ಬ್ರೇಕಿಂಗ್ ನ್ಯೂಸ್
04-10-24 07:44 pm Mangalore Correspondent ಕರಾವಳಿ
ಮಂಗಳೂರು, ಅ.4: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವ ಅಂಗವಾಗಿ ಕ್ಷೇತ್ರದ ವತಿಯಿಂದ ಜಿಯೂಸ್ ಫಿಟ್ನೆಸ್ ಕೇಂದ್ರ, ಖೇಲೋ ಇಂಡಿಯಾ ಹಾಗೂ ಡೆಕತ್ಲಾನ್ ಸಹಭಾಗಿತ್ವದಲ್ಲಿ ಅ.6ರಂದು ದಸರಾ ಹಾಫ್ ಮ್ಯಾರಥಾನ್ ನಡೆಯಲಿದೆ ಎಂದು ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, `ವನ್ ಸಿಟಿ ವನ್ ಸ್ಪಿರಿಟ್' ಧ್ಯೇಯದೊಂದಿಗೆ `ಎಲ್ಲಿ ಒಗ್ಗಟ್ಟಿದೆಯೋ ಅಲ್ಲಿ ಬಲವಿದೆ' ಎಂಬ ವಾಕ್ಯದೊಂದಿಗೆ ಈ ಸ್ಪರ್ಧೆ ನಡೆಯಲಿದೆ. 21 ಕಿ.ಮೀ., 10 ಕಿ.ಮೀ. ಹಾಗೂ 5 ಕಿ.ಮೀ.ಗಳ ಮೂರು ವಿಭಾಗಗಳಲ್ಲಿ ಹ್ಯಾಫ್ ಮಾರಥಾನ್ ಆಯೋಜಿಸಲಾಗಿದೆ ಎಂದರು.
ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯಲಿರುವ ಹಾಫ್ ಮ್ಯಾರಥಾನ್ನಲ್ಲಿ ಪ್ರಥಮ ವಿಜೇತರಿಗೆ 25 ಸಾವಿರ ರೂ. ನಗದು ಬಹುಮಾನ, ದ್ವಿತೀಯ ಬಹುಮಾನ 15 ಸಾವಿರ ರೂ. ಆಗಿರುತ್ತದೆ. 21 ಕಿ.ಮೀ. ಮ್ಯಾರಥಾನ್ ಬೆಳಗ್ಗೆ 5 ಗಂಟೆಗೆ, 10 ಕಿ.ಮೀ. ಮ್ಯಾರಥಾನ್ 5.30ಕ್ಕೆ ಹಾಗೂ 5 ಕಿ.ಮೀ. ನಡಿಗೆ 6.30ಕ್ಕೆ ಕುದ್ರೋಳಿ ಕ್ಷೇತ್ರದಿಂದ ಆರಂಭಗೊಳ್ಳಲಿದೆ. ಹಾಫ್ ಮ್ಯಾರಥಾನ್ ಕ್ಷೇತ್ರದಿಂದ ಹೊರಟು ನಾರಾಯಣ ಗುರು ಸರ್ಕಲ್ ಆಗಿ, ಚಿಲಿಂಬಿ, ಪೈ ಸೇಲ್ಸ್ ದೇರೆಬೈಲ್, ಕರ್ನಾಟಕ ಬ್ಯಾಂಕ್, ಭಾರತ್ ಮಾಲ್, ಬಿಜೈನಿಂದ ಕದ್ರಿ ದೇವಸ್ಥಾನ ರಸ್ತೆ ಮಾರ್ಗವಾಗಿ, ಮಲ್ಲಿಕಟ್ಟೆ ಭಾರತ್ ಬೀಡಿ, ಕಂಕನಾಡಿ, ವೆಲೆನ್ಸಿಯಾ, ಮಂಗಳಾದೇವಿ, ಫಾರಂ ಮಾಲ್, ಕ್ಲಾಕ್ ಟವರ್ ಆಗಿ ವೆಂಕಟ್ರಮಣ ದೇವಸ್ಥಾನದ ಬಳಿಯಿಂದ ಕ್ಷೇತ್ರಕ್ಕೆ ಹಿಂತಿರುಗಲಿದೆ.

ಮ್ಯಾರಥಾನ್ನಲ್ಲಿ ಭಾಗವಹಿಸುವವರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಸ್ವಯಂಸೇವಕರ ಜತೆಗೆ, ಫಿಸಿಯೋತೆರಪಿಸ್ಟ್ ಗಳು, ಆ್ಯಂಬುಲೆನ್ಸ್ ಗಳನ್ನು ನಿಗದಿತ ಸ್ಥಳಗಳಲ್ಲಿ ನಿಯೋಜಿಸಲಾಗಿರುತ್ತದೆ. ಮ್ಯಾರಥಾನ್ನಲ್ಲಿ ಭಾಗವಹಿಸುವವರಿಗೆ ಲೊಕೇಷನ್ ದೃಷ್ಟಿಯಿಂದ ಮೈಕ್ರೋ ಚಿಪ್ಗಳನ್ನು ನೀಡಲಾಗುತ್ತದೆ. ಭಾಗವಹಿಸುವ ಎಲ್ಲರಿಗೂ ಪದಕ ಹಾಗೂ ಪ್ರಮಾಣ ಪತ್ರ, ಟೀ ಶರ್ಟ್ ಗಳನ್ನು ಒದಗಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಈಗಾಗಲೇ 1200ರಷ್ಟು ಮಂದಿ ನೋಂದಣಿ ಮಾಡಿಕೊಂಡಿದ್ದು, ಸ್ಥಳದಲ್ಲೇ ನೋಂದಣಿಗೂ ಅವಕಾಶವಿರಲಿದೆ. ಸುಮಾರು 2000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸಹಿತ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ರಕ್ಷಿತ್, ಜಯರಾಂ, ಶಾಮಸುಂದರ್, ರಾಜೇಶ್, ರವಿ, ಧನರಾಜ್, ಸುಖ್ ಪಾಲ್ ಪೊಳಲಿ, ರಕ್ಷಿತ್ ಉಪಸ್ಥಿತರಿದ್ದರು.
Mangalore Dasara 2024, 21 kms Half Marathon on October 6th to be held said Padmaraj R, Treasurer of the Temple Committee
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm