Arun Ullal, Mangalore, Shrikanth Shetty: ಅರುಣ್ ಉಳ್ಳಾಲ್ ಹಿಂದು ಶಿಕ್ಷಣ ಸಂಸ್ಥೆಗಳನ್ನೇ ಆಯ್ದುಕೊಳ್ಳಿ ಎಂದಿದ್ದರಲ್ಲಿ ತಪ್ಪೇನಿದೆ? ಕಮ್ಯುನಿಸ್ಟ್ ಮುಖವಾಡ ಹೊತ್ತವರು ಕ್ರಿಶ್ಚಿಯನ್ ಮನಿ ಪವರ್, ಜಿಹಾದಿಗಳ ಮ್ಯಾನ್ ಪವರ್ ಬಳಸಿ ಹಿಂದುಗಳ ಶಕ್ತಿ ಕುಂದಿಸುವ ಯತ್ನದಲ್ಲಿದ್ದಾರೆ! 

09-10-24 10:22 pm       Mangalore Correspondent   ಕರಾವಳಿ

ಉಪನ್ಯಾಸಕ ಅರುಣ್ ಉಳ್ಳಾಲ್ ಅವರು ಹಿಂದುಗಳ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಣ ಪಡೆಯಬೇಕು, ಹಿಂದು ದೇವಸ್ಥಾನ, ಇನ್ನಿತರ ಸಭಾಂಗಣಗಳನ್ನೇ ಬಳಸಬೇಕು, ಹಿಂದು ಸಂಸ್ಕೃತಿಯನ್ನೇ ಅಳವಡಿಸಿಕೊಳ್ಳಬೇಕು ಎಂದು ಹೇಳಿರುವುದು ಯಾವ ಕೋನದಲ್ಲಿ ಅಪರಾಧವಾಗುತ್ತದೆ ಎಂದು ಪೊಲೀಸ್ ಕಮಿಷನರ್ ಹೇಳಬೇಕು.

ಮಂಗಳೂರು, ಅ.9: ಉಪನ್ಯಾಸಕ ಅರುಣ್ ಉಳ್ಳಾಲ್ ಅವರು ಹಿಂದುಗಳ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಣ ಪಡೆಯಬೇಕು, ಹಿಂದು ದೇವಸ್ಥಾನ, ಇನ್ನಿತರ ಸಭಾಂಗಣಗಳನ್ನೇ ಬಳಸಬೇಕು, ಹಿಂದು ಸಂಸ್ಕೃತಿಯನ್ನೇ ಅಳವಡಿಸಿಕೊಳ್ಳಬೇಕು ಎಂದು ಹೇಳಿರುವುದು ಯಾವ ಕೋನದಲ್ಲಿ ಅಪರಾಧವಾಗುತ್ತದೆ ಎಂದು ಪೊಲೀಸ್ ಕಮಿಷನರ್ ಹೇಳಬೇಕು. ಪೊಲೀಸರು ತಾಕತ್ತಿದ್ದರೆ ಬಾಂಗ್ಲಾ ರೀತಿಯಲ್ಲಿ ರಾಜ್ಯಪಾಲರನ್ನು ಓಡಿಸುತ್ತೇವೆಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಐವಾನ್ ಡಿಸೋಜ ವಿರುದ್ಧ ಸುಮೊಟೋ ಕೇಸು ದಾಖಲಿಸಲಿ ಎಂದು ಹಿಂದು ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗೋಷ್ಟಿ ನಡೆಸಿದ ಅವರು, ಅರುಣ್ ಉಳ್ಳಾಲ್ ಅವರು ವಾರಕ್ಕೊಮ್ಮೆ ಮಕ್ಕಳಿಗೆ ಹಿಂದು ಸಂಸ್ಕೃತಿ ಹೇಳಿಕೊಡುವ ಕೆಲಸ ಮಾಡುತ್ತಿದ್ದಾರೆ. ಆ ಕಾರಣಕ್ಕೆ ಕ್ರಿಶ್ಚಿಯನ್, ಕಮ್ಯುನಿಸ್ಟ್ ಶಕ್ತಿಗಳು ಟಾರ್ಗೆಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಅಪರಾಧ ಹಿನ್ನೆಲೆ ಇಲ್ಲದೆ, ಒಬ್ಬ ಪಿಎಚ್ ಡಿ ಮಾಡಿರುವ ಕವಿ, ಸೃಜನಶೀಲ ವ್ಯಕ್ತಿಯನ್ನು ಪೊಲೀಸರು ಆರೋಪಿ ಮಾಡಿದ್ದಾರೆ. ಇದಕ್ಕೆ ಸೋಕಾಲ್ಡ್ ಕಮ್ಯುನಿಸ್ಟ್ ಧೋರಣೆಯ ವ್ಯಕ್ತಿಗಳು, ಕ್ರಿಶ್ಚಿಯನ್ ಮಾನಸಿಕತೆ ಕಾರಣ. ಜಾತ್ಯತೀತ ವ್ಯವಸ್ಥೆಯನ್ನು ಹಿಂದುಗಳ ಮೇಲೆ ಹೇರಲು ಹೊರಟಿರುವವರು, ಆಗ್ನೆಸ್ ಕಾಲೇಜಿನಲ್ಲಿ ತಮ್ಮದೇ ಸಮುದಾಯದವರಿದ್ದಾರೆಂದು ಅರುಣ್ ಉಳ್ಳಾಲ್ ಅವರನ್ನು ಹುದ್ದೆಯಿಂದ ನಿರಾಕರಣೆ ಮಾಡಿದ್ದರು. ಆ ಕಾರಣಕ್ಕೆ ಆರು ತಿಂಗಳ ಹಿಂದೆಯೇ ಅರುಣ್ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ್ದರು. ಇವರು ಹೇಳಿದ ಹಾಗೆ, ಈಗ ಅವರನ್ನು ತೆಗೆದುಹಾಕಿದ್ದಲ್ಲ.

ಕರಾವಳಿಯಲ್ಲಿ ಹಿಂದು ಸಂಘಟನೆಯ ಬಲ ಮುರಿಯುವುದಕ್ಕಾಗಿ ಕಮ್ಯುನಿಸ್ಟ್ ಐಡಿಯಾಲಜಿ, ಕ್ರಿಶ್ಚಿಯನ್ನರ ಮನಿ ಪವರ್ ಮತ್ತು ಇಸ್ಲಾಮಿಕ್ ಜಿಹಾದಿಗಳ ಮ್ಯಾನ್ ಪವರ್ ಬಳಸಿಕೊಂಡು ತಮ್ಮನ್ನು ತಾವು ಕಮ್ಯುನಿಸ್ಟ್ ಎಂದು ಹೇಳಿಕೊಳ್ಳುವವರು ಕೆಲಸ ಮಾಡುತ್ತಿದ್ದಾರೆ. ವಾರಕ್ಕೊಮ್ಮೆ ಇಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ಇದೊಂದು ವ್ಯವಸ್ಥಿತ ಷಡ್ಯಂತ್ರ ಎನ್ನುವುದು ನಮ್ಮ ಅರಿವಿಗೆ ಬಂದಿದೆ. ಹಿಂದುಗಳನ್ನು, ಹಿಂದು ಸಂಘಟನೆಗಳನ್ನು ಮಾತ್ರ ಟಾರ್ಗೆಟ್ ಮಾಡಿರುವುದು ಇವರ ಅಜೆಂಡಾವನ್ನು ತೋರಿಸುತ್ತದೆ. ಇದಕ್ಕೆ ಪ್ರತಿಯಾಗಿ, ನಾವು ಕೂಡ ಹಿಂದುಗಳನ್ನು ಜನಜಾಗೃತಿ ಮಾಡುವ ಕೆಲಸ ಮಾಡುತ್ತೇವೆ ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು. ಸುದ್ದಿಗೋಷ್ಟಿಯಲ್ಲಿ ನರಸಿಂಹ ಮಾಣಿ, ಪ್ರವೀಣ್ ಬಂಟ್ವಾಳ ಮತ್ತಿತರರು ಇದ್ದರು.

Shrikanth Shetty slams mangalore police commissioner over booking case against Arun Ullal. Shrikanth Shetty slams mangalore police commissioner over booking case against Arun Ullal.