.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm