ಬ್ರೇಕಿಂಗ್ ನ್ಯೂಸ್
21-10-24 09:49 pm ಗಿರಿಧರ್ ಶೆಟ್ಟಿ, ಮಂಗಳೂರು ಕರಾವಳಿ
ಬಂಟ್ವಾಳ, ಅ.21: ಈ ಬಾರಿ ಅಕ್ಟೋಬರ್ ಕಳೆಯುತ್ತ ಬಂದರೂ, ಕರಾವಳಿ, ಮಲೆನಾಡಿನಲ್ಲಿ ಆಗಿಂದಾಗ್ಗೆ ಮಳೆರಾಯ ಪ್ರತಾಪ ತೋರುತ್ತಿದ್ದಾನೆ. ಪ್ರತಿದಿನವೂ ಸೂರ್ಯೋದಯಕ್ಕೆ ಬೆಳಕು ಹರಿಯುವ ಬದಲು ಕಾರ್ಮೋಡ ಕರಿಕಟ್ಟುತ್ತದೆ. ಭತ್ತ ಕೊಯ್ಲಿಗೆ ಬಂದವರಿಗೆ ಇನ್ನಿಲ್ಲದ ಕೈಗೆ ಬಂದ ತುತ್ತು ಬಾಯಿಗಿಲ್ಲ ಅನ್ನುವ ಸ್ಥಿತಿ. ರಾಜ್ಯದ ರಾಜಧಾನಿಯಿಂದ ಹಿಡಿದು ಮಲೆನಾಡು, ಕರಾವಳಿಯಲ್ಲಿ ಇದೇ ಪರಿಸ್ಥಿತಿ. ಮಂಗಳೂರು- ಬೆಂಗಳೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿಯಂತೂ ಜನರ ಪಾಲಿಗೆ ನರಕ ದರ್ಶನ ಮಾಡಿಸುತ್ತಿದೆ.
ಬಿ.ಸಿ.ರೋಡ್ - ಅಡ್ಡಹೊಳೆ ವರೆಗಿನ ಕಾಮಗಾರಿ ನಿರಂತರ ಮಳೆಯಿಂದಾಗಿ ಕುಂಟುತ್ತ ಸಾಗಿದೆ. ಬಿಸಿಲು ಇಣುಕಿದರೆ ಕೆಸರು ಧೂಳಿನ ಕಣಗಳಾಗಿ ವಾಹನ ಸವಾರರನ್ನು ಹಿಂಡಿ ಹಿಪ್ಪೆ ಮಾಡಿದರೆ, ಹತ್ತು ನಿಮಿಷ ಮಳೆಯಾದರೂ ಕೆಸರು ಮಣ್ಣು ಪ್ರಯಾಣಕ್ಕೆ ತೀವ್ರ ತೊಂದರೆ ಮಾಡುತ್ತಿವೆ. ತೂಕಡಿಸುವವನಿಗೆ ಹಾಸಿಗೆ ಹಾಕಿಕೊಟ್ಟ ಹಾಗೆ, ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿ ತೀವ್ರ ನಿಧಾನ ಗತಿಯಲ್ಲಿ ಸಾಗುತ್ತಿದೆ. ಅತ್ತ ಪುಂಜಾಲಕಟ್ಟೆ- ಚಾರ್ಮಾಡಿ ಸ್ಥಿತಿಯೂ ಬೇರೆಯಾಗಿಲ್ಲ. ಇಲ್ಲಿನ ಕಾಮಗಾರಿಯನ್ನು ಮಂಗಳೂರಿನ ಮುಗ್ರೋಡಿ ಸಂಸ್ಥೆಗೆ ವಹಿಸಿದ್ದರೂ, ಕಾಮಗಾರಿ ವೇಗ ಪಡೆದಿಲ್ಲ. ಅಲ್ಲಲ್ಲಿ ಕೆಲಸ ಅರ್ಧಕ್ಕೆ ನಿಂತಿರುವುದು, ರಸ್ತೆಗಿಂತ ಎತ್ತರದಲ್ಲಿ ಮಾಡಿಟ್ಟ ಕಾಂಕ್ರೀಟ್ ಚರಂಡಿಗಳು ನೋಡುಗರನ್ನು ಅಣಕಿಸುತ್ತಿವೆ.
ಸದ್ಯಕ್ಕೆ ಬಿ.ಸಿ.ರೋಡ್ ನಲ್ಲಿ ನೇತ್ರಾವತಿ ಸೇತುವೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದರೆ, ಪಾಣೆಮಂಗಳೂರು ಅಂಡರ್ ಪಾಸ್ ನಲ್ಲಿ ಕಾಮಗಾರಿ ಮಧ್ಯೆಯೇ ವಾಹನಗಳನ್ನು ಒಂದು ಕಡೆಯಿಂದ ಬಿಡಲಾಗುತ್ತಿದೆ. ಮೆಲ್ಕಾರ್ ಅಂಡರ್ ಪಾಸ್ ಕೆಲಸ ಇನ್ನೂ ಪೂರ್ತಿಯಾಗಿಲ್ಲ. ಕಲ್ಲಡ್ಕದ ಫ್ಲೈಓವರ್ ಕಾಮಗಾರಿ ಭರದಿಂದ ಸಾಗುತ್ತಿದ್ದರೂ, ಮೇಲೆ ಕೆಲಸ ಕೆಳಗಿನಿಂದ ಸಂಚಾರ ಆಗಿದ್ದರಿಂದ ವಾಹನ ಸವಾರರ ಮೇಲೆ ಸಿಮೆಂಟ್ ಹುಡಿ, ಕಲ್ಲಿನ ಪುಡಿಗಳು ಬಿದ್ದಿರುವ ದೂರುಗಳಿವೆ. ಅನಗತ್ಯ ಎನಿಸಿದರೂ, 2.1 ಕಿಮೀ ಉದ್ದಕ್ಕೆ ಫ್ಲೈಓವರ್ ಮಾಡುತ್ತಿದ್ದು, ಪೂರ್ಣಗೊಂಡಾಗ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಅತಿ ಉದ್ದದ ಫ್ಲೈಓವರ್ ಎನ್ನುವ ಹೆಸರೂ ಇದಕ್ಕೆ ತಗುಲಿಕೊಳ್ಳಲಿದೆ. ಮಾಣಿ ಅಂಡರ್ ಪಾಸ್ ಕೂಡ ಕೆಲಸ ಪೂರ್ತಿಯಾಗಿಲ್ಲ. ಗುಡ್ಡ ಇರುವಲ್ಲಿ ರಸ್ತೆ ವಿಸ್ತರಣೆ, ಮಣ್ಣು ತುಂಬಿಸಿ ರಸ್ತೆ ಸರಾಗವಾಗಿಸುವ ಕೆಲಸ ಹಲವೆಡೆ ಇನ್ನೂ ವೇಗ ಪಡೆದುಕೊಂಡಿಲ್ಲ.
ಕಲ್ಲಡ್ಕ ತಪ್ಪಿಸೋದು ಹೇಗೆ ಮಾರ್ರೆ?
ಸದ್ಯಕ್ಕೆ ಇಲ್ಲಿನ ಹೆದ್ದಾರಿ ಅವಸ್ಥೆಯಿಂದಾಗಿ ಕಲ್ಲಡ್ಕವನ್ನು ತಪ್ಪಿಸಿ ಹೋಗುವುದು ಹೇಗೆಂಬುದೇ ವಾಹನ ಚಾಲಕನ ಸವಾಲು. ಹೀಗಾಗಿ ಹೊಸಬರು ಪರ್ಯಾಯ ಮಾರ್ಗ ಏನಿದೆ ಅಂತ ಗೂಗಲ್ ಮ್ಯಾಪ್ ಹುಡುಕುತ್ತಾರೆ. ಕೆಲವೊಮ್ಮೆ ಬೆಂಗಳೂರು ಕಡೆಯಿಂದ ಬರುವವರು ಎಲ್ಲೆಲ್ಲಿಂದ ಸಾಗಿ ಸಿಕ್ಕಿಬೀಳುವ ಸ್ಥಿತಿಯೂ ಉಂಟಾಗಿದೆ. ಬಿ.ಸಿ.ರೋಡ್ ನಿಂದ ಕಲ್ಲಡ್ಕಕ್ಕೆ ಹೋಗದೆ, ದಾಸಕೋಡಿ ವರೆಗೆ ಸಾಗಲು ಪಾಣೆಮಂಗಳೂರು ಜಂಕ್ಷನ್ನಲ್ಲಿ ಎಡಕ್ಕೆ ತಿರುಗಿ ನರಿಕೊಂಬು, ಶಂಭೂರು ಮಾರ್ಗವಾಗಿ ಸೇರಲು ಅವಕಾಶವಿದೆ. ಆದರೆ ರಸ್ತೆ ಕಿರಿದಾದ ಕಾರಣ ಸಣ್ಣ ವಾಹನಗಳಿಗಷ್ಟೇ ಹೋಗಲು ಸಾಧ್ಯ. ಕೆಲ ವಾಹನಗಳು ಇಲ್ಲಿಂದ ಹೋಗಿ ಪೇಚಿಗೆ ಸಿಲುಕಿದ್ದೂ ಇದೆ. ಬಿ.ಸಿ.ರೋಡ್ ನಿಂದ ಉಪ್ಪಿನಂಗಡಿ ತೆರಳುವವರು ನೇರವಾಗಿ ಬಿ.ಸಿ.ರೋಡ್, ನಾವೂರು, ಸರಪಾಡಿ, ಅಜಿಲಮೊಗರು ಮೂಲಕ ಉಪ್ಪಿನಂಗಡಿಗೆ ಸಾಗುತ್ತಾರೆ. ಒಳಗಿನ ದಾರಿಯಾದರೂ, ಕೆಸರಿನ ಜಂಜಾಟ ಇಲ್ಲದೆ ಸಾಗಬಹುದಾಗಿದೆ.
ಯಾವಾಗ ಪೂರ್ತಿಯಾಗತ್ತೆ ಕಾಮಗಾರಿ?
ಹೆದ್ದಾರಿ ಕಾಮಗಾರಿ ಯಾವಾಗ ಪೂರ್ತಿಯಾಗುತ್ತೆ ಅನ್ನೋದೇ ಯಕ್ಷಪ್ರಶ್ನೆ. ಮಾರ್ಚ್ 2025ರ ಕೊನೆಯೊಳಗೆ ಕಾಮಗಾರಿ ಮುಕ್ತಗೊಳ್ಳುತ್ತದೆ ಎಂಬ ಮಾತನ್ನು ವರ್ಷದ ಹಿಂದೆಯೇ ಅಧಿಕಾರಿಗಳು ಹೇಳುತ್ತ ಬಂದಿದ್ದರು. ಬಿ.ಸಿ.ರೋಡ್ ನಿಂದ ಉಪ್ಪಿನಂಗಡಿ ಪೆರಿಯಶಾಂತಿ ವರೆಗೆ 49 ಕಿ.ಮೀ, ಅಲ್ಲಿಂದ ಅಡ್ಡಹೊಳೆಗೆ 15 ಕಿ.ಮೀ ಕಾಮಗಾರಿ ಅಷ್ಟು ಹೊತ್ತಿಗೆ ಮುಗಿಯುತ್ತದಾ ಅನ್ನುವುದು ಪ್ರಶ್ನೆ. ಸದ್ಯ ಉಪ್ಪಿನಂಗಡಿ ಭಾಗದಲ್ಲಿ ಬಹುತೇಕ ಕಾಮಗಾರಿ ಆಗಿದ್ದರೂ, ಕಲ್ಲಡ್ಕ – ಬಿಸಿ ರೋಡ್ ಭಾಗದಲ್ಲೇ ಅರೆಬರೆ ಕೆಲಸ ಉಳಿದುಕೊಂಡಿದೆ.
ಮತ್ತೆ ರಾಜಕೀಯ ನಾಯಕರೇ ಟ್ರೋಲ್
ಹಿಂದಿನ ಮಳೆಗಾಲ ಮುಗಿದು ಬೇಸಗೆ ಬಂದಾಗ ಸಂಸದ ನಳಿನ್ ಕುಮಾರ್ ಹೆಸರಲ್ಲಿ ಭಾರೀ ಟ್ರೋಲ್ ಮಾಡಲಾಗಿತ್ತು. ಈಗ ಸಂಸದರು ಬದಲಾಗಿದ್ದು, ಹೊಸತಾಗಿ ಬಂದಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಪಾಲಿಗೆ ಹೆದ್ದಾರಿ ಕಾಮಗಾರಿ ದೊಡ್ಡ ಟಾಸ್ಕ್. ಸಂಸದರು ಬದಲಾದರೂ ಕಾಮಗಾರಿ ಶೈಲಿ ಬದಲಾಗದಿರುವುದು ಜಾಲತಾಣದಲ್ಲಿ ರಾಜಕೀಯ ನಾಯಕರು ಆಹಾರ ಆಗುತ್ತಿದ್ದಾರೆ. ದಿನವೂ ಮಂಗಳೂರು- ಬೆಂಗಳೂರು ಸಂಚರಿಸುವ ಪ್ರಯಾಣಿಕರು, ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಅತ್ತ ಶಿರಾಡಿಯಲ್ಲಿ ಹೆದ್ದಾರಿ ಅಧ್ವಾನವಾಗಿದ್ದರೆ, ಉಪ್ಪಿನಂಗಡಿಯಿಂದ ಕಲ್ಲಡ್ಕ ದಾಟುವುದೇ ದೊಡ್ಡ ಸವಾಲು ಅನ್ನುವ ಸ್ಥಿತಿಯಾಗಿದೆ.
Heavy rain in Mangalore, public suffer by pathetic roads of Mangalore kalladka. Most of the commuters are trying for alternative road to avoid such dirty roads. Buses auto and two wheelers especially are facing huge difficulty
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm