ಬ್ರೇಕಿಂಗ್ ನ್ಯೂಸ್
25-10-24 10:53 pm Mangalore Correspondent ಕರಾವಳಿ
ಮಂಗಳೂರು, ಅ.25: ತನ್ನ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಅಶ್ಲೀಲ ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿರುವ ವಿಚಾರದಲ್ಲಿ ನೊಂದು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಇಡ್ಯಾ ಪರಿಸರದ ಹಿಂದು ಯುವತಿ ತನ್ನ ಫೇಸ್ಬುಕ್ ಹ್ಯಾಕ್ ಮಾಡಿ, ಅಣ್ಣ ಕಿಶನ್ ಮತ್ತು ಅವರ ಸ್ನೇಹಿತ ಹರ್ಷಿತ್ ಎಂಬವರಿಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ ಎಂಬ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.22ರಂದು ದೂರು ನೀಡಿದ್ದು ಶಾರೀಕ್ ಎಂಬ ಯುವಕನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಇದರಂತೆ, ಭಾರತೀಯ ದಂಡ ಸಂಹಿತೆಯ 78, 352, 351 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66C, 66D ಮತ್ತು 67A & B ಸೆಕ್ಷನ್ ಅಡಿ ಪೊಲೀಸರು ಕೇಸು ದಾಖಲಿಸಿದ್ದರು. ಆರೋಪಿ ಶಾರೀಕ್ ನನ್ನು ವಿಚಾರಣೆಗೆ ಕರೆದಿದ್ದು, ಆತನ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳನ್ನು ಪರಿಶೀಲಿಸಿದರೂ, ಹೆಚ್ಚಿನ ಮಾಹಿತಿ ಲಭಿಸದ ಕಾರಣ, ಬಿಟ್ಟು ಕಳುಹಿಸಿದ್ದರು. ಅಲ್ಲದೆ, ಸಂಬಂಧಿತ ಸಾಮಾಜಿಕ ಮಾಧ್ಯಮ ಸೇವಾಪೂರಕರಿಂದ ಹೆಚ್ಚಿನ ಮಾಹಿತಿಯನ್ನು ಕೇಳಿದ್ದರು.
ಆದರೆ ಅ.24ರಂದು ಯುವತಿ ಬಗ್ಗೆ ಮತ್ತೆ ಬೆದರಿಕೆ ಸಂದೇಶ ಬಂದಿದ್ದು, ನೀನು ದೂರು ಕೊಟ್ಟರೂ ನಾನು ಹೊರಗೆ ಬರುತ್ತೇನೆ, ನಿನ್ನ ಯಾವ ದೂರು ಕೂಡ ನಮ್ಮ ಎದುರು ನಡೆಯುವುದಿಲ್ಲ. ನಿನ್ನ ತಂಗಿಯನ್ನು ಬಿಡುವುದಿಲ್ಲ. ಇವತ್ತು ಜಸ್ಟ್ ಮಿಸ್ ಆಯ್ತು. ಬಿಡೋದಿಲ್ಲ. ಹೆಣವೂ ಸಿಗದಂತೆ ಮಾಡುತ್ತೇವೆ ಎಂದು ಆಕೆಯ ಅಣ್ಣನಿಗೆ ನೇರ ವಾರ್ನಿಂಗ್ ಸಂದೇಶ ಬಂದಿತ್ತು. ಇದನ್ನು ಮಾಡುತ್ತಿರುವುದು ಶಾರೀಕನೇ ಆಗಿದ್ದು ಎಂಬ ಭೀತಿಯಲ್ಲಿ ಯುವತಿ ಅ.25ರ ಶುಕ್ರವಾರ ನಸುಕಿನಲ್ಲಿ ಹತ್ತು ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದಕ್ಕೂ ಮುನ್ನ ತನ್ನ ಮೇಲಿನ ಕಿರುಕುಳ ಮತ್ತು ಇದಕ್ಕೆಲ್ಲ ಶಾರೀಕ್ ಮತ್ತು ಆತನ ತಾಯಿ ನೂರ್ ಜಹಾನ್ ಕಾರಣ ಎಂದು ಪತ್ರ ಬರೆದಿಟ್ಟಿದ್ದಾಳೆ. ಯುವತಿಯನ್ನು ತಕ್ಷಣ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯ ಸ್ಥಿರವಾಗಿದೆ.
ಘಟನೆಯ ಬಳಿಕ ಯುವತಿ ನೀಡಿದ ದೂರಿನ ಆಧಾರದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ 78(1)(i), 351(1 & 2) ಮತ್ತು 3(5) ಸೆಕ್ಷನ್ ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Mangalore Surathkal rape threat on facebook messanger, accused arrested by police. According to family accounts, the woman had been receiving explicit and threatening messages through social media from Shariq, who allegedly intimidated her
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm