ಬ್ರೇಕಿಂಗ್ ನ್ಯೂಸ್
23-10-24 03:15 pm Mangalore Correspondent ಕರಾವಳಿ
ಪುತ್ತೂರು, ಅ.23: ವಿಶ್ವ ಹಿಂದು ಪರಿಷತ್ತಿನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಭಾಗವಹಿಸಿದ್ದನ್ನು ವಿರೋಧಿಸಿ ವಿಎಚ್ ಪಿ ಕಾರ್ಯಕರ್ತರು ಗಲಾಟೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಈ ವೇಳೆ, ಪುತ್ತಿಲ ಪರಿವಾರದ ಕಾರ್ಯಕರ್ತರು ಮತ್ತು ವಿಎಚ್ ಪಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಅರುಣ್ ಪುತ್ತಿಲ ಮತ್ತು ಬೆಂಬಲಿಗರು ಕಾರ್ಯಕ್ರಮಕ್ಕೆ ಬರುತ್ತಿದ್ದಾಗಲೇ ಅಲ್ಲಿ ಮೊದಲೇ ಸೇರಿದ್ದ ಕೆಲವು ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಕಾರಿನಿಂದ ಇಳಿಯುತ್ತಲೇ ಕೆಲವು ಕಾರ್ಯಕರ್ತರು ತಡೆಯೊಡ್ಡಿದ್ದು, ವಿರೋಧಿ ಘೋಷಣೆ ಕೂಗಿದ್ದಾರೆ. ಈ ಹಿಂದೆ ಪುತ್ತಿಲ ಪರಿವಾರದ ವಿರುದ್ಧ ತಲವಾರು ತೋರಿಸಿದ್ದ ದಿನೇಶ್ ಪಂಜಿಗ, ಶ್ರೀಧರ್ ತೆಂಕಿಲ, ಜಯಂತ ಬಲ್ನಾಡು, ಜಿತೇಶ್ ಬಲ್ನಾಡು, ಸಂತೋಷ್ ರೈ ಮತ್ತಿತರರು ಸೇರಿದ್ದು, ಪುತ್ತಿಲ ಆಗಮನಕ್ಕೆ ತಡೆಯೊಡ್ದಿದ್ದಾರೆ. ಈ ವೇಳೆ, ಪುತ್ತೂರು ನಗರ ಬಿಜೆಪಿ ಕಾರ್ಯದರ್ಶಿ ಅನಿಲ್ ತೆಂಕಿಲ, ಉಮೇಶ್ ಕೋಡಿಬೈಲು ಅರುಣ್ ಪುತ್ತಿಲ ನೆರವಿಗೆ ಬಂದಿದ್ದು, ಪುತ್ತಿಲರನ್ನು ತಡೆಯಲು ಯತ್ನಿಸಿದ ಕಾರ್ಯಕರ್ತರ ಜೊತೆಗೆ ವಾಗ್ವಾದ ನಡೆಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯ ಸ್ಪರ್ಧಿಸಿದ್ದ ಅರುಣ್ ಪುತ್ತಿಲ ವಿರುದ್ಧ ಅಂದಿನಿಂದ ಕತ್ತಿ ಮಸೆಯುತ್ತಲೇ ಇದ್ದ ಕಾರ್ಯಕರ್ತರು ಈಗ, ಪುತ್ತಿಲ ವಿಎಚ್ ಪಿ ಕಾರ್ಯಕ್ರಮಕ್ಕೆ ಬರಬಾರದು ಎಂದು ತಡೆಯೊಡ್ದಿದ್ದರು. ಅಷ್ಟರಲ್ಲಿ ವಿಶ್ವ ಹಿಂದು ಪರಿಷತ್ತಿನ ಹಿರಿಯ ಮುಖಂಡ ಪೂವಪ್ಪ ಗೌಡರು ಸ್ಥಳಕ್ಕೆ ಬಂದು ಅರುಣ್ ಪುತ್ತಿಲರನ್ನು ಕಾರ್ಯಕ್ರಮಕ್ಕೆ ಕರೆದೊಯ್ದಿದ್ದಾರೆ. ಅಲ್ಲಿಗೆ ನಿಂತಿದ್ದ ಒಂದು ಹಂತದ ವಿರೋಧ ಅರುಣ್ ಪುತ್ತಿಲ ಕಾರ್ಯಕ್ರಮದ ಕೊನೆಯಲ್ಲಿ ಹಿಂತಿರುಗುತ್ತಾರೆ ಎನ್ನುವಾಗ ಮತ್ತೆ ವ್ಯಕ್ತವಾಗಿತ್ತು. ತುಳುವಿನಲ್ಲಿ ಪೋಯಾ, ಪೋಯಾ (ಹೋಗೆಲೋ) ಎಂದು ಹೇಳಿ ಅಣಕಿಸಿದ್ದು ಇದರಿಂದ ಕ್ರುದ್ಧರಾದ ಪುತ್ತಿಲ ಜೊತೆಗಿದ್ದ ಕಾರ್ಯಕರ್ತರು ಪ್ರತಿದಾಳಿಗೆ ಮುಂದಾಗಿದ್ದಾರೆ. ಈ ಹೊತ್ತಿನಲ್ಲಿ ಪುತ್ತಿಲ ಪರಿವಾರದ ಸಾಕಷ್ಟು ಕಾರ್ಯಕರ್ತರು ಸೇರಿದ್ದರು. ಪೊಲೀಸರ ಎದುರಲ್ಲೇ ತಳ್ಳಾಟ, ಹೊಡೆದಾಟ ನಡೆದಿದ್ದು, ಆನಂತರ ಅರುಣ್ ಪುತ್ತಿಲ ತನ್ನ ಕಾರಿನಲ್ಲಿ ಹಿಂತಿರುಗಿದ್ದಾರೆ. ಈ ಬಗ್ಗೆ ಪೊಲೀಸ್ ಕೇಸು ದಾಖಲಾಗಿಲ್ಲ.
ಪುತ್ತೂರಿನ ಡಿಸಿಸಿ ಬ್ಯಾಂಕ್ ಶಾಖೆಯ ಎದುರಲ್ಲಿ ವಿಎಚ್ ಪಿ ಜಿಲ್ಲಾ ಕಚೇರಿಗೆ ಭೂಮಿಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ವಿಎಚ್ ಪಿ ಕೇಂದ್ರೀಯ ಮಂಡಳಿ ಪ್ರಮುಖರಾದ ಗೋಪಾಲ್ ಜೀ ಮತ್ತಿತರರು ಉಪಸ್ಥಿತರಿದ್ದರು. ಇದರ ನಡುವೆ, ಸ್ಥಳೀಯ ಪುಂಡರು ವೈಯಕ್ತಿಕ ದ್ವೇಷದಿಂದ ಗಲಾಟೆ ಮಾಡಿಕೊಂಡಿದ್ದಾರೆ. ವಿಎಚ್ ಪಿ ಮುಖಂಡರಾದ ಶರಣ್ ಪಂಪ್ವೆಲ್, ಮುರಳಿಕೃಷ್ಣ ಹಸಂತಡ್ಕ, ಪುನೀತ್ ಅತ್ತಾವರ ಮತ್ತಿತರರಿದ್ದರು. ಹಿಂದುಗಳ ಕಾರ್ಯಕ್ರಮಕ್ಕೆ ನಾವು ಯಾಕೆ ಬರಬಾರದು, ನಾವು ಹಿಂದುಗಳಲ್ವಾ ಎಂದು ಪುತ್ತಿಲ ಪರಿವಾರದ ಕಾರ್ಯಕರ್ತರು ಕೇಳಿದರೆ, ವಿರೋಧಿ ಪಾಳಯ ವಿಧಾನಸಭೆ ಚುನಾವಣೆಯಲ್ಲಿ ಸಂಘ ಪರಿವಾರವನ್ನು ದೂಷಿಸಿದವರು ಈಗ ಯಾಕೆ ನಮ್ಮ ಜೊತೆಗೆ ಬರುತ್ತಿದ್ದಾರೆ ಎಂದು ಕೇಳಿದ್ದಾರೆ.
ವಿಧಾನಸಭೆ ಚುನಾವಣೆ ವೇಳೆ ಪುತ್ತಿಲ ಪರಿವಾರ ಎನ್ನುವ ಪ್ರತ್ಯೇಕ ಸಂಘಟನೆ ಕಟ್ಟಿಕೊಂಡು ಆರೆಸ್ಸೆಸ್ ಮತ್ತು ಸಂಘ ಪರಿವಾರಕ್ಕೆ ತೊಡೆ ತಟ್ಟಿದ್ದ ಅರುಣ್ ಪುತ್ತಿಲ ಮತ್ತು ಅವರ ಬೆಂಬಲಿಗರು ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿ ಸೇರಿದ್ದಾರೆ. ಲೋಕಸಭೆ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಅವರನ್ನು ಬದಲಾಯಿಸಿದ ಬೆನ್ನಲ್ಲೇ ಪುತ್ತಿಲ ಪರಿವಾರ ಬಿಜೆಪಿ ಸೇರಿದ್ದು, ಸ್ಥಳೀಯವಾಗಿ ನಳಿನ್ ಕುಮಾರ್ ಮತ್ತು ಬೆಂಬಲಿಗರನ್ನು ಉರಿಸುವಂತೆ ಮಾಡಿದೆ. ಅದೇ ಕಿಚ್ಚು ಈಗಲೂ ಮುಂದುವರಿದಿದ್ದು, ಅರುಣ್ ಪುತ್ತಿಲ ಮತ್ತು ಜೊತೆಗಿನ ಪ್ರಮುಖರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರೂ ಸಂಘ ಪರಿವಾರದ ಕೆಲವು ಕಾರ್ಯಕರ್ತರು ಕತ್ತಿ ಮಸೆಯುತ್ತಲೇ ಇದ್ದಾರೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಅರುಣ್ ಪುತ್ತಿಲರಿಗೆ ಅವಮಾನಿಸುವ ಉದ್ದೇಶದಿಂದ ಈ ರೀತಿ ಘೆರಾವ್ ಹಾಕುವ ಯತ್ನ ಮಾಡಿದ್ದಾರೆ ಎನ್ನಲಾಗುತ್ತಿದೆ.
ವಿಶೇಷ ಅಂದ್ರೆ, ವಿಎಚ್ ಪಿ ಕಾರ್ಯಕ್ರಮಕ್ಕೆ ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಆಗಮಿಸಿದ್ದು, ಸಭೆಯಲ್ಲಿ ಜೊತೆಯಾಗಿಯೇ ಕುಳಿತುಕೊಂಡಿದ್ದರು. ಬೇರೆ ಕಾರ್ಯಕ್ರಮಗಳಿಗೆ ಬೆಂಬಲಿಗರ ಜೊತೆಗೆ ಬರುತ್ತಿದ್ದ ಅಶೋಕ್ ರೈ, ಇಲ್ಲಿಗೆ ತನ್ನ ಕಾರಿನಲ್ಲಿ ಒಬ್ಬಂಟಿಯಾಗಿಯೇ ಬಂದಿದ್ದು, ಒಂದಷ್ಟು ಹೊತ್ತು ಕುಳಿತು ಸದ್ದಿಲ್ಲದೆ ಹಿಂದಕ್ಕೆ ಹೋಗಿದ್ದಾರೆ.
Mangalore VHP leaders at puttur gherao Arun puthila, fight erupts between members of party. Arun puthila who came to the Vishwa Hindu Parishad boomi Pooja was gheraoed by VHP leaders creating fighta between each other.
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 03:04 pm
Mangalore Correspondent
Mervin Mendonca Accident, Udupi, Mangalore: ರ...
23-08-25 01:29 pm
ಹಿಂದುಗಳ ಹಬ್ಬ, ಆಚರಣೆಗೆ ತೊಂದರೆ ಇಲ್ಲ, ಬಿಜೆಪಿ ಶಾಸ...
22-08-25 05:07 pm
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
23-08-25 11:11 am
Mangaluru Correspondent
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm