ಬ್ರೇಕಿಂಗ್ ನ್ಯೂಸ್
28-10-24 10:51 pm Giridhar Shetty, Headline Karnataka, Mangalore ಕರಾವಳಿ
ಮಂಗಳೂರು, ಅ.28: ಪ್ರತಿ ವರ್ಷ ನವೆಂಬರ್ 1ರಂದು ನೀಡಲಾಗುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಾಗಿ ಈ ಬಾರಿಯೂ ಪೈಪೋಟಿ ಏರ್ಪಟ್ಟಿದೆ. 150ಕ್ಕೂ ಹೆಚ್ಚು ಅರ್ಜಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಬಂದಿದೆ ಎನ್ನುವ ಮಾಹಿತಿ ಇದೆ. ಇನ್ನೆರಡು ದಿನದಲ್ಲಿ ಈ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಆದರೆ ಈ ಬಾರಿ ಹಿಂದಿನಂತೆ ರಾಜ್ಯೋತ್ಸವ ಪ್ರಶಸ್ತಿ ಎಂಬ ಹೆಸರು ಇರುವುದಿಲ್ಲ. ಕೇವಲ ಜಿಲ್ಲಾ ಪ್ರಶಸ್ತಿ ಎಂಬ ಹೆಸರಿನಲ್ಲಿ ಪುರಸ್ಕಾರಗಳನ್ನು ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ‘ಹೆಡ್ ಲೈನ್ ಕರ್ನಾಟಕ’ಕ್ಕೆ ಮಾಹಿತಿ ನೀಡಿದ್ದಾರೆ.
ಒಂದು ತಿಂಗಳ ಹಿಂದೆ ಅ.3ರಂದು ಜಿಲ್ಲಾ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ ಎಂದು ಜಿಲ್ಲಾಡಳಿತದಿಂದ ಪತ್ರಿಕಾ ಪ್ರಕಟಣೆ ನೀಡಲಾಗಿತ್ತು. ವಿವಿಧ ಕ್ಷೇತ್ರಗಳ ಸಾಧಕರು ತಮ್ಮ ಸ್ವವಿವರಗಳನ್ನು ಬರೆದು ಜಿಲ್ಲಾಧಿಕಾರಿಗೆ ಕಳಿಸುವಂತೆ ಅಪರ ಜಿಲ್ಲಾಧಿಕಾರಿ ಹೆಸರಲ್ಲೇ ಪ್ರಕಟಣೆ ಹೊರಡಿಸಲಾಗಿತ್ತು. ಆದರೆ, ಈ ಪ್ರಶಸ್ತಿಗೆ ಮಾನದಂಡ ಏನು ಅನ್ನುವುದನ್ನು ಅದರಲ್ಲಿ ನೀಡಿರಲಿಲ್ಲ. ಈ ನಡುವೆ, ತುಳು ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಅವರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಿಶ್ಚಿತ ಮಾನದಂಡ ರಚಿಸಬೇಕು ಮತ್ತು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ಸಮಿತಿ ರಚಿಸಬೇಕು ಎಂದು ಕೇಳಿಕೊಂಡಿದ್ದರು. ಅ.23ರಂದು ಈ ಪತ್ರವನ್ನು ಬರೆದಿದ್ದರೂ, ಜಿಲ್ಲಾಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಾರನಾಥ ಗಟ್ಟಿ ತಿಳಿಸಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಎಂಬುದಿಲ್ಲ
ರಾಜ್ಯ ಸರಕಾರದಿಂದ ರಾಜ್ಯ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದ್ದು, ಇದನ್ನು ಹೊರತುಪಡಿಸಿ ಆಯಾ ಜಿಲ್ಲೆಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡುವಂತಿಲ್ಲ. ಕೆಲವು ಜಿಲ್ಲೆಗಳಲ್ಲಿ ಆ ರೀತಿಯ ಪ್ರಶಸ್ತಿಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಅವುಗಳ ಹೆಸರನ್ನು ಬದಲಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸುತ್ತೋಲೆ ಬಂದಿದೆ. ಇದನ್ನು ಕನ್ನಡ ಸಂಸ್ಕೃತಿ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಹೀಗಾಗಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಬದಲು ಕೇವಲ ಜಿಲ್ಲಾ ಪ್ರಶಸ್ತಿ ಎಂಬ ಹೆಸರಿನಲ್ಲಿಯೇ ಪುರಸ್ಕಾರ ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪ್ರಶಸ್ತಿ ಆಯ್ಕೆಗಾಗಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಆಂತರಿಕ ಕಮಿಟಿ ಮಾಡಿದ್ದೇವೆ. ಇದರಲ್ಲಿ ಕ್ರೀಡಾ ಇಲಾಖೆ ಉಪ ನಿರ್ದೇಶಕರು, ಪೊಲೀಸ್ ಕಮಿಷನರ್, ಎಸ್ಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಿಡಿಪಿಐ ಸೇರಿದಂತೆ ಎಲ್ಲ ಇಲಾಖೆಯ ಪ್ರಮುಖರನ್ನು ಸೇರಿಸಲಾಗಿದೆ ಎಂದಿದ್ದಾರೆ.
ಕಳೆದ 25 ವರ್ಷಗಳಿಂದಲೂ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡುತ್ತಾ ಬರಲಾಗಿದೆ. ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರದೀಪ್ ಕಲ್ಕೂರ 2-3 ಅವಧಿಗೆ ಜಿಲ್ಲಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅವರದ್ದೇ ನೇತೃತ್ವದಲ್ಲಿ ಅಂತಿಮಗೊಳಿಸಿ ಜಿಲ್ಲಾಡಳಿತಕ್ಕೆ ನೀಡುತ್ತಿದ್ದ ಪದ್ಧತಿ ಇತ್ತು. ಕೊನೆಕ್ಷಣದಲ್ಲಿ ಈ ಪಟ್ಟಿಗೆ ಒಂದಷ್ಟು ಹೆಸರುಗಳು ಹೆಚ್ಚುವರಿಯಾಗಿ ಸೇರುತ್ತಿದ್ದುದೂ ನಡೆದಿತ್ತು. 2014-15ರಲ್ಲಿ ಎಬಿ ಇಬ್ರಾಹಿಂ ಜಿಲ್ಲಾಧಿಕಾರಿಯಾಗಿದ್ದಾಗ ಇದಕ್ಕೊಂದು ಪ್ರತ್ಯೇಕ ಕಮಿಟಿ ರಚಿಸಿದ್ದರು. ಆದರೆ, ಆನಂತರದಲ್ಲಿ ತಜ್ಞರನ್ನು ಒಳಗೊಂಡ ಕಮಿಟಿ ರಚಿಸುವುದಕ್ಕೆ ಯಾರೂ ಮುಂದಾಗಿಲ್ಲ.
2-3 ಪ್ರಶಸ್ತಿ ಪಡೆದವರೂ ಇದ್ದಾರೆ
ಪ್ರತಿ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಾಗಿ ನೂರಾರು ಅರ್ಜಿಗಳು ಜಿಲ್ಲಾಡಳಿತಕ್ಕೆ ಬರುತ್ತವೆ. ಅದರಲ್ಲಿ ಹಿಂದೆ 2-3 ಬಾರಿ ಜಿಲ್ಲಾ ಪ್ರಶಸ್ತಿಗಳನ್ನು ಪಡೆದವರೂ ಇರುತ್ತಾರೆ. ಕಳೆದ ಕೆಲವು ವರ್ಷಗಳ ಪಟ್ಟಿ ನೋಡಿದರೆ, ಎರಡೆರಡು ಬಾರಿ ಪ್ರಶಸ್ತಿ ಪಡೆದವರು ಹಲವರಿದ್ದಾರೆ. ಪ್ರಶಸ್ತಿ ಹೆಸರಲ್ಲಿ ಶಾಲು, ಪ್ರಶಸ್ತಿ ಪತ್ರ ಬಿಟ್ಟರೆ ಬೇರೇನೂ ಇಲ್ಲದಿದ್ದರೂ, ಕೆಲವರಿಗೆ ಇದೊಂದು ದೊಡ್ಡ ಗೌರವ ಎಂದುಕೊಂಡಿದ್ದಾರೆ. 2023ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾರೀ ಪೈಪೋಟಿ ನಡೆದು ಅಂತಿಮ ಕ್ಷಣದ ವರೆಗೂ ಬದಲಾವಣೆ, ಹೆಸರು ಸೇರ್ಪಡೆ ಆಗಿತ್ತು. ಉಳ್ಳಾಲ ಕ್ಷೇತ್ರದವರಿಗೆ ಮಾತ್ರ ಆದ್ಯತೆ ಸಿಕ್ಕಿದೆ ಎಂಬ ಟೀಕೆಯೂ ಬಂದಿತ್ತು. ಪುತ್ತೂರಿನ ಶಾಸಕರ ಶಿಫಾರಸುಗಳಿಗೆ ಆದ್ಯತೆ ಸಿಕ್ಕಿಲ್ಲವೆಂದು ಸಿಟ್ಟುಗೊಂಡಿದ್ದ ಅಲ್ಲಿನ ಶಾಸಕರು ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಫೋನಾಯಿಸಿ ಸುದ್ದಿಗೋಷ್ಠಿ ಕರೆದು ಹೇಳುತ್ತೇನೆಂದು ಬೆದರಿಸಿದ್ದೂ ಆಗಿತ್ತು. ಮಾಜಿ ಶಾಸಕರಾದ ರಮಾನಾಥ ರೈ, ಜೆಆರ್ ಲೋಬೊ, ಐವಾನ್ ಡಿಸೋಜ ಸೇರಿದಂತೆ ಮಾಜಿ ಶಾಸಕರು ಕಳಿಸಿದ್ದ ಪಟ್ಟಿಯಲ್ಲಿ ಒಬ್ಬೊಬ್ಬರು ಹೆಸರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿತ್ತು.
ಜಿಲ್ಲಾ ಮಟ್ಟದ ರಾಜ್ಯೋತ್ಸವ ದಿನಾಚರಣೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆಯುವುದರಿಂದ ಪ್ರಶಸ್ತಿ ಆಯ್ಕೆ ಸಮಿತಿಗೂ ಅವರೇ ಅಧ್ಯಕ್ಷರು. ಆದರೆ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ‘ಅಸಲಿ ಉಸ್ತುವಾರಿ’ ಯುಟಿ ಖಾದರ್ ಅಣತಿಯಂತೆ ಅಂತಿಮಗೊಳಿಸಲಾಗುತ್ತದೆ ಎಂದೇ ಹೇಳಲಾಗುತ್ತದೆ. ಸಂಘ- ಸಂಸ್ಥೆಗಳಿಗೂ ಜಿಲ್ಲಾ ಪ್ರಶಸ್ತಿಗಳನ್ನು ನೀಡುವ ಪದ್ಧತಿ ಇದೆ. ಆದರೆ ಈ ಪ್ರಶಸ್ತಿ ಆಯ್ಕೆ ಮಾಡುವುದಕ್ಕೆ ನಿಗದಿತ ಮಾನದಂಡ ಇಲ್ಲ. ಸಂಘ ಸ್ಥಾಪನೆಯಾಗಿ ಇಂತಿಷ್ಟು ವರ್ಷ ಆಗಿರಬೇಕು, ಸಮಾಜಸೇವೆಯಲ್ಲಿ ತೊಡಗಿರಬೇಕು ಎನ್ನುವ ಬಗ್ಗೆ ನಿಯಮ ಇಲ್ಲ. ಆಯಾ ಸಂದರ್ಭದಲ್ಲಿ ಯಾವ ಪಕ್ಷದ ಅಧಿಕಾರವಿರುತ್ತದೋ, ಅದೇ ಪ್ರಕಾರದಲ್ಲಿ ಆದ್ಯತೆಗಳು ಹೆಚ್ಚಿರುವುದು ನಡೆದುಬಂದಿದೆ. ಇದೇ ಕಾರಣಕ್ಕೆ, ಇದಕ್ಕೊಂದು ಸೂಕ್ತ ಮಾನದಂಡ ರಚಿಸಬೇಕು, ಸಾಧಕರನ್ನು ಆಯ್ಕೆ ಮಾಡಲು ವಿವಿಧ ಅಕಾಡೆಮಿಗಳ ಅಧ್ಯಕ್ಷರು, ತಜ್ಞರನ್ನು ಒಳಗೊಂಡ ಸಮಿತಿ ರಚಿಸಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.
Competition for Mangalore District Rajyotsava Award, More than 150 applications, no selection committee. Magalore ADC Santosh Kumar has exclusively spoken to Headline Karnataka on this matter
04-05-25 02:27 pm
Bangalore Correspondent
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
Karkala Mla Sunil Kumar, Parameshwar: ಆ್ಯಂಟಿ...
03-05-25 09:38 pm
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm